ETV Bharat / state

ಧರ್ಮದ ಹೆಸರಿನಲ್ಲಿ ಮನಸ್ಸಿಗೆ ನೋವು ಮಾಡಿಕೊಳ್ಳುವುದಕ್ಕಿಂತ.. ಹೀಗೆ ಮಾಡಿ ಅಂದರು ಡಿಕೆಶಿ..

author img

By

Published : Feb 4, 2022, 6:24 PM IST

ಮುಂಬರುವ ಚುನಾವಣೆಯಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಬಗ್ಗೆ ಕಾಂಗ್ರೆಸ್​​ ಚಿಂತನೆ ನಡೆಸಿದೆ. ಹಾಗಂತ ಹಿರಿಯರನ್ನು ನಾವು ಕಡೆಗಣಿಸುವುದಿಲ್ಲ. ಎಲ್ಲರನ್ನೂ ಪರಿಗಣಿಸಲಾಗುವುದು. ಈಗ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ..

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು : ಮುಂದಿನ ಚುನಾವಣೆಗೆ ಹೊಸ ಮುಖಗಳನ್ನು ಪರಿಚಯಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಹಾಗೆಂದು ಹಿರಿಯರನ್ನು ನಾವು ಕಡೆಗಣಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ-ಜೆಡಿಎಸ್‌ ತ್ಯಜಿಸಿ ಬಂದವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಪರಿಗಣಿಸಲಾಗುವುದು. ಈಗ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆ. ನೀವು ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಬೇಕಿದೆ.

ಪಕ್ಷ ಸೇರುವವರನ್ನು ಸೇರಿಸಿಕೊಂಡು, ಸೇರಲು ಹಿಂದೆ ಸರಿಯುವವರ ಮನವೊಲಿಸಲು ಅವಕಾಶ ಸಿಗುತ್ತದೆ. ಬಿಜೆಪಿಯವರು ಅವರದೇ ಆದ ತಂತ್ರಗಾರಿಕೆಯಲ್ಲಿ ಸದಸ್ಯತ್ವ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ.

ನೀವು ಜನರ ಹೃದಯ ಗೆದ್ದು ಅವರನ್ನು ಕಾಂಗ್ರೆಸ್‌ನತ್ತ ಕರೆತರಬೇಕು. ನಮ್ಮ ಪಕ್ಷಕ್ಕೆ ಯಾರೇ ಸೇರ್ಪಡೆಯಾಗಬೇಕಾದರೂ ಪಕ್ಷದ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಬೇಕು ಎಂದರು.

ಕಾರ್ಯಕರ್ತರ ಪಾಲಿಗೆ ಕಾಂಗ್ರೆಸ್ ಕಚೇರಿ ದೇವಾಲಯ : ಚುನಾವಣೆ ವೇಳೆ ಅಥವಾ ತುರ್ತು ಸಂದರ್ಭಗಳಲ್ಲಿ ಪಕ್ಷ ಸೇರ್ಪಡೆ ಅನಿವಾರ್ಯವಾದಾಗ ಮಾತ್ರ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಉಳಿದ ಸಂದರ್ಭಗಳಲ್ಲಿ ಸಮಿತಿ ಅನುಮತಿ ಕೊಟ್ಟ ನಂತರ ಸೇರ್ಪಡೆ ಮಾಡಿಕೊಳ್ಳಲಾಗುವುದು.

ಉತ್ತರ ಕನ್ನಡದ ನಮ್ಮ ಸ್ನೇಹಿತರು ಸಾಕಷ್ಟು ಬಾರಿ ಪಕ್ಷ ಸೇರಲು ಕಾಲಾವಕಾಶ ಕೇಳಿದರು. ಅವರ ಉತ್ಸಾಹ ನೋಡಿ ಇಂದು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನಾನು ಅಲ್ಲೇ ಬಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇನೆ ಎಂದಿದ್ದೆ. ಆದರೆ, ಅವರು ಕೆಪಿಸಿಸಿ ಕಚೇರಿಯಲ್ಲೇ ಸೇರಬೇಕು ಎಂದು ಇಂದು ಇಲ್ಲಿ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಕಚೇರಿ ಎಂದರೆ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ದೇವಾಲಯವಿದ್ದಂತೆ. ಹೀಗಾಗಿ, ಇಲ್ಲಿ ಪಕ್ಷ ಸೇರುತ್ತಿರುವುದಕ್ಕೆ ಸಂತೋಷ ಎಂದರು.

