ETV Bharat / state

ಪಿಪಿಪಿ ಮಾದರಿಯಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ: ಕೋಟ ಶ್ರೀನಿವಾಸ ಪೂಜಾರಿ

author img

By

Published : Mar 25, 2022, 11:56 AM IST

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸುವ ಸಂಬಂಧ ಸಮಾಲೋಚಕ/ತಾಂತ್ರಿಕ ಸಲಹೆಗಾರ ಸಂಸ್ಥೆಯನ್ನಾಗಿ ಮ ಇ ಅಂಡ್ ವೈ ಸಂಸ್ಥೆಯ ಸೇವೆಯನ್ನು 2.03 ಕೋಟಿ ರೂ. ವೆಚ್ಚದಲ್ಲಿ ಪಡೆಯಲು ಕೆಟಿಪಿಪಿ ಕಾಯ್ದೆ ಕಲಂ 4ಜಿ ರಡಿ ವಿನಾಯಿತಿ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ನೇಮಕ ಮಾಡಿಕೊಳ್ಳಲಾಗಿದೆ. ಇದರ ವರದಿಯನ್ನು ಸಹ ತರಿಸಿಕೊಳ್ಳಲಾಗಿದೆ. ಇದಕ್ಕಾಗಿ ಸದರಿ ಸಂಸ್ಥೆಗೆ ಇಲ್ಲಿಯವರೆಗೆ ರೂ.36.75 ಲಕ್ಷಗಳನ್ನು ಪಾವತಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಲಾಪದಲ್ಲಿ ತಿಳಿಸಿದರು.

ವಿಧಾನಪರಿಷತ್ ಕಲಾಪ
ವಿಧಾನಪರಿಷತ್ ಕಲಾಪ

ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಕಂದಾಯ ಇಲಾಖೆಯ ಆದೇಶದ ಪ್ರಕಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಸರ್ವೇ ನಂ.377 ಮತ್ತು ಇತರ ಸರ್ವೇ ನಂ.ಗಳಲ್ಲಿನ ಒಟ್ಟು 110.08 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನಪರಿಷತ್ ಕಲಾಪದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತಾದ ವಿಷಯದ ಬಗ್ಗೆ ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡರು ನಿಯಮ 72ರ ಅಡಿ ಸರ್ಕಾರದ ಗಮನ ಸೆಳೆದರು. ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ವಾರ್ತಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ಚಲನಚಿತ್ರ ನಗರಿಯನ್ನು ನಿರ್ಮಿಸಲಾಗುವುದೆಂದು ಘೋಷಿಸಲಾಗಿತ್ತು.

ಅದರಂತೆ ಕಂದಾಯ ಇಲಾಖೆಯ ಆದೇಶದ ಪ್ರಕಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಸರ್ವೇ ನಂ.377 ಮತ್ತು ಇತರ ಸರ್ವೇ ನಂ.ಗಳಲ್ಲಿನ ಒಟ್ಟು 110.08 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಮಾರುಕಟ್ಟೆ ಬೆಲೆಯ ಶೇ. 10ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಮತ್ತು ಪ್ರತಿ 2 ವರ್ಷಕ್ಕೊಮ್ಮೆ ಶೇ. 5 ರಷ್ಟು ಬೆಲೆಯನ್ನು ಹೆಚ್ಚಿಸುವುದು ಹಾಗೂ ಇತರ ಷರತ್ತುಗಳನ್ನು ವಿಧಿಸಿ ಚಿತ್ರ ನಗರಿ ಸ್ಥಾಪಿಸುವುದಕ್ಕಾಗಿ ವಾರ್ತಾ ಇಲಾಖೆಗೆ ಮಂಜೂರು ಮಾಡಲಾಗಿದೆ.

ನಂತರದಲ್ಲಿ ಚಿತ್ರ ನಗರಿಯನ್ನು ಪುವಾಸೋದ್ಯಮ ಇಲಾಖೆಯು ಅಭಿವೃದ್ಧಿಪಡಿಸುವುದರಿಂದ ನಿರ್ಮಾಣದ ಜೊತೆಗೆ ಪ್ರವಾಸೋದ್ಯಮ ಹೋಟೆಲ್​, ಮನೋರಂಜನೆ ಅಳವಡಿಸಿಕೊಂಡು ಸರ್ಕಾರದ ವತಿಯಿಂದ ಅಥವಾ ಪಿ.ಪಿ.ಪಿ. ಮಾದರಿಯಲ್ಲಿ ಚಿತ್ರನಗರಿ ಅಭಿವೃದ್ಧಿಪಡಿಸಲು ಪುವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿತ್ತು ಎಂದು ಸಚಿವರು ವಿಧಾನ ಪರಿಷತ್​​ಗೆ ವಿವರಿಸಿದರು.

