ETV Bharat / state

ಜನವರಿ 18 ರಂದು ಜೆಡಿಎಸ್ ಹೊಸ ಕೋರ್ ಕಮಿಟಿ ಅಸ್ತಿತ್ವಕ್ಕೆ..! - ಜನವರಿ 18 ರಂದು ಜೆ.ಪಿ.ಭವನದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ

ಜನವರಿ 18 ರಂದು ಜೆಡಿಎಸ್ ಪಕ್ಷದ ಹೊಸ ಕೋರ್ ಕಮಿಟಿ ಅಸ್ತಿತ್ವಕ್ಕೆ ಬರಲಿದೆ. ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

monday
ಕಮಿಟಿ ಅ
author img

By

Published : Jan 16, 2021, 6:52 PM IST

ಬೆಂಗಳೂರು : ಪಕ್ಷಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಜನವರಿ 18 ರಂದು ಜೆಡಿಎಸ್ ಪಕ್ಷದ ಹೊಸ ಕೋರ್ ಕಮಿಟಿ ಅಸ್ತಿತ್ವಕ್ಕೆ ಬರಲಿದೆ. ಸಂಕ್ರಾಂತಿ ನಂತರ ಹೊಸತನದೊಂದಿಗೆ ಪಕ್ಷದ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಸಮಗ್ರ ಬದಲಾವಣೆ ತರಲು ನಾಯಕರು ಮುಂದಾಗಿದ್ದಾರೆ.

ಅದರ ಮೊದಲ ಹೆಜ್ಜೆಯಾಗಿ ಪಕ್ಷದ ಕೋರ್ ಕಮಿಟಿಯನ್ನು ಬದಲಾವಣೆ ಮಾಡಲಿದ್ದಾರೆ. ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಜನವರಿ 18ರ ಬೆಳಗ್ಗೆ 11ಕ್ಕೆ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪಕ್ಷದ ಇತರೆ ನಾಯಕರು ಭಾಗಿಯಾಗಲಿದ್ದಾರೆ.

ಸಭೆಯಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯರ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿ ಹೊಸ ಕೋರ್ ಕಮಿಟಿಯನ್ನು ರಚಿಸಲಾಗುತ್ತದೆ. ಬಳಿಕ ರಾಜ್ಯ ಘಟಕದ ಪದಾಧಿಕಾರಿಗಳ ಮರುನೇಮಕ ಮಾಡಲಾಗುತ್ತದೆ. ಕಂದಾಯ ವಿಭಾಗವಾರು, ಜಿಲ್ಲೆ ತಾಲೂಕು ಹಾಗೂ ಬೂತ್ ಮಟ್ಟದಲ್ಲೂ ಪಕ್ಷವನ್ನು ಬಲಗೊಳಿಸುವ ಉದ್ದೇಶದಿಂದ ಕೆಲವು ಪದಾಧಿಕಾರಿಗಳ ಬದಲಾವಣೆ, ಹೊಸ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.