ಬೆಂಗಳೂರು: ಮೊನ್ನೆ ಟಫ್ ಲಾಕ್ಡೌನ್ ಜಾರಿಗೊಳಿಸಿ ಸಿ ಎಂ ಅದೇಶ ಮಾಡಿದ ಬೆನ್ನಲ್ಲೇ ಪೊಲೀಸ್ ಆಯುಕ್ತರು ಸಿಟಿ ರೌಂಡ್ಸ್ ನಡೆಸಿ, ಸುದ್ದಿಗೋಷ್ಟಿಯಲ್ಲೂ ಕಠಿಣ ಕ್ರಮಗಳ ಸೂಚನೆ ನೀಡಿದ್ದರು. ಇದೀಗ ರಾಜಧಾನಿಯ ಕೆಲ ಲಾಕ್ಡೌನ್ ಘಟನೆಗಳ ಚಿತ್ರಣಗಳನ್ನು ನಿಮಗಾಗಿ ನೀಡುತ್ತಿದ್ದೇವೆ.
ಹೆಬ್ಬಾಳದಲ್ಲಿ ಪೊಲೀಸ್ ಹೈ ಅಲರ್ಟ್: ಹೆಬ್ಬಾಳದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಪ್ರತಿಯೊಂದು ವಾಹನವನ್ನು ಚೆಕ್ ಮಾಡಿ ಬಿಡುತ್ತಿದ್ದಾರೆ. ಕಾರಣಗಳನ್ನು ಹೇಳುತ್ತಿರುವ ವಾಹನ ಸವಾರರನ್ನು ಪರಿಶೀಲನೆಗೆ ಒಳಪಡಿಸಲು ಎಸಿಪಿ ನಾಗರಾಜ್ ಸ್ಥಳಕ್ಕೆ ಆಗಮಿಸಿದ್ದು, ಅವರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
10 ಗಂಟೆಯ ನಂತರವೂ ಶಿವಾಜಿನಗರ ಮಾರ್ಕೆಟ್ ಓಪನ್: 10 ಗಂಟೆ ಆದರೂ ಶಿವಾಜಿನಗರ ಮಾರ್ಕೆಟ್ ನಲ್ಲಿ ಅಂಗಡಿಗಳು ತೆರೆದಿದ್ದವು. ನಂತರ ಸೈರನ್ ಮೂಲಕ ಬಂದ ಪೊಲೀಸರು ತೆರೆದಿದ್ದ ಅಂಗಡಿ ಬಾಗಿಲನ್ನು ಮುಚ್ಚಿಸಿದರು. ಬೆಳಗ್ಗೆ 9.45 ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಕೊಟ್ಟ ಡೆಡ್ಲೈನ್ ಮೀರಿದ ಅಂಗಡಿ ಮಾಲೀಕರು ಮತ್ತು ಜನರಿಗೆ ಎಚ್ಚರಿಕೆ ನೀಡಿ, ಎಲ್ಲ ರಸ್ತೆಗಳನ್ನ ಬಂದ್ ಮಾಡಿ ಬ್ಯಾರಿಕೇಡ್ ಹಾಕಿದರು.
ಕೊಡಿಗೇಹಳ್ಳಿ ಪೊಲೀಸರ ತಪಾಸಣೆ: ಬೆಳ್ಳಂಬೆಳಗ್ಗೆ ಕೊಡಿಗೇಹಳ್ಳಿ ಪೊಲೀಸರು ಫೀಲ್ಡ್ಗಿಳಿದು ತಪಾಸಣೆ ನಡೆಸಿದರು. ಭಾನುವಾರ ಆಗಿದ್ದರಿಂದ ವಾಹನ ಓಡಾಟ ವಿರಳವಾಗಿತ್ತು. ಸಿಬ್ಬಂದಿ ಜತೆ ಕೊಡಿಗೇಹಳ್ಳಿ ಇನ್ಸ್ಪೆಕ್ಟರ್ ಕಾರ್ಯನಿರ್ವಹಿಸಿದರು.
ಓದಿ: ಸಮಾಜದ ಗಣ್ಯರು ಸಿನಿಮಾ ಕಲಾವಿದರ ಸಹಾಯಕ್ಕೆ ಬರಬೇಕು: ಡಿಸಿಎಂ ಅಶ್ವತ್ಥ್ ನಾರಾಯಣ