ETV Bharat / state

ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿಗಳ ಜೊತೆ ಡಿಕೆಶಿ ಸಭೆ

ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ‌ಆಯ್ಕೆಗಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ.

kpcc
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಚಿತ್ರ
author img

By

Published : Apr 1, 2023, 6:03 PM IST

ಬೆಂಗಳೂರು: ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ‌ಆಯ್ಕೆ ಕಗ್ಗಂಟು ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ಸಂಧಾನ ಸಭೆ ನಡೆದಿದೆ. ಬೆಂಗಳೂರಿನ ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಭಾಗವಹಿಸಿದ್ದರು. ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮನ್ವಯ ಮಾತುಕತೆ ನಡೆಸಿದ ಡಿಕೆಶಿ, ಸುದೀರ್ಘ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.

ಟಿಕೆಟ್​ ತೀರ್ಮಾನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಕೆಪಿಸಿಸಿ ಕಚೇರಿಗೆ ಆಗಮಿಸಿರುವ ಕಿಮ್ಮನೆ, ಮಂಜುನಾಥ್ ಗೌಡ ಬೆಂಬಲಿಗರು ತೀವ್ರ ಕುತೂಹಲದಿಂದ ಆಚೆಯೇ ಕಾದು ನಿಂತಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ತೀರ್ಥಹಳ್ಳಿ ಟಿಕೆಟ್ ಆಕಾಂಕ್ಷಿಗಳ ಸಂಧಾನ ಸಭೆ ನಡೆದು ಮುಕ್ತಾಯವಾಗಿದೆ. ಆದರೆ ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ.

ನನ್ನ ಡಿಮ್ಯಾಂಡ್ ನನಗೇ ಕೊಡ್ತಾರೆ: ಮೇಲ್ನೋಟಕ್ಕೆ ಕಿಮ್ಮನೆ ರತ್ನಾಕರ್​​ಗೆ ಟಿಕೆಟ್ ತಪ್ಪಿದ್ದು, ಮಂಜುನಾಥ್ ಗೌಡ ಪಾಲಿಗೆ ಟಿಕೆಟ್ ಉಳಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಭೆ ಬಳಿಕ ತೀರ್ಥಹಳ್ಳಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಗೌಡ ಮಾತನಾಡಿ, ಒಬ್ಬರಿಗೆ ವಿಧಾನಸಭೆ, ಒಬ್ಬರಿಗೆ ವಿಧಾನ ಪರಿಷತ್ ಅಂತಾ ಹೇಳಿದರು. ಇಬ್ಬರೂ ಒಗ್ಗಟ್ಟಾಗಿ ಹೋಗಿ ಎಂದಿದ್ದಾರೆ. ನನ್ನ ಡಿಮ್ಯಾಂಡ್ ನನಗೇ ಟಿಕೆಟ್ ಕೊಡ್ತಾರೆ ಎಂದುಕೊಂಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡಿ‌ ಎಂದಿದ್ದಾರೆ.

ಬಿಜೆಪಿಯನ್ನು ಸೋಲಿಸೋದು ನಮ್ಮ ಗುರಿ: ಟಿಕೆಟ್ ವಿಚಾರ ಅಧ್ಯಕ್ಷರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ನಾಲ್ಕನೇ ತಾರೀಕು ಅಭ್ಯರ್ಥಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಒಕ್ಕಲಿಗರ ಕ್ಷೇತ್ರ ಆಗಿರುವುದರಿಂದ ಡಿಕೆಶಿ ಸರ್​​ಗೆ ಬಿಟ್ಟಿದ್ದೇವೆ. ಮಂಜುನಾಥ್ ಗೌಡ್ರೇ ನೀವು ಮನೆಗೆ ಹೋಗಿ ಎಂದರೆ ಹೋಗುತ್ತೇನೆ. ಬಿಜೆಪಿಯನ್ನು ಸೋಲಿಸೋದು ನಮ್ಮ ಗುರಿ. ಈ ಸಲ ನಾವು ಗೆಲ್ಲುವುದರದಲ್ಲಿ ಅನುಮಾನ ಇಲ್ಲ ಎಂದರು.

ಎಲ್ಲಾ ಹೇಳೋಕೆ ನಾನು ಜ್ಯೋತಿಷ್ಯ ಕಲಿಬೇಕಷ್ಟೇ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನಾನು ಒಂದಲ್ಲ ಮೂರು ಮೆಟ್ಟಿಲು ಇಳಿಯೋಕೆ ರೆಡಿ. ಸಭೆಯಲ್ಲಿ ನಮ್ಮಿಬ್ಬರ ಕಡೆಯಿಂದಲೂ ಒಂದೇ ರೆಸ್ಪಾನ್ಸ್ ಬಂತು. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಒಗ್ಗಟ್ಟಾಗಿ ಕೆಲಸ ಮಾಡೋದಾಗಿ ಹೇಳಿದ್ದೇವೆ. ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಎಲ್ಲಾ ಹೇಳೋಕೆ ನಾನು ಜ್ಯೋತಿಷ್ಯ ಕಲಿಬೇಕಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.