ಬೆಂಗಳೂರು: ರಸ್ತೆ ಮೇಲೆ ಗುಂಡಿಗಳೇ ತುಂಬಿದ್ದಾಗ ಬೆಂಗಳೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ ಸರ್ಕಾರದ ಗಮನ ಸೆಳೆಯಲು ಚಂದ್ರಯಾನ ಕಾನ್ಸೆಪ್ಟ್ ತಯಾರಿಸಿ ಸಖತ್ ಸುದ್ದಿ ಆಗಿದ್ದರು. ಇದೀಗ ಬೆಂಗಳೂರಿನ ರಸ್ತೆ ಮೇಲೆ ಕೊರೊನಾ ವೈರಸ್ 3ಡಿ ಚಿತ್ರ ಬರೆದಿದ್ದಾರೆ.
ಕಲಾವಿದ ಬಾದಲ್ ನಂಜುಂಡಸ್ವಾಮಿ ಪ್ರತಿ ಬಾರಿಯು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡುವ ಸ್ಟ್ರೀಟ್ ಆರ್ಟ್ಗಳಿಗೆ ಫೇಮಸ್ ಆಗಿದ್ದು, ಈ ಬಾರಿ ಕೊರೊನಾದಿಂದ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲು 3ಡಿ ಆರ್ಟ್ ರಚಿಸಿದ್ದಾರೆ.
ಇಲ್ಲಿನ ಆರ್.ಟಿ ನಗರದ ರಸ್ತೆ ಮೇಲೆ ಬಿಡಿಸಿರುವ ಕೊರೊನಾ ಮಹಾಮಾರಿಯ ಚಿತ್ರ ಓಡಾಡುವವರ ಗಮನ ತನ್ನತ್ತ ಸೆಳೆಯುತ್ತಿದೆ. ಅಲ್ಲದೆ ಕೋವಿಡ್ ವೈರಸ್ ಬಗ್ಗೆ ಎಚ್ಚರಿಸುತ್ತಿದೆ.