ಉತ್ತರ ಕನ್ನಡದಲ್ಲಿ ಸದ್ಯಕ್ಕೆ ಆರ್.ವಿ ದೇಶಪಾಂಡೆ ಅವರು ಮಾತ್ರ ಶಾಸಕರು. ಅವರು ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಒಬ್ಬರು ಆಪರೇಷನ್ ಕಮಲದಿಂದ ಪಕ್ಷ ತೊರೆದಿದ್ದಾರೆ. ನಾನು ಸಮೀಕ್ಷೆ ಮಾಡಿಸಿದ್ದು, ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆಯ ಸೂಚನೆಯನ್ನು ಮತದಾರರು ನೀಡಿದ್ದಾರೆ.

ನೀವ್ಯಾರು ಶಾಸಕರಾಗಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂಬ ಆಸೆಯಿಂದ ಬಂದಿದ್ದೀರಿ. ನಾನು ಗೋವಾಗೆ ಹೋಗಿದ್ದಾಗ ಅಲ್ಲಿ ನೆಲೆಸಿರುವ ನಿಮ್ಮ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿನ ಪ್ರಕೃತಿ ಹಾಗೂ ನಮ್ಮ ರಾಜ್ಯದ ಪ್ರಕೃತಿ ಒಂದೇ ರೀತಿ ಇದ್ದರೂ ನಮ್ಮವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ, ಅರಬ್ ದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಏನು ಕಡಿಮೆಯಾಗಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದಿದ್ದಾರೆ.

ಮಲೆನಾಡು-ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ : ಗೋವಾದಲ್ಲಿ ಮತದಾರರನ್ನು ಭೇಟಿ ಮಾಡಿದಾಗ ಅಲ್ಲಿರುವ ನಮ್ಮವರನ್ನು ಕೇಳಿದೆ. ಯಾಕೆ ಇಲ್ಲಿಗೆ ವಲಸೆ ಬಂದಿದ್ದೀರಿ ಎಂದು. ಆಗ ಅವರು ನಮ್ಮ ಊರಿನಲ್ಲೇ ಉದ್ಯೋಗ ಸಿಕ್ಕಿದ್ದರೆ ನಾವ್ಯಾಕೆ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೆವು. ನಮ್ಮ ಊರಿನಲ್ಲೇ ದುಡಿದು ನೆಮ್ಮದಿಯಾಗಿ ಇರುತ್ತಿದ್ದೆವು ಎಂದರು.

ಹೀಗಾಗಿ, ಕಾಂಗ್ರೆಸ್ ಪಕ್ಷ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಹಾಗೂ ಕಾರ್ಯಕ್ರಮ ರೂಪಿಸುತ್ತೇವೆ. ಗೋವಾ ಹಾಗೂ ಇತರೆ ಕಡೆಗಳಲ್ಲಿ ಯಾವ ರೀತಿ ಉದ್ಯೋಗ ಕಲ್ಪಿಸಲಾಗಿದೆ ಎಂಬುದನ್ನು ಚರ್ಚೆ ಮಾಡುತ್ತೇವೆ.

