ಬೆಂಗಳೂರು: ಲಾಕ್ಡೌನ್ ಬಿಡುವಿನಲ್ಲಿ ಸತತ 20 ದಿನದಲ್ಲಿ 16.990 ಗ್ರಾಂ ತೂಕದ ಚಿನ್ನದ ತಾಜ್ ಮಹಲ್ನನ್ನು ಅಕ್ಕಸಾಲಿಗ ನಾಗರಾಜ್ ತಯಾರಿಸಿದ್ದಾರೆ.
ಸುವರ್ಣ ತಾಜ್ ಮಹಲ್ನಲ್ಲಿ ಐ ಲವ್ ಇಂಡಿಯಾ, ಕರ್ನಾಟಕ ರತ್ನ ಡಾ. ರಾಜಕುಮರ್ ಜೊತೆಗೆ ಐ ಲವ್ ಮೋದಿ ಜೀ ಎಂದು ಕೆತ್ತಿದ್ದಾರೆ.
ಕೊರೊನಾ ವೈರಸ್ನಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ ಚಿನ್ನದ ತಾಜ್ ಮಹಲ್ ತಯಾರಿಸಿದ್ದೇನೆ, 16.990 ಗ್ರಾಂ ತೂಕ, 4 ಸೆಂ.ಮೀಟರ್ ಉದ್ದ ಹಾಗೂ 3.5 ಸೆಂ.ಮೀಟರ್ ಎತ್ತರ ಇದೆ ಎಂದು ಅಕ್ಕಸಾಲಿಗ ನಾಗರಾಜ್ ಹೇಳಿದ್ದಾರೆ.
ಈ ಹಿಂದೆ ನಾಗರಾಜ್ ವಿಶ್ವ ಕಪ್, ಚಂದ್ರಯಾನದ ಪ್ರತಿರೂಪವನ್ನು ಚಿನ್ನದಲ್ಲಿ ತಯಾರಿಸಿದ್ದರು. ಈಗ ತಾಜ್ ಮಹಲ್ ಇವರ 3ನೇ ಕಲೆಯಾಗಿದೆ.