ETV Bharat / state

ಬೆಂಗಳೂರಿನ ಮತ್ತೊಂದು ಸ್ಲಂನಲ್ಲಿ ಕೊರೊನಾ ದೃಢ... ವರದಿ ಬರುವ ಮುನ್ನವೇ ಮನೆ ಸೇರಿದ್ದ ಸೋಂಕಿತರು - Corona in Bengaluru

ಬೆಂಗಳೂರಿನ ಕೊಳಗೇರಿಯಲ್ಲಿ ವರದಿ ಬರುವ ಮುನ್ನವೇ ಈ ಇಬ್ಬರು ತಮ್ಮ ಮನೆಗೆ ತೆರಳಿದ್ದರು. ಇದೀಗ ಅವರ ವರದಿ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Corona
ಕೊರೊನಾ
author img

By

Published : Jun 4, 2020, 3:34 PM IST

ಬೆಂಗಳೂರು: ಜೆಪಿ ನಗರದ ರಾಗಿಗುಡ್ಡ ಸಮೀಪವಿರುವ ಸ್ಲಂನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರು ಇತ್ತೀಚೆಗೆ ದೆಹಲಿಯಿಂದ ವಾಪಸಾಗಿದ್ದರು ಎಂದು ತಿಳಿದುಬಂದಿದೆ.

ದೆಹಲಿಯಿಂದ ರೈಲಿನ ಮೂಲಕ ಬಂದ ತಾಯಿ ಹಾಗೂ ಮಗನನ್ನು ಹೆಬ್ಬಾಳದ ಹಾಸ್ಟೆಲ್ ನಲ್ಲಿ ಏಳು ದಿನ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್​​ ಅವಧಿ ಮುಗಿಯುವ ವೇಳೆಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ವರದಿ ಬರುವ ಮುನ್ನವೇ ಈ ಇಬ್ಬರು ತಮ್ಮ ಮನೆಗೆ ತೆರಳಿದ್ದರು. ಇದೀಗ ವರದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿಯಿಂದ ಬಂದ ತಾಯಿ ಮತ್ತು ಮಗ ಕ್ವಾರಂಟೈನ್​ನಲ್ಲಿ ಇರುವ ವೇಳೆ ಸೋಂಕಿನ ಲಕ್ಷಣಗಳು ಇರಲಿಲ್ಲ, ಆದರೆ ವರದಿ ಬಂದ ನಂತರ ಕೊರೊನಾ ಇರುವುದು ಧೃಢವಾಗಿದೆ. ಆದ್ದರಿಂದ ಈ ಇಬ್ಬರನ್ನೂ ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ವಲಯದ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.