ETV Bharat / state

ಪೊಲೀಸ್​ ಇಲಾಖೆಗೂ ಅಂಟಿದ ಸೋಂಕು; ಹೆಚ್ಚಿದ ಆತಂಕ - police department of bangalore

ಕೆ.ಪಿ‌ ಅಗ್ರಹಾರ ಠಾಣೆಯ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದ್ರ ಜೊತೆಗೆ ಚಂದ್ರ ಲೇಔಟ್‌ ಪೊಲೀಸ್‌ ಇನ್ಸ್‌ಪೆಕ್ಟರ್ ಬ್ರಜೇಷ್ ಅವರಿಗೂ ಕೋವಿಡ್‌ ಬಾಧಿಸಿದೆ.

corona for staff of police department in bangalore
ಪೊಲೀಸ್​ ಇಲಾಖೆಗೂ ಅಂಟಿದ ಸೋಂಕು!
author img

By

Published : Apr 16, 2021, 12:38 PM IST

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತಿರುವ ಪೊಲೀಸ್​​ ಸಿಬ್ಬಂದಿಗೂ ಸೋಂಕು ತೊಂದರೆ ತಪ್ಪಿಲ್ಲ.

ಕೆ.ಪಿ‌ ಅಗ್ರಹಾರ ಠಾಣೆಯ 10 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ಸ್‌ಪೆಕ್ಟರ್ ಸದಾನಂದ, ಸಬ್ ಇನ್ಸ್‌ಪೆಕ್ಟರ್ ರವಿ ಮಡಿವಾಳ್ ಸೇರಿದಂತೆ ಆರು ಜನ ಪೊಲೀಸ್‌ ಕಾನ್ಸ್‌ಟೇಬಲ್‌ಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಚಂದ್ರಾಲೇಔಟ್‌ ಠಾಣೆ ಇನ್ಸ್‌ಪೆಕ್ಟರ್ ಬ್ರಜೇಷ್ ಮ್ಯಾತ್ಯುಗೂ ಸೋಂಕು ತಗುಲಿದೆ.

ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಬೇಡ: ಶ್ರೀರಾಮುಲು

ಇತ್ತೀಚೆಗೆ ಅರೆಸ್ಟ್ ಮಾಡಿದ್ದ ಕಳ್ಳನಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ, ಮಾಗಡಿ ರಸ್ತೆ ಪೊಲೀಸ್ ಠಾಣೆ ಸಿಬ್ಬಂದಿಯಲ್ಲಿಯೂ ಕೊರೊನಾ ಆತಂಕ ಶುರುವಾಗಿದೆ. ಈ ಮೊದಲು ಬೈಕ್ ಕಳ್ಳತನ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು.‌ ಮೂರು ದಿನಗಳ ಕಾಲ ಬಂಧನದಲ್ಲಿಟ್ಟು ಕಳ್ಳತನ ಮಾಡಿದ್ದ 2 ಬೈಕ್ ಹಾಗೂ 310 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ಕೋರ್ಟ್​ಗೆ ಹಾಜರುಪಡಿಸುವ ಮುನ್ನ ಕೊರೊನಾ ಟೆಸ್ಟ್ ನಡೆಸಿದಾಗ ಆರೋಪಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.