ಟಟಬೆಂಗಳೂರು: ಕೊರೊನಾ ಎಫೆಕ್ಟ್ ಹಿನ್ನೆಲೆ ಸಿಎಂ ಬಿಎಸ್ವೈ ವಿರುದ್ಧ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಭೀತಿ ದಿನೇ ದಿನೆ ಹೆಚ್ಚಾಗ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಶಾಪಿಂಗ್ ಮಾಲ್ಗಳು, ಮದುವೆ ಸಮಾರಂಭದಲ್ಲಿ ಜನ ಸೇರಬಾರದೆಂದು ಆದೇಶ ಹೊರಡಿಸಿದೆ. ಹೀಗಾಗಿ ಬಹುತೇಕ ಕಡೆ ನಿಷೇಧ ಜಾರಿಯಾಗಿದೆ, ಆದರೆ ಬಿಎಸ್ವೈ ಇದನ್ನ ಉಲ್ಲಂಘನೆ ಮಾಡಿ ಬೆಳಗಾವಿಯ ಎಂಎಲ್ಸಿ ಮಹಂತೇಶ್ ಕವಟಗಿಮಠ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಇನ್ನು ಅಲ್ಲಿ ನೂರಕ್ಕೂ ಜಾಸ್ತಿ ಜನ ಸೇರಿದ್ದರು. ಹೀಗಾಗಿ ಇವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇವರೇ ಹೇಳಿ ಇದೀಗ ಇವರೇ ತಪ್ಪು ಮಾಡಿದ್ದಾರೆ. ಸರ್ಕಾರವೇ ಹೇಳಿದಂತೆ ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಸೆಕ್ಷನ್ 188 ರ ಅಡಿ ಕ್ರಮ ತೆಗೆದುಕೊಳ್ಳಬಹುದು. ಆದರೆ ಇದೀಗ ಸಿಎಂ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ದೂರಿನಲ್ಲಿ ತಿಳಿಸಿದ್ದಾರೆ.