ETV Bharat / state

ಮೆಕ್ಸಿಕೊದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರಿನ ಕಾನ್​ಸ್ಟೇಬಲ್ ನೇಮಕ - ಪೊಲೀಸ್ ಆಯುಕ್ತರ ಕಚೇರಿಯ ಟ್ವಿಟರ್ ವಿಭಾಗ

ಕಾನ್ಸ್​​ಟೇಬಲ್ ಲೋಕೇಶ್​ ಹೆಚ್​ ಎಂ ಬೆಂಗಳೂರು ಆಯುಕ್ತರ ಕಚೇರಿಯ ಟ್ವಿಟರ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

Constable from Bangalore selected for Indian Embassy in Mexico
ಮೆಕ್ಸಿಕೊದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಆಯ್ಕೆಯಾದ ಬೆಂಗಳೂರಿನ ಕಾನ್​ಸ್ಟೆಬಲ್
author img

By

Published : Mar 24, 2023, 3:12 PM IST

  • Heartiest congratulations to Police Constable Lokesh for being deputed to Indian Embassy, Mexico. A passionate Kannadiga upgraded himself to skills of Communication, Computers and English. In a gruelling interview, amongst Police inspectors, he was selected to serve abroad.… pic.twitter.com/JDyqJ2X9Is

    — Bhaskar Rao (@Nimmabhaskar22) March 23, 2023 " class="align-text-top noRightClick twitterSection" data=" ">

ಬೆಂಗಳೂರು: ಇನ್‌ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್​​ಟೇಬಲ್​ವೊಬ್ಬರು ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ನೇಮಕವಾಗಿದ್ದಾರೆ. ಕಾನ್ಸ್‌ಟೇಬಲ್‌ ಲೋಕೇಶ್‌ ಹೆಚ್‌.ಎಂ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಟ್ವಿಟರ್ ವಿಭಾಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ‌.

ಸಂವಹನ, ಕಂಪ್ಯೂಟರ್‌ ಮತ್ತು ಇಂಗ್ಲೀಷ್‌ನಲ್ಲಿ ಅನನ್ಯ ಕೌಶಲ ಹೊಂದಿರುವ ಇವರು ಬೆಂಗಳೂರು ನಗರ ಪೊಲೀಸ್‌ನ ಟ್ವಿಟರ್‌ ಖಾತೆಯಲ್ಲಿ ಕೊರೊನಾ ಸಂದರ್ಭದಲ್ಲಿ ನಾಗರಿಕರ ಸಂದೇಹಗಳಿಗೆ ಉತ್ತರ ಕೊಡುತ್ತ ಜನರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದರು. ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿ, ಲೋಕೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತರಾಗಿದ್ದ ವೇಳೆ ಟ್ವಿಟರ್ ವಿಭಾದಲ್ಲಿ ಲೋಕೇಶ್ ಕೆಲಸ ಮಾಡಿದ್ದರು. ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗೆ ವಿವಿಧ ಹಂತದಲ್ಲಿ ಸಂದರ್ಶನ ಎದುರಿಸಿದ್ದ ಅವರು ಅಂತಿಮವಾಗಿ‌ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾಕೂಟ: ದೊಡ್ಡಬಳ್ಳಾಪುರದ 8 ಕ್ರೀಡಾಪಟುಗಳು ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.