ಬೆಂಗಳೂರು: ಹಿರಿಯಾಧಿಕಾರಿಗಳ ಸೂಚನೆ ಮೇರೆಗೆ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಕೆಲಸ ನಿರ್ವಹಣೆ ಮಾಡ್ತಿದ್ರು ಕೂಡ ಕೊರೊನಾ ಮಹಾಮಾರಿ ಬಿಟ್ಟು ಬಿಡದೆ ಪೊಲೀಸ್ ಸಿಬ್ಬಂದಿಯ ಬೆನ್ನೇರುತ್ತಲೇ ಇದೆ. ಮೊದ ಮೊದಲು ಆರೋಪಿಗಳಿಂದ ಸೋಂಕಿಗೆ ತುತ್ತಾದ ಪೊಲೀಸರು, ನಂತರ ಸಣ್ಣ ಪುಟ್ಟ ಅಪರಾಧಗಳ ತನಿಖೆಗೆ ಮುಂದಾಗಿದ್ದರು. ಆದರೂ ಕೂಡಾ ಸೋಂಕು ಹೆಚ್ಚಳವಾಗುತ್ತಲೇ ಸಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಪಶ್ಚಿಮ ವಿಭಾಗದಲ್ಲಿ ಇಂದು 3 ಪ್ರಕರಣ ಪತ್ತೆಯಾಗಿದ್ದು, ಒಟ್ಟು 73 ಪ್ರಕರಣ ದಾಖಲಾಗಿವೆ. ಇದರಲ್ಲಿ 36 ಜನ ಬಿಡುಗಡೆಯಾಗಿದ್ದರೆ, 37 ಪ್ರಕರಣಗಳು ಸಕ್ರಿಯವಾಗಿವೆ.
2. ಇಂದು ಉತ್ತರ ವಿಭಾಗದಲ್ಲಿ 3 ಪ್ರಕರಣ ದಾಖಲಾಗಿದ್ದು, ಒಟ್ಟು 16 ಕೇಸ್ ದೃಢವಾಗಿವೆ. ಇಲ್ಲಿಯವರೆಗೆ 2 ಜನ ಬಿಡುಗಡೆಯಾಗಿದ್ದು, 14 ಪ್ರಕರಣ ಸಕ್ರಿಯವಾಗಿವೆ.
3. ದಕ್ಷಿಣ ವಿಭಾಗದಲ್ಲಿ ಇಂದು 1 ಪ್ರಕರಣ ಪತ್ತೆಯಾಗಿದ್ದು, ಒಟ್ಟು 24 ಕೇಸ್ ದಾಖಲಾಗಿವೆ. 2 ಜನ ಬಿಡುಗಡೆಯಾಗಿದ್ದು, ಒಟ್ಟು 22 ಆ್ಯಕ್ಟಿವ್ ಪ್ರಕರಣಗಳಿವೆ.
4. ಕೇಂದ್ರ ವಿಭಾಗಲ್ಲಿಂದು 1 ಪ್ರಕರಣ ಪತ್ತೆಯಾಗಿದ್ದು, ಒಟ್ಟು 14 ಕೇಸ್ ದಾಖಲಾಗಿವೆ. 3 ಜನ ಬಿಡುಗಡೆಯಾಗಿದ್ದು 11 ಸಕ್ರಿಯ ಪ್ರಕರಣಗಳಿವೆ.
5. ಪೂರ್ವ ವಿಭಾಗದಲ್ಲಿ ಇಂದು 1 ಪ್ರಕರಣ ಪತ್ತೆಯಾಗಿದ್ದು, ಒಟ್ಟು 10 ಕೇಸ್ಗಳಿವೆ, 4 ಜನ ಬಿಡುಗಡೆಯಾಗಿದ್ದರೆ 6 ಕೇಸ್ ಸಕ್ರಿಯವಾಗಿವೆ.
6. ಆಗ್ನೇಯ ವಿಭಾಗದಲ್ಲಿ ಒಟ್ಟು 16 ಕೇಸ್ ಇದ್ದು, 5 ಜನ ಬಿಡುಗಡೆಯಾಗಿದ್ದಾರೆ. ಅಲ್ಲದೇ 11 ಸಕ್ರಿಯ ಪ್ರಕರಣಗಳಿವೆ.
7. ಈಶಾನ್ಯ ವಿಭಾಗದಲ್ಲಿ 3 ಕೇಸ್ ದಾಖಲಾಗಿದ್ದು, 3 ಸಕ್ರಿಯ ಪ್ರಕರಣಗಳಿವೆ.
