ETV Bharat / state

ಕಾಂಗ್ರೆಸ್ ಸದ್ಯದಲ್ಲೇ ಧೂಳೀಪಟ: ಪ್ರಹ್ಲಾದ್ ಜೋಶಿ - ರಾಹುಲ್ ಗಾಂಧಿ

ಕಾಂಗ್ರೆಸ್ ಈಗ ಏನೇನೋ ಗ್ಯಾರಂಟಿಗಳನ್ನು ಕೊಡುತ್ತಿದೆ. ಆದರೆ ಅಧಿಕಾರದಲ್ಲಿ ಇದ್ದಾಗ ಯಾಕೆ ಏನನ್ನೂ ಕೊಡಲಿಲ್ಲ ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

Union Minister Prahlad Joshi spoke.
ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು.
author img

By

Published : Apr 30, 2023, 8:14 PM IST

ಬೆಂಗಳೂರು: ಈ ವರ್ಷದ ಕೊನೆಯ ಹೊತ್ತಿಗೆ ರಾಜಸ್ಥಾನ, ಛತ್ತೀಸಗಢಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿಯೂ ಕಾಂಗ್ರೆಸ್ ಧೂಳೀಪಟವಾಗಲಿದೆ. ಆ ವಿದ್ಯಮಾನದ ದೃಷ್ಟಿಯಿಂದ ಕರ್ನಾಟಕದ ಚುನಾವಣೆ ಮಹತ್ವದ್ದು. ಹೀಗಾಗಿ ಬಿಜೆಪಿಗೆ ಮತ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿ ಸುಬ್ರಹ್ಮಣ್ಯ ನಗರದ ಶ್ರೀವಾಣಿ ವಿದ್ಯಾಕೇಂದ್ರ ಮತ್ತು ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲೇಶ್ವರ ಕ್ಷೇತ್ರದಲ್ಲಿ 250 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ರಾಜ್ಯದಲ್ಲಿ ಮೋದಿಯವರ ವೇಗ ಮತ್ತು ಕಲ್ಪನೆಗೆ ತಕ್ಕ ಸರಕಾರ ಇರಬೇಕು. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಬೇಕು ಎಂದು ಕೋರಿದರು.

ಕಾಂಗ್ರೆಸ್ ಈಗ ಏನೇನೋ ಗ್ಯಾರಂಟಿಗಳನ್ನು ಕೊಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಯಾಕೆ ಏನನ್ನೂ ಕೊಡಲಿಲ್ಲ. ಜನರಿಗೆ ಟೋಪಿ ಹಾಕುವುದೇ ಆ ಪಕ್ಷದ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ ಜೋಶಿ,
ರಾಹುಲ್ ಗಾಂಧಿ ಈಗ ದೇಶದ ಬಗ್ಗೆ, ರಾಮನ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ. ಆದರೆ ಹೊರದೇಶಗಳಲ್ಲಿ ಭಾರತದ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ರಾಮನ ಮೂಲವನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದ ಅಯೋಗ್ಯ ಇವರು. ಈ ದೇಶ ಅವರ ತಾತ, ಮುತ್ತಾತನ ಆಸ್ತಿಯಲ್ಲ. ಇವರು ಮಾಡಿಕೊಂಡು ಬಂದಿದ್ದೆಲ್ಲ ಬರೀ ತುಷ್ಟೀಕರಣದ ರಾಜಕಾರಣ ಎಂದು ಪ್ರಹಾರ ನಡೆಸಿದರು.

2047ರ ಹೊತ್ತಿಗೆ ಭಾರತ ನಂಬರ್ ಒನ್: ಮೋದಿಯವರು ಭಾರತವನ್ನು 2047ರ ಹೊತ್ತಿಗೆ ನಂಬರ್ ಒನ್ ಮಾಡಲು ಪಣ ತೊಟ್ಟಿದ್ದಾರೆ. ಇದು ನನಸಾಗಲು ದೇಶದಲ್ಲಿ ಕರ್ನಾಟಕವೂ ನಂಬರ್ ಒನ್ ಆಗಬೇಕು. ಒಂದು ದಿನ ಮುಸ್ಲಿಮರ ಟೋಪಿ, ಮರುದಿನ ಜನಿವಾರ ಹಾಕಿಕೊಂಡು ಹೋಗುವ ಕಾಂಗ್ರೆಸ್ಸಿನವರನ್ನು ನಂಬಿ ಹಾಳಾಗಬಾರದು ಎಂದು ಪ್ರತಿಪಾದಿಸಿದರು.

