ಬೆಂಗಳೂರು: ನಗರದ ಭೂಮಿಕಾ ಲೇಔಟ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೊರೊನಾ ಭಯ ಹುಟ್ಟಿಸಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದಾನೆ. ಇಂದು ಭೂಮಿಕಾ ಲೇಔಟ್ನಲ್ಲಿ ಪ್ರತ್ಯಕ್ಷವಾಗಿರುವ ಆ ವ್ಯಕ್ತಿ ಅಲ್ಲಿಯೇ ಉಳಿದುಕೊಂಡಿದ್ದಾನೆ. ಮಹಾರಾಷ್ಟ್ರದಿಂದ ಬಂದಿದ್ದು, ಕೋಲ್ಕತ್ತಾದಿಂದ ಬಂದಿದ್ದು ಎಂದು ಹೇಳುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದು, ಅಲ್ಲಿನ ಜನರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಇನ್ನು ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಹೇಳಿ ಹೋಗಿದ್ದಾರೆ. ಅದರೆ ಆ ವ್ಯಕ್ತಿಯು ನನ್ನ ಇಬ್ಬರು ಸ್ನೇಹಿತರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನನಗೂ ಇವತ್ತು ಟೆಸ್ಟ್ ಮಾಡಿದ್ದಾರೆ. ಅದಕ್ಕೆ ನಾನು ಇಲ್ಲಿಗೆ ಓಡಿ ಬಂದುಬಿಟ್ಟೆ ಎಂದು ಹೇಳುತ್ತಿದ್ದಾನೆ. ಇದರಿಂದಾಗಿ ಅಲ್ಲಿನ ಜನರು ಭಯಭೀತರಾಗಿದ್ದು, ಈ ಕುರಿತು ಅಧಿಕಾಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.