ETV Bharat / state

ಮುಖ್ಯಮಂತ್ರಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ: ಖರೀದಿಗೆ ಜನರ ಹಿಂದೇಟು - ವಸತಿ ಯೋಜನೆಯಡಿ ಮನೆಗಳ ಖರೀದಿಗೆ ಜನರ ಹಿಂದೇಟು

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ವಸತಿ ಫ್ಲ್ಯಾಟ್‌ಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಒಂದೂವರೆ ವರ್ಷದಿಂದ ಕೇವಲ 4,127 ಬಹುಮಹಡಿ ಫ್ಲ್ಯಾಟ್‌ಗಳು ಖರೀದಿಯಾಗಿವೆ. ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಹೀಗಾಗಿ ಜನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

ವಿಧಾನಸೌಧ
ವಿಧಾನಸೌಧ
author img

By

Published : Jun 13, 2022, 7:46 PM IST

ಬೆಂಗಳೂರು: ಸರ್ಕಾರ ಬಡವರಿಗಾಗಿ ಕೈಗೆಟುಕುವ ದರದಲ್ಲಿ ಬಹುಮಹಡಿ ವಸತಿ ಸೌಕರ್ಯ ಕಲ್ಪಿಸಿದ್ದರೂ, ಅದನ್ನು ಖರೀದಿಸಲು ಜನರು ಒಲವು ತೋರುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಮತ್ತು ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ವಸತಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಒಟ್ಟು 32 ಸಾವಿರ ಮನೆಗಳನ್ನು ಮಾರಾಟಕ್ಕಿಟ್ಟಿದ್ದು, 4,127 ಪ್ಲ್ಯಾಟ್​ಗಳು ಮಾತ್ರ ಮಾರಾಟವಾಗಿವೆ.

ವಸತಿ ಇಲಾಖೆಯ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಬಡವರು, ಕಾರ್ಮಿಕರು ಹಾಗೂ ದುಡಿಯುವ ವರ್ಗದವರಿಗೆ ಅನುಕೂಲವಾಗಲೆಂದು ಕಳೆದ 6 ವರ್ಷಗಳ ಹಿಂದೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಸರ್ಕಾರಿ ಜಮೀನುಗಳಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ 46,499 ಮನೆಗಳ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 120 ಬ್ಲಾಕ್‌ಗಳಲ್ಲಿ ನಿರ್ಮಿಸಲಾಗುತ್ತಿರುವ 32,124 ಫ್ಲ್ಯಾಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಆದರೆ ಫ್ಯಾಟ್‌ಗಳನ್ನು ಖರೀದಿಸುವಲ್ಲಿ ಜನರು ಹಿಂದೇಟು ಹಾಕಿದ್ದು, ಒಂದೂವರೆ ವರ್ಷದಿಂದ ಕೇವಲ 4,127 ಬಹುಮಹಡಿ ಫ್ಲ್ಯಾಟ್‌ಗಳು ಖರೀದಿಯಾಗಿವೆ.

ಆದಾಯ ಮಿತಿ ಏರಿಸಿದ್ರೂ ಖರೀದಿಸುತ್ತಿಲ್ಲ: ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದ್ದು, ಕಾಮಗಾರಿಯೂ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ಜನರಿಗೆ ಮಾತ್ರ ಮನೆ ಖರೀದಿಗೆ ಅವಕಾಶ ನೀಡಿದ್ದರಿಂದ ಬಡಜನರು10 ಲಕ್ಷ ರೂ. ವೆಚ್ಚದ ಮನೆ ಖರೀದಿಗೆ ಮುಂದಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿಯನ್ನು 32 ಸಾವಿರದಿಂದ 1.20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿಯನ್ನು 87 ಸಾವಿರ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೂ ಬಹುಮಹಡಿ ವಸತಿ ಕಟ್ಟಡ ಕಳಪೆಯಾಗಿವೆ. ಜೊತೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಮನೆ ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಯೋಜನೆಯ ಉದ್ದೇಶವೇನು?: ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ದರದಲ್ಲಿ ಒಂದು ಲಕ್ಷ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸುವುದು. ಬೆಂಗಳೂರಿನಲ್ಲಿ (ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ) ನಿವೇಶನಗಳನ್ನು ನಿರ್ಮಿಸುವುದಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಫಲಾನುಭವಿಗಳ ಅರ್ಹತೆ ಏನು?: ಕರ್ನಾಟಕದ ನಾಗರಿಕರಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ. ಬಿಪಿಎಲ್ ಕುಟುಂಬಗಳು ಅರ್ಹರು. ಕುಟುಂಬಗಳ ವಾರ್ಷಿಕ ಆದಾಯ 87 ಸಾವಿರ ಕ್ಕಿಂತ ಕಡಿಮೆ ಇರಬೇಕೆಂದು ಈ ಹಿಂದೆ ಸೂಚಿಸಲಾಗಿತ್ತು. ಆದರೆ, ಆದಾಯದ ಮಿತಿಯನ್ನು 87 ಸಾವಿರ ರೂ.ನಿಂದ 2 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಅರ್ಜಿದಾರ ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು. ಅರ್ಜಿದಾರನಿಗೆ ಸ್ವಂತ ಮನೆ ಇದ್ದಿರಬಾರದು. ಅರ್ಜಿದಾರ ಬೇರೆ ಯಾವುದೇ ಯೋಜನೆಗಳಡಿ ಪ್ರಯೋಜನ ಪಡೆದಿರಬಾರದು.

