ETV Bharat / state

ಬಿಬಿಎಂಪಿ ಘನತ್ಯಾಜ್ಯ ಘಟಕದಿಂದ ಕಲುಷಿತ ನೀರು ಬಿಡುಗಡೆ: ಗ್ರಾಮಸ್ಥರ ಆಕ್ರೋಶ - ಗ್ರಾಮಸ್ಥರಿಂದ ಪ್ರತಿಭಟನೆ

ಬಿಬಿಎಂಪಿಯ ಘನತ್ಯಾಜ್ಯ ಸಂಸ್ಕರಣಾ ಘಟಕ ಶುರುವಾದ ದಿನದಿಂದಲೂ ಸಹ ಸುತ್ತಮುತ್ತಲಿನ ಗ್ರಾಮದ ಜನತೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

Protest by villagers
ಬಿಬಿಎಂಪಿ ಘನತ್ಯಾಜ್ಯ ಘಟಕದಿಂದ ಕಲುಷಿತ ನೀರು
author img

By

Published : Jul 11, 2020, 10:53 PM IST

Updated : Jul 11, 2020, 10:59 PM IST

ಆನೇಕಲ್: ಬಿಬಿಎಂಪಿಯ ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ಕಲುಷಿತ ನೀರನ್ನು ಹೊರಕ್ಕೆ ಬಿಡುತ್ತಿರುವ ಪರಿಣಾಮ ದುರ್ವಾಸನೆ, ಸೊಳ್ಳೆ ಮತ್ತು ನೊಣಗಳ ಕಾಟದಿಂದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಬೆಂಗಳೂರಿನಿಂದ ಕೂಗಳತೆ ದೂರದ ಶಾಂತಿಪುರ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು, ಕೈಯಲ್ಲಿ ಪೆಟ್ರೋಲ್ ಹಿಡಿದು ರಸ್ತೆ ತಡೆ ನಡೆಸಿ, ಟೈರ್​​ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಪೋಲಿಸರು ಹಾಗೂ ಗ್ರಾಮದ ಜನರ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಈ ಸಮಸ್ಯೆ ಇದೇ ಮೊದಲೇನಲ್ಲವಾದರೂ ಗ್ರಾಮದಲ್ಲಿ ಬಿಬಿಎಂಪಿಯ ಘನತ್ಯಾಜ್ಯ ಸಂಸ್ಕರಣಾ ಘಟಕ ಶುರುವಾದ ದಿನದಿಂದಲೂ ಸಹ ಸುತ್ತಮುತ್ತಲಿನ ಗ್ರಾಮದ ಜನತೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಸಾಕಷ್ಟು ಬಾರಿ ಪ್ರತಿಭಟನೆ ಹೋರಾಟಗಳನ್ನು ಮಾಡಿದರೂ ಸಹ ಪ್ರಯೋಜನವಾಗಿಲ್ಲ. ಇಷ್ಟು ದಿನ ತ್ಯಾಜ್ಯ ವಿಂಗಡಣೆಯಿಂದ ಉತ್ಪತ್ತಿಯಾಗುವ ಕಲುಷಿತ ದ್ರವ ತ್ಯಾಜ್ಯವು ಕಾಂಪೌಂಡ್ ಹೊರಗಡೆಯಿರುವ ಗುಂಡಿ ಸೇರಿ ಬಳಿಕ ರಾಜಕಾಲುವೆ ಮೂಲಕ ಹರಿದುಬರುತ್ತಿದ್ದು ಇದರಿಂದ ಗ್ರಾಮಗಳಲ್ಲಿ ದುರ್ವಾಸನೆ ಹಾಗೂ ಸೊಳ್ಳೆ, ನೊಣಗಳ ಕಾಟದಿಂದ ಹೈರಾಣಾಗಿದ್ದರು.

ಆದರೆ ಇದೀಗ ಕಲುಷಿತ ನೀರನ್ನು ನೇರವಾಗಿ ಗ್ರಾಮಗಳಿಗೆ ಬಿಡುತ್ತಿದ್ದು, ಜನ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಜನರು ಕೊರೊನಾ ನಡುವೆ ಆತಂಕದಲ್ಲಿ ಜೀವನ ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಘನತ್ಯಾಜ್ಯ ಘಟಕದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ತ್ಯಾಜ್ಯದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರನ್ನು ಹೊರಕ್ಕೆ ಬಿಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

Last Updated : Jul 11, 2020, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.