ಡಬಲ್ ಎಂಜಿನ್ ಬಿಜೆಪಿ ಸರಕಾರವು ರಾಜ್ಯದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ, ಮೂಲಸೌಲಭ್ಯ, ರಿಂಗ್ ರಸ್ತೆ, ಎಕ್ಸ್‌ಪ್ರೆಸ್ ವೇ, ವಂದೇ ಭಾರತ ಎಕ್ಸ್‌ಪ್ರೆಸ್ ಎಲ್ಲವನ್ನೂ ಮಾಡಿ ತೋರಿಸಿದೆ. ಬಿಜೆಪಿ ನೇತೃತ್ವದಲ್ಲಿ ದೇಶವು ಸ್ವಾವಲಂಬಿ ಆಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿಗೆ ಲೋಕಜನಶಕ್ತಿ ಬೆಂಬಲ- ಸಂಜಯ್ ಶರಾಫ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಲ್ಲಿ 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಪ್ರಚಾರ ನಡೆಸಲಿದೆ ಎಂದು ರಾಷ್ಟ್ರೀಯ ಲೋಕಜನಶಕ್ತಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಶರಾಫ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಸಂಜಯ್ ಶರಾಫ್ ಮಾತನಾಡಿ, ಆರ್.ಎಲ್.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್ ಪರಸ್ ಅವರ ಸೂಚನೆಯಂತೆ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುತ್ತಿಲ್ಲ. ಆದರೆ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದೇವೆ. ಬಿಜೆಪಿ ಪರ ಈಗಾಗಲೇ ಪ್ರಚಾರದಲ್ಲಿ ನಿರತರಾಗಿರುವುದಾಗಿ ಹೇಳಿದರು.

ರಾಜ್ಯ ಬಿಜೆಪಿ ನಾಯಕರ ಸಹಯೋಗ ಮತ್ತು ಸಮನ್ವಯತೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಮತಯಾಚಿಸುತ್ತಿದ್ದೇವೆ. ಬಿಜೆಪಿ ರಾಷ್ಟ್ರೀಯ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ಸದ್ಯ ಎನ್ ಡಿ ಎ ಮೈತ್ರಿಕೂಟದ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದೇವೆ. ಬಿಜೆಪಿ ರಾಷ್ಟ್ರೀಯ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ದೇಶದ ಹಿತ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರನ್ನು ಮನವೊಲಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಲೋಕಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಶಿಲ್ಪ ಬಾಬು ಮಾತನಾಡಿ ಆರ್‌ಎಲ್‌ಜೆಪಿ ಯುವಮೋರ್ಚಾ, ಮಹಿಳಾ ಮೋರ್ಚಾ, ಜನಶಕ್ತಿ ಮಸ್ದೂರ್ ಸಂಗಮ್ ಮತ್ತು ದಲಿತ ಸೇನೆಯ ವಿವಿಧ ಶಾಖೆಗಳು ಬಿಜೆಪಿ ಪರವಾಗಿ ಪ್ರಚಾರ ಕಣದಲ್ಲಿವೆ. ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಲೋಕಜನಶಕ್ತಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವುದಾಗಿ ಅವರು ಹೇಳಿದರು.

ಇದನ್ನೂಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ₹ 15 ಸಾವಿರ, ಆಶಾ ಕಾರ್ಯಕರ್ತೆಯರಿಗೆ ₹ 8 ಸಾವಿರ ವೇತನ: ಪ್ರಿಯಾಂಕಾ‌ ಗಾಂಧಿ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.