ಇದನ್ನೂ ಓದಿ: ಕಾಶ್ಮೀರದಂತೆ ನಕಲಿ ಗಾಂಧಿ ಕುಟುಂಬಕ್ಕೂ ವಿಶೇಷ ಸವಲತ್ತು ಕೊಡಬೇಕಾ?: ಛಲವಾದಿ ವಾಗ್ದಾಳಿ

ಅರ್ಜಿ ಸಲ್ಲಿಸಲು ದಾಖಲೆ: ವಾಸಸ್ಥಳ ಪ್ರಮಾಣ ಪತ್ರ (ಐದು ವರ್ಷಗಳಿಂದ ವಾಸವಾಗಿರುವ ಕುರಿತು), ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ವಸತಿ ಇಲಾಖೆಯಿಂದ 1 ಬಿಎಚ್‌ಕೆ ಮನೆ ಮೂಲ ದರದಿಂದ ನಿರ್ಮಾಣಕ್ಕೆ 10.60 ಲಕ್ಷ ರೂ. ವೆಚ್ಚವಾಗುತ್ತದೆ. ಈ ಮನೆಗಳನ್ನು ಫಲಾನುಭವಿಗಳು ಖರೀದಿ ಮಾಡಿದಲ್ಲಿ, ಸಾಮಾನ್ಯ ವರ್ಗದವರಿಗೆ ಸರ್ಕಾರದಿಂದ 2.70 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 3.5 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. 6.50 ಲಕ್ಷ ರೂ.ಗೆ ಒಂದು ಪ್ಲ್ಯಾಟ್ ಲಭ್ಯವಿದೆ. ಖರೀದಿಗೆ ಅರ್ಜಿ ಸಲ್ಲಿಸಿದವರು ಒಂದು ಲಕ್ಷ ರೂ. ಪ್ರಾರಂಭಿಕ ಠೇವಣಿ ಇಡಬೇಕು. ಮನೆ ಹಂಚಿಕೆ ಹಕ್ಕುಪತ್ರ ತಲುಪಿದ ನಂತರ ಉಳಿದ ಹಣ ಪಾವತಿಸಬೇಕು. ಕಂತಿನ ಆಧಾರದಲ್ಲಿಯೂ ಬ್ಯಾಂಕ್‌ ಸಾಲದ ಮೂಲಕ ಪಾವತಿಸಲು ಅವಕಾಶವಿದೆ.

ವಿಧಾನಸಭೆ ಕ್ಷೇತ್ರವಾರು ಮಾರಾಟವಾದ ಪ್ಲ್ಯಾಟ್​​ಗಳೆಷ್ಟು?:

ಒಟ್ಟು ಬ್ಲಾಕ್‌ಗಳು 120, ಪ್ಲ್ಯಾಟ್​​ಗಳು 32,124 ಇದರಲ್ಲಿ 4,127 ಮಾರಾಟವಾಗಿವೆ.

ಕ್ಷೇತ್ರವಾರು ನೋಡುವುದಾದರೆ, ಬೆಂಗಳೂರು ದಕ್ಷಿಣ- 8 ಬ್ಲಾಕ್​​: 483 ಪ್ಲ್ಯಾಟ್​ಗಳು- 246 ಮಾರಾಟ.

ಆನೇಕಲ್- 16 ಬ್ಲಾಕ್​​ಗಳು, 4,044 ಫ್ಲ್ಯಾಟ್‌ಗಳಿದ್ದು, 326 ಮಾರಾಟವಾಗಿವೆ.

ಕೆ.ಆರ್.ಪುರ- 4 ಬ್ಲಾಕ್​ಗಳು, 524 ಪ್ಲ್ಯಾಟ್​ಗಳು, 265 ಮಾರಾಟ.

ದಾಸರಹಳ್ಳಿ- 1 ಬ್ಲಾಕ್, 796 ಫ್ಲ್ಯಾಟ್​​ಗಳು, 436 ಮಾರಾಟ

ಬ್ಯಾಟರಾಯನಪುರ- 1 ಬ್ಲಾಕ್, 140 ಪ್ಲ್ಯಾಟ್, 116 ಮಾರಾಟ.

ಮಹದೇವಪುರ- 9 ಬ್ಲಾಕ್, 4,199 ಪ್ಲ್ಯಾಟ್, 239 ಮಾರಾಟ

ಯಶವಂತಪುರ- 28 ಬ್ಲಾಕ್, 12,377 ಪ್ಲ್ಯಾಟ್, 1,106 ಮನೆ ಮಾರಾಟವಾಗಿವೆ.

ಯಲಹಂಕ- 53 ಬ್ಲಾಕ್, 9,561 ಪ್ಲ್ಯಾಟ್, 1,393 ಮಾರಾಟವಾಗಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.