ETV Bharat / state

ಭಾರತೀಪುರ ತಿರುವು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ: ಆರಗ ಜ್ಞಾನೇಂದ್ರ - ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ

ತೀರ್ಥಹಳ್ಳಿ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವು ತಪ್ಪಿಸಿ ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಹೆದ್ದಾರಿ ಮಂತ್ರಾಲಯ ಅನುಮತಿ ನೀಡಿದೆ. ಈ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Araga jnanendra
ಆರಗ ಜ್ಞಾನೇಂದ್ರ
author img

By

Published : Mar 29, 2022, 7:45 AM IST

ಬೆಂಗಳೂರು: ಹಲವು ಅಪಘಾತಗಳಿಗೆ ಹಾಗೂ ಸಾವು - ನೋವುಗಳಿಗೆ ಕಾರಣವಾಗಿದ್ದ ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಹೆದ್ದಾರಿ ಮಂತ್ರಾಲಯ ಅನುಮತಿ ನೀಡಿದೆ.

ಅತ್ಯಾಧುನಿಕ ಮೇಲ್ಸೇತುವೆ ಕಾಮಗಾರಿಯನ್ನು 58 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅಲ್ಲದೇ ಕೇಂದ್ರ ಹೆದ್ದಾರಿ ಮಂತ್ರಾಲಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಿಂದ ಆಗುಂಬೆವರೆಗೆ 14.77 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 169-Aಗೆ ದ್ವಿಪಥ (10 ಮೀಟರ್) ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು 96.20 ಕೋಟಿ ರೂ.ಗೆ ಅನುಮೋದನೆ ನೀಡಿದೆ.

ಇದನ್ನೂ ಓದಿ: ಸರ್ಕಾರಿ ಕೋಟಾದ ಒಂದೂ ಮೆಡಿಕಲ್ ಸೀಟ್ ಲ್ಯಾಪ್ಸ್ ಆಗಲ್ಲ: ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.