ETV Bharat / state

ರಮೇಶ್​ ಜಾರಕಿಹೊಳಿ ಮನೆಗೆ ನುಗ್ಗಲು ಕಾಂಗ್ರೆಸ್​ ಮಹಿಳಾ ಘಟಕ ಯತ್ನ: ಪೊಲೀಸರೊಂದಿಗೆ ಮಾತಿನ ಚಕಮಕಿ

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ವೀಣಾ ಕಾಶೆಪ್ಪನವರ್​ ಪ್ರತಿಭಟನೆಗೆ ಅವಕಾಶ ನೀಡುವಂತೆ ಕೋರಿದರು. ಆದರೆ ಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ನೀಡದಿದ್ದಾಗ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

Congress women activists protest
ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಜಾರಕಿಹೊಳಿ ಮನೆಗೆ ನುಗ್ಗಲು ಕೈ ಕಾರ್ಯಕರ್ತೆಯರ ಯತ್ನ
author img

By

Published : Mar 28, 2021, 7:50 PM IST

Updated : Mar 28, 2021, 9:31 PM IST

ಬೆಂಗಳೂರು: ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮನೆಗೆ ನುಗ್ಗಲು ಯತ್ನಿಸಿದ ಘಟನೆ ಸದಾಶಿವನಗರದಲ್ಲಿ ಇಂದು ಸಂಜೆ ನಡೆಯಿತು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್

ಮಾಜಿ ಸಚಿವ ರಮೇಶ್ ಜಾರಕಿಹೋಳಿ ಮನೆ ಸುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರೂ, ಜಾರಕಿಹೊಳಿ ವಿರುದ್ಧ ಮಹಿಳಾ ಕಾಂಗ್ರೆಸ್​ ಘಟಕದ ಸದಸ್ಯರು ಘೋಷಣೆ ಕೂಗಿದರು. ಡಿಕೆಶಿ ಬಗ್ಗೆ ಮಾತನಾಡಲು ಯಾವುದೇ ರೀತಿಯ ಯೋಗ್ಯತೆ ಇಲ್ಲ. ಅತ್ಯಾಚಾರ ಮಾಡಿ ಈಗ ದೌರ್ಜನ್ಯ ನಡೆಸುತ್ತಿದ್ದಾರೆ. ಅತ್ಯಾಚಾರಿ ರಮೇಶ್ ಜಾರಕಿಹೋಳಿ ಎಂದು ಹೇಳುತ್ತಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಜಾರಕಿಹೊಳಿ ಮನೆಗೆ ನುಗ್ಗಲು ಕೈ ಕಾರ್ಯಕರ್ತೆಯರ ಯತ್ನ

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ವೀಣಾ ಕಾಶೆಪ್ಪನವರ್ ಪ್ರತಿಭಟನೆಗೆ ಅವಕಾಶ ನೀಡುವಂತೆ ಕೋರಿದರು. ಆದರೆ ಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ನೀಡದಿದ್ದಾಗ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲೇ ಕುಳಿತ ಕಾಂಗ್ರೆಸ್​ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಗೆ ಮುಂದಾಗಿ ಹೋಳಿ ಹಬ್ಬದ ದಿನ ಕಾಮುಕನ ದಹನ ಆಗಲೇಬೇಕು ಎಂದು ಘೋಷಣೆ ಕೂಗಿದರು.

ಓದಿ: ಹೆಣ್ಣು ಮಕ್ಕಳಿಲ್ಲದ ರಮೇಶ್​ ಜಾರಕಿಹೊಳಿಗೆ ಹೆಣ್ಣಿನ ನೋವು ಅರ್ಥ ಆಗಲ್ಲ: ಪುಷ್ಪಾ ಅಮರ್ ನಾಥ್

Last Updated : Mar 28, 2021, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.