ETV Bharat / state

ಅಧಿಕಾರಿಗಳಿಗೆ ಕಗ್ಗಂಟಾದ ಮಲ್ಲೇಶ್ವರಂನ ಮಹಿಳೆಯ ಕೊರೊನಾ ಪ್ರಕರಣ!! - woman from Malleswaram

ಮಹಿಳೆಯ ಮಗ, ಸೊಸೆ ಹಾಗೂ ಆಸ್ಪತ್ರೆಯ 15 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮಗನ ಮನೆಗೆ ಎರಡು ತಿಂಗಳ ಹಿಂದೆ (ಮಾರ್ಚ್ 12) ಪಶ್ಚಿಮ ಬಂಗಾಳದಿಂದ ಈ ಮಹಿಳೆ ಬಂದಿದ್ದರು. ಆದರೆ, ಕೊರೊನಾ ಯಾರಿಂದ, ಹೇಗೆ ತಗುಲಿದೆ ಎಂಬುದೇ ನಿಗೂಢವಾಗಿದೆ.

Corona case of a woman from Malleswaram
ಅಧಿಕಾರಿಗಳಿಗೆ ಕಗ್ಗಂಟಾದ ಮಲ್ಲೇಶ್ವರಂನ ಮಹಿಳೆಯ ಕೊರೊನಾ ಪ್ರಕರಣ
author img

By

Published : May 7, 2020, 3:23 PM IST

ಬೆಂಗಳೂರು : ನಗರದ ಮಲ್ಲೇಶ್ವರಂನಲ್ಲಿ 49 ವರ್ಷದ ಮಹಿಳೆಗೆ (ಪಿ-701) ಕೊರೊನಾ ಸೋಂಕು ತಗುಲಿರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಮಹಿಳೆ ಚಿಕುನ್​ ಗುನ್ಯಾ ಚಿಕಿತ್ಸೆಗೆಂದು ದಾಖಲಾಗಿದ್ದ ಯಶವಂತಪುರದಲ್ಲಿರುವ ಮಂಗಲ್ಸ್ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಯಶವಂತಪುರದಲ್ಲಿರುವ ಮಂಗಲ್ಸ್ ಆಸ್ಪತ್ರೆ ಸೀಲ್‌ಡೌನ್..

ಓದಿ: ಚಿಕುನ್ ಗುನ್ಯಾ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್

ಮಹಿಳೆಯ ಮಗ, ಸೊಸೆ ಹಾಗೂ ಆಸ್ಪತ್ರೆಯ 15 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮಗನ ಮನೆಗೆ ಎರಡು ತಿಂಗಳ ಹಿಂದೆ (ಮಾರ್ಚ್ 12) ಪಶ್ಚಿಮ ಬಂಗಾಳದಿಂದ ಈ ಮಹಿಳೆ ಬಂದಿದ್ದರು. ಆದರೆ, ಕೊರೊನಾ ಯಾರಿಂದ, ಹೇಗೆ ತಗುಲಿದೆ ಎಂಬುದೇ ನಿಗೂಢವಾಗಿದೆ.

ಪಾಲಿಕೆ ಅಧಿಕಾರಿಗಳು ಅವರ ಪ್ರಯಾಣದ ಇತಿಹಾಸ, ಅವರು ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಅವರು ವಾಸವಿದ್ದ ಮನೆಯ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ನೈರ್ಮಲ್ಯೀಕರಣ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.