ಬೆಂಗಳೂರು: ಅಡಿಕೆ ವ್ಯಾಪಾರಿ ಸಂಸ್ಥೆಯ ವ್ಯಾಪಾರಿಯಿಂದ 26.5 ಲಕ್ಷ ರೂಪಾಯಿ ವಸೂಲಿ ಮಾಡಿ ಸಿಟಿ ಮಾರ್ಕೆಟ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಇಬ್ಬರು ಆರೋಪಿಗಳಿಗೆ ಕೊರೊನಾ ವಕ್ಕರಿಸಿದೆ.
ತುಮಕೂರು ಮೂಲದ ವ್ಯಾಪಾರಿಯಿಂದ ಹಣ ಲಪಟಾಯಿಸಿದ ಪ್ರಕರಣದ ಆರೋಪಿಗಳಾದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯ ಪಿಎಸ್ಐ ಜೀವನ್ ಕುಮಾರ್ ಹಾಗೂ ಮತ್ತೊಬ್ಬ ಆರೋಪಿಯಾಗಿರುವ ಅವರ ಮಾವ ಜ್ಞಾನಪ್ರಕಾಶ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ವಾರಂಟೈನ್ಗೊಳಪಡಿಸಲಾಗಿದೆ.
ತುಮಕೂರು ಮೂಲದ ವ್ಯಾಪಾರಿ ಮೋಹನ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಶಿವಕುಮಾರಸ್ವಾಮಿ ನಗರ ಕುಂಬಾರಪೇಟೆಯಲ್ಲಿ ಭರತ್ ಎಂಬುವರ ಬಳಿ 26.5 ಲಕ್ಷ ಹಣ ತೆಗೆದುಕೊಂಡು ಬರುವಂತೆ ಸೂಚಿದ್ದರು. ಇದರಂತೆ ಹಣ ತೆಗೆದುಕೊಂಡು ಹೋಗುವಾಗ ಪಿಎಸ್ಐ ಜೀವನ್ ಕುಮಾರ್ ಮಾವ ಜ್ಞಾನಪ್ರಕಾಶ್ ಜೊತೆ ಶಿವಕುಮಾರ್ ಎಂಬುವರನ್ನು ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿ ಹಣ ಲಪಟಾಯಿಸಿದ್ದರು.