ETV Bharat / state

ಬೆಂಗಳೂರಿನ ಮೇಲೆ ಕೊರೊನಾ ಕರಿಛಾಯೆ...ಇಂದು 6 ಜನರಲ್ಲಿ ಕೊರೊನಾ - bangalore latest news

ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜನರ ನಿದ್ದೆಗೆಡಿಸಿದೆ. ಸಿಲಿಕಾನ್​ ಸಿಟಿಯಲ್ಲಿ ಇಂದು 6 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

Corona among 6 people in bangalore
ಬೆಂಗಳೂರಿನ ಮೇಲೆ ಕೊರೊನಾ ಕರಿಛಾಯೆ...ಇಂದು 6 ಜನರಲ್ಲಿ ಕೊರೊನಾ
author img

By

Published : May 29, 2020, 5:21 PM IST

ಬೆಂಗಳೂರು: ಸಿಲಿಕಾನ್‌‌ ಸಿಟಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು 6 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜಾಜಿನಗರದ ಮಹಾಗಣಪತಿ ವಾರ್ಡ್​ನ‌ 23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ 9 ಮಂದಿ ಬಂದಿದ್ದು, ಕ್ವಾರಂಟೈನ್ ಮಾಡಲಾಗಿತ್ತು.‌ ಆಗ ಈತನ ಗಂಟಲು ದ್ರವ​​‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತ ಕ್ವಾರಂಟೈನಲ್ಲಿ ಇದ್ದ ಕಾರಣ ರಾಜಾಜಿನಗರವನ್ನ ಕಂಟೈನ್ಮೆಂಟ್ ಜೋನ್ ಮಾಡುವ ಪ್ರಶ್ನೆ ಬರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಕ್ವಾರಂಟೈನ್​​ನಲ್ಲಿದ್ದ 23 ವರ್ಷದ ಮಹಿಳೆಗೆ ಹಾಗೂ 4 ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದೆ ಎನ್ನಲಾಗಿದೆ. ಸದ್ಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.‌ ಇನ್ನು ದೊಮ್ಮಲೂರು, ಹಲಸೂರು, ಎಂ.ಜಿ ರಸ್ತೆಯಲ್ಲಿ ಕ್ವಾರಂಟೈನ್​​ನಲ್ಲಿ ಇದ್ದ ಮೂವರಿಗೂ ಸೋಂಕು ತಗುಲಿದ್ದು, ಹೊರ ರಾಜ್ಯ, ವಿದೇಶದಿಂದ ಬಂದವರೇ ಎಂಬ ಮಾಹಿತಿ ಪತ್ತೆಯಾಗಿಲ್ಲ.‌ ಒಟ್ಟಾರೆ, ಇಂದು 6 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಇದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.