ಬೆಂಗಳೂರು: ಬೆಲೆ ಬಾಳುವ ಮೈಸೂರು ಸಿಲ್ಕ್ ಸೀರೆಯನ್ನು ಬಾರ್ಡರ್ ಹೊಲಿಯಲು ನೀಡಿದ್ದ ವೇಳೆ ಬೆಂಕಿ ತಗುಲಿ ಹಾಳಾಗಿದ್ದನ್ನು ಪರಿಗಣಿಸಿರುವ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿದೆ.
ಬಾರ್ಡರ್ ಹೊಲಿಯಲು ನೀಡಿದ್ದ ಸೀರೆ ಹಾನಿಗೊಳಿಸಿದ್ದಕ್ಕೆ ಅರ್ಜಿದಾರರಾದ ಮಂಗಳಾ ಅವರಿಗೆ ಸೀರೆಯ ಬೆಲೆ 21 ಸಾವಿರ, ಹಾನಿಗೊಳಿಸಿದ್ದಕ್ಕೆ 5 ಸಾವಿರ ಹಾಗೂ ಕೋರ್ಟ್ ವೆಚ್ಚವಾಗಿ 5 ಸಾವಿರ ಪರಿಹಾರವಾಗಿ ನೀಡುವಂತೆ ಅಂಗಡಿ ಮಾಲೀಕರಿಗೆ ಗ್ರಾಹಕ ಆಯೋಗ ಸೂಚಿಸಿದೆ.
ವಿಚಾರಣೆ ವೇಳೆ ನ್ಯಾಯಧೀಶರ ಪತ್ನಿ 2019ರ ಆಗಸ್ಟ್ ತಿಂಗಳಿನಲ್ಲಿ ಸೀರೆ ಖರೀದಿ ಮಾಡಿದ್ದ ರೂ. 21,975 ರಶೀದಿ ಹಾಗೂ 2019ರ ಅಕ್ಟೋಬರ್ ತಿಂಗಳಿನಲ್ಲಿ ಸೀರೆಯ ಬಾರ್ಡರ್ ಹೊಲಿಯಲು ನೀಡಿದ್ದ ವೇಳೆ ಸ್ವೀಕರಿಸಿದ್ದ ರಶೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದಕ್ಕೆ ಆಕ್ಷೇಪಿಸಿದ್ದ ಅಂಗಡಿ ಮಾಲಿಕರು ರೇಷ್ಮೆ ಸೀರೆ ಬಾರ್ಡರ್ ಹೊಲಿಯಲು ಪಡೆದುಕೊಂಡಿದ್ದು ನಿಜ. ಆದರೆ, ಬಿಡುವಿಲ್ಲದ ಕಾರಣ ಅದನ್ನು ತೆರೆಯದೆ ಬೇರೆ ಬಟ್ಟೆಯೊಂದಿಗೆ ಇಡಲಾಗಿತ್ತು. ಹೊಲಿಯಲು ತೆಗೆದಾಗ ಸೀರೆಯಲ್ಲಿ ಬೆಂಕಿ ಬಿದ್ದಿರುವ ಚುಕ್ಕೆಗಳು ಕಂಡು ಬಂದಿತ್ತು. ಕೂಡಲೇ ಸಿಬ್ಬಂದಿಯು ಮಂಗಳಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಇದರಲ್ಲಿ ತಮ್ಮ ತಪ್ಪಿಲ್ಲ ಎಂದು ವಾದಿಸಿದ್ದರು.
ಆದರೆ ವಾದ ನಿರಾಕರಿಸಿರುವ ಆಯೋಗವು ಹೊಲಿಯಲು ಸ್ವೀಕರಿಸಿದ ವಸ್ತುಗಳ ಸ್ಥಿತಿಯನ್ನು ಪರಿಶೀಲಿಸುವುದು ಅಂಗಡಿಯ ಕರ್ತವ್ಯವಾಗಿತ್ತು. ಆ ಸಮಯದಲ್ಲಿ ಹಾನಿಯ ಬಗ್ಗೆ ಗಮನ ಹರಿಸದಿರುವುದು ನಿಮ್ಮಿಂದಾಗಿರುವ ನಿರ್ಲಕ್ಷ್ಯವಾಗಿದೆ. ಹೀಗಾಗಿ, ಅರ್ಜಿದಾರರಾದ ಮಂಗಳಾ ಅವರಿಗೆ ಸೀರೆಯ ವೆಚ್ಚ, ಹಾನಿ ಹಾಗೂ ದಾವೆಯ ವೆಚ್ಚ ಪಾವತಿ ಮಾಡುವಂತೆ ಸೂಚಿಸಿದೆ.
ಇದನ್ನೂ ಓದಿ: ಶನಿವಾರವೂ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸೂಚನೆ