ಬೆಂಗಳೂರು: ನೆರೆಯಿಂದ ಹಾಳಾದ ಬೆಳೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿಗೆ ಕಳುಹಿಸುವ ಮೂಲಕ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತೆಯರು ಸ್ಪೀಡ್ ಪೋಸ್ಟ್ ಮೂಲಕ ನೆರೆಯಿಂದ ಕೊಳೆತ ಬೆಳೆಗಳನ್ನು ಪ್ರಧಾನಿಗೆ ರವಾನಿಸಿದರು.
ಪ್ರಧಾನಿ ಮೋದಿಗೆ ಬೆಳೆಗಳ ರವಾನೆ ಮಾಡಿದ ನಂತರ, ಈ ಬೆಳೆಗಳ ಸ್ಥಿತಿ ನೋಡಿಯಾದರೂ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.