ಕಾಂಗ್ರೆಸ್ ಪಕ್ಷ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬೇಕು, ಜನರು ವಲಸೆ ಹೋಗುವುದನ್ನು ತಪ್ಪಿಸಲು ಯಾವ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಕೆಲವರಿಗೆ ಜವಾಬ್ದಾರಿ ನೀಡಿದ್ದೇನೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಯುವ ಶಕ್ತಿಯನ್ನು ನಾವು ಬೇರೆಯವರಿಗೆ ದಾನ ಮಾಡುತ್ತಿದ್ದೇವೆ. ನಮ್ಮವರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಒಡಕಿನ ದನಿ ಲಾಭವಾಗಿಸಿಕೊಳ್ಳಲು ಜೆಡಿಎಸ್‌ ತಂತ್ರ.. ಅಲ್ಪಸಂಖ್ಯಾತ ಮುಖಂಡರಿಗೆ 'ತೆನೆ' ಗಾಳ!?

ಧರ್ಮದ ಹೆಸರಲ್ಲಿ ಮನಸ್ಸಿಗೆ ನೋವುಂಟು ಮಾಡಿಕೊಳ್ಳುವುದಕ್ಕಿಂತ ನಮಗೆ ಊಟ, ಉದ್ಯೋಗ, ಆದಾಯ ತರುವ ವಿಚಾರಗಳ ಬಗ್ಗೆ ಗಮನಹರಿಸಬೇಕಿದೆ. ಕೇಂದ್ರದ ಬಜೆಟ್ ಪ್ರಕಟವಾಗಿದೆ. ಆದರೆ, ಸಾಮಾನ್ಯ ಜನರಿಗೆ ಅನುಕೂಲವಾಗುವ ಒಂದೇ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ? ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದೆ.

ಪ್ರಧಾನಿಗಳು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಕೇಂದ್ರ ಸರ್ಕಾರ ನಿಮಗೆಲ್ಲ ಸರ್ಕಾರಿ ಉದ್ಯೋಗವನ್ನೇ ನೀಡಬೇಕು ಎಂದು ಹೇಳುತ್ತಿಲ್ಲ. ಸ್ವಂತ ಉದ್ಯೋಗ ಸೃಷ್ಟಿಸಲು ಏನಾದರೂ ಕ್ರಮ ಕೈಗೊಳ್ಳಬಹುದಿತ್ತಲ್ಲವೇ? 2 ಕೋಟಿ ಉದ್ಯೋಗದಿಂದ ಈಗ 60 ಲಕ್ಷ ಉದ್ಯೋಗ ಸೃಷ್ಟಿಗೆ ಇಳಿದಿದ್ದಾರೆ.

ಮತ ಪಡೆಯುವಾಗ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಈಗ 60 ಲಕ್ಷ ಉದ್ಯೋಗ ಕೊಡುತ್ತೀವಿ ಎಂದರೆ ನಿಮಗೆ ಯುವಕರ ಮೇಲೆ ನಂಬಿಕೆ ಇಲ್ಲ, ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ ಎಂಬುದು ಗೊತ್ತಾಗುತ್ತದೆ. ಪರಿಣಾಮ ನಮ್ಮ ಯುವಕರು ಹೊರದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ನಿಮ್ಮ ಭಾಗದವರು ನಾಲ್ಕೈದು ಬಾರಿ ಸಂಸದರಾಗಿದ್ದಾರೆ. ಅವರು ನಿಮ್ಮ ಭಾಗಕ್ಕೆ ಏನಾದರೂ ಅನುದಾನ, ಯೋಜನೆ ತಂದಿದ್ದಾರಾ? ನಿಮ್ಮ ಭಾಗದ ಜನರಿಗೆ ಉದ್ಯೋಗ ಕೊಡಿಸಿದ್ದಾರಾ? ಕೇವಲ ದೇವರು, ದಿಂಡಿರು, ಸಂವಿಧಾನ ಬದಲಾವಣೆ, ಸುಟ್ಟು ಹಾಕಿ ಎನ್ನುವುದು ಬಿಟ್ಟು ಬೇರೇನಾದರೂ ಮಾಡಿದ್ದಾರಾ? ಅವರಿಗೆ ಮಾತೇ ಬಂಡವಾಳ ಎಂದು ಕಿಡಿ ಕಾರಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.