ವಿಧಾನಪರಿಷತ್ ಕಲಾಪ

ಚಿತ್ರನಗರಿ ನಿರ್ಮಿಸುವ ಸಂಬಂಧ ಸಮಾಲೋಚಕ/ತಾಂತ್ರಿಕ ಸಲಹೆಗಾರ ಸಂಸ್ಥೆಯನ್ನಾಗಿ ಮ ಇ ಅಂಡ್ ವೈ ಸಂಸ್ಥೆಯ ಸೇವೆಯನ್ನು 2.03 ಕೋಟಿ ರೂ. ವೆಚ್ಚದಲ್ಲಿ ಪಡೆಯಲು ಕೆ.ಟಿ.ಪಿ.ಪಿ. ಕಾಯ್ದೆ ಕಲಂ 4ಜಿ ರಡಿ ವಿನಾಯಿತಿ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ನೇಮಕ ಮಾಡಿಕೊಳ್ಳಲಾಗಿದೆ. ಇದರ ವರದಿಯನ್ನು ಸಹ ತರಿಸಿಕೊಳ್ಳಲಾಗಿದೆ. ಇದಕ್ಕಾಗಿ ಸದರಿ ಸಂಸ್ಥೆಗೆ ಇಲ್ಲಿಯವರೆಗೆ ರೂ.36.75 ಲಕ್ಷಗಳನ್ನು ಪಾವತಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿಯನ್ನು ಬೆಂಗಳೂರಿನಲ್ಲಿ ಒಟ್ಟು 500 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಸ್ಥಾಪಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಬೆಂಗಳೂರಿನಲ್ಲಿ ಸೂಕ್ತ ಜಮೀನು ಲಭ್ಯವಾಗದ ಕಾರಣ, ಮೈಸೂರಿನಲ್ಲೇ ಚಿತ್ರನಗರಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪಿ.ಪಿ.ಪಿ. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಸದರಿ ಯೋಜನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಿಂಪಡೆಯಲಾಗಿದೆ.

ಚಿತ್ರನಗರಿಗಾಗಿ ಈಗಾಗಲೇ ಕಂದಾಯ ಇಲಾಖೆಯ ಆದೇಶದ ಪ್ರಕಾರ ಮೈಸೂರಿನಲ್ಲಿ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿರುವುದರಿಂದ ಸದರಿ ಜಮೀನನ್ನು ಉಚಿತವಾಗಿ ನೀಡುವಂತೆ ಕೋರಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಂದಾಯ ಇಲಾಖೆಯಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ವಿಚಾರ ಪ್ರಸ್ತಾಪಿಸಿದ್ದ ಜೆಡಿಎಸ್ ಸದಸ್ಯ ಮಂಜೇಗೌಡ, ಸಾಂಸ್ಕೃತಿಕ ಮತ್ತು ಅರಮನೆಗಳ ನಗರಿ ಮೈಸೂರಿನಲ್ಲಿ ಚಿತ್ರ ನಗರಿ (ಫಿಲಂ ಸಿಟಿ) ನಿರ್ಮಿಸಲು ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಘೋಷಣೆ ಮಾಡಿದ್ದರು ಮತ್ತು ಸುಮಾರು ರೂ.500 ಕೋಟಿಗಳ ಅನುದಾನವನ್ನು ಸಹ ಇಟ್ಟಿದ್ದರು.

ಆದರೆ, ಈ ಚಿತ್ರ ನಗರಿ ಯೋಜನೆಯನ್ನು ರೂಪಿಸಲು ಸರ್ಕಾರ ಇಲ್ಲಿಯ ತನಕ ವಿಳಂಬ ಮಾಡಿಕೊಂಡು ಬಂದಿದೆ. ಮೈಸೂರು ನಗರ ಪ್ರವಾಸೋದ್ಯಮ ಹಬ್ ಸಿಟಿಯಾಗಿದೆ. ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಹಬ್ಬವು ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೂಜಿಗಣ್ಣಿನಂತೆ ಸೆಳೆಯುತ್ತದೆ. ಮೈಸೂರು ಮತ್ತು ಮೈಸೂರಿನ ಸುತ್ತ ಮುತ್ತಲಿನ ಅನೇಕ ಪುವಾಸಿ ತಾಣಗಳು ಜನಮನ ಸೆಳೆಯುವುದರೊಂದಿಗೆ ವಿದೇಶಿಗರನ್ನು ಆಕರ್ಷಿಸುತ್ತಿದೆ. ಇಂತಹ ವಾತಾವರಣವಿರುವ ಮೈಸೂರಿಗೆ ಚಿತ್ರನಗರಿ ನಿರ್ಮಿತವಾದರೆ ಮೈಸೂರಿನ ಮುಕುಟಕ ಗರಿಯೇರಿಸಿದಂತಾಗುತ್ತದೆ ಎಂಬ ವಿವರ ನೀಡಿದರು.

ಇದನ್ನೂ ಓದಿ: ರಷ್ಯಾ ಉಕ್ರೇನ್​ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.