8. ಟ್ರಾಫಿಕ್ ಆಗ್ನೆಯ ವಿಭಾಗದಲ್ಲಿಂದು 1 ಪ್ರಕರಣ ಪತ್ತೆಯಾಗಿ ಒಟ್ಟು 39 ಕೇಸ್ ದಾಖಲಾಗಿವೆ. 15 ಜನ ಬಿಡುಗಡೆಯಾಗಿದ್ದು, 24 ಆ್ಯಕ್ಟಿವ್ ಇವೆ.
9. ಟ್ರಾಫಿಕ್ ಪಶ್ಚಿಮ ವಿಭಾಗದಲ್ಲಿಂದು 2 ಪ್ರಕರಣ ಪತ್ತೆಯಾಗಿ ಒಟ್ಟು 34 ಕೇಸ್ ದಾಖಲಾಗಿವೆ. 17 ಬಿಡುಗಡೆಯಾಗಿದ್ದು 17 ಸಕ್ರಿಯ ಪ್ರಕರಣಗಳಿವೆ.
10. ಟ್ರಾಫಿಕ್ ಉತ್ತರ ವಿಭಾಗದಲ್ಲಿ 1 ಆ್ಯಕ್ಟಿವ್ ಕೇಸ್ ಇದೆ.
11. ಸಿ ಎ ಆರ್ ಹೆಡ್ ಕ್ವಾಟ್ರಸ್ನಲ್ಲಿ ಇಂದು 3 ಪ್ರಕರಣ ಪತ್ತೆಯಾಗಿದ್ದು, ಒಟ್ಟು 21 ಕೇಸ್ ದಾಖಲಾಗಿವೆ. ಇಲ್ಲಿಯವರೆಗೆ 6 ಬಿಡುಗಡೆಯಾಗಿದ್ದರೆ, 15 ಸಕ್ರಿಯವಾಗಿವೆ.
12. ಕಮಿಷನರ್ ಕಚೇರಿಯಲ್ಲಿ 8 ಕೇಸ್ ಇದ್ದು, ಈ ಪೈಕಿ 3 ಜನ ಬಿಡುಗಡೆಯಾಗಿದ್ದರೆ 5 ಸಕ್ರಿಯ ಪ್ರಕರಣಗಳಿವೆ.
13. ಸಿಸಿಬಿಯಲ್ಲಿ ಒಟ್ಟು 12 ಕೇಸ್ ಇದ್ದು, 7 ಜನ ಬಿಡುಗಡೆಯಾಗಿದ್ದು, 5 ಸಕ್ರಿಯ ಪ್ರಕರಣಗಳಿವೆ.
14. ಡಿಜಿ ಕಚೇರಿಯಲ್ಲಿ ಒಟ್ಟು 1 ಕೇಸ್ ಸಕ್ರಿಯವಾಗಿದೆ.
15. ಎಸಿಬಿಯಲ್ಲಿ 1 ಕೇಸ್ ಬಿಡುಗಡೆಯಾಗಿದೆ.
16. ಸಿಐಡಿಯಲ್ಲಿ ಇಂದು 1 ಪ್ರಕರಣ ಪತ್ತೆಯಾಗಿ ಒಟ್ಟು 5 ಕೇಸ್ ದಾಖಲಾಗಿದೆ. ಅಲ್ಲದೇ ಒಬ್ಬರು ಬಿಡುಗಡೆಯಾಗಿದ್ದು, 4 ಸಕ್ರಿಯ ಪ್ರಕರಣಗಳಿವೆ.
17. ಕೆ.ಎಸ್ ಆರ್ ಪಿ ಯಲ್ಲಿ ಒಟ್ಟು 37 ಕೇಸ್ ಇದ್ದು, 12 ಜನ ಬಿಡುಗಡೆಯಾಗಿದ್ದು, ಒಟ್ಟು 25 ಸಕ್ರಿಯ ಪ್ರಕರಣಗಳಿವೆ.
18. ವೈರ್ಲೆಸ್ ನಲ್ಲಿ ಒಂದು ಸಕ್ರಿಯ ಪ್ರಕರಣ ದಾಖಲಾಗಿದೆ. ಒಟ್ಟು 6 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಇಷ್ಟೊಂದು ಕೊರೊನಾ ಸೋಂಕು ಪತ್ತೆಯಾದ ಕಾರಣ ಒಟ್ಟು 65 ಪೊಲೀಸ್ ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿತ್ತು. ಸದ್ಯ 35 ಠಾಣೆಗಳನ್ನು ಇನ್ನೂ ಸೀಲ್ಡೌನ್ ಮಾಡಲಾಗಿದೆ. ಅಲ್ಲದೇ ಈ ಕೊರೊನಾ ಮಾರಿಯನ್ನು ಹೇಗೆ ತಡೆಗಟ್ಟವುದು ಎಂಬುದು ಇಲಾಖೆಗೆ ದೊಡ್ಡ ತಲೆನೋವಾಗಿದೆ.