ಬೆಂಗಳೂರು: ಕರ್ನಾಟಕದ ರಾಯಚೂರಿನ ಜನತೆ ತಮ್ಮ ಜಿಲ್ಲೆಯನ್ನು ತೆಲಂಗಾಣದಲ್ಲಿ ವಿಲೀನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿಕೆಯು ವಿವಾದವನ್ನು ಸೃಷ್ಟಿಸಿದೆ. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರ ಹೇಳಿಕೆಯ ಆಧಾರದಲ್ಲಿ ತೆಲಂಗಾಣದ ಸಿಎಂ 'ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ. ನಿಮ್ಮ ಈ 'ಮೌನ', ಸಮ್ಮತಿಯ ಲಕ್ಷಣವೇ?. ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ?, ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ ಎಂದೂ ಕಾಂಗ್ರೆಸ್ ಹರಿಹಾಯ್ದಿದೆ.
-
Why did @CMofKarnataka or BJP President @nalinkateel not pull up the BJP MLA for such a statement in front of a Cabinet Minister?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 18, 2022 " class="align-text-top noRightClick twitterSection" data="
Your inaction has encouraged Telangana CM to boldly stake claim to Raichur.
This is unacceptable BJP.
Raichur belongs to & will remain in K’taka.
3/3 pic.twitter.com/4NpFL9vljp
">Why did @CMofKarnataka or BJP President @nalinkateel not pull up the BJP MLA for such a statement in front of a Cabinet Minister?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 18, 2022
Your inaction has encouraged Telangana CM to boldly stake claim to Raichur.
This is unacceptable BJP.
Raichur belongs to & will remain in K’taka.
3/3 pic.twitter.com/4NpFL9vljpWhy did @CMofKarnataka or BJP President @nalinkateel not pull up the BJP MLA for such a statement in front of a Cabinet Minister?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 18, 2022
Your inaction has encouraged Telangana CM to boldly stake claim to Raichur.
This is unacceptable BJP.
Raichur belongs to & will remain in K’taka.
3/3 pic.twitter.com/4NpFL9vljp
ಅಲ್ಲದೇ, ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕ ಶಿವರಾಜ್ ಪಾಟೀಲ್‌ರವರು ರಾಯಚೂರಿನ ಕಡೆಗಣನೆಯ ಬಗ್ಗೆ ನಿಮ್ಮದೇ ಸಚಿವರಿಗೆ ವಿವರಿಸುತ್ತಾ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಬಿಡಿ ಎನ್ನುತ್ತಾರೆ. ಇದು ನಿಮ್ಮ ಸರ್ಕಾರದ ದುರಾಡಳಿತಕ್ಕೆ ಮತ್ತು ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯಕ್ಕೆ ವ್ಯಕ್ತಪಡಿಸಿದ ಆಕ್ರೋಶವೇ?. ಅಥವಾ ಬಿಜೆಪಿ ವರ್ಸಸ್ ಬಿಜೆಪಿಯ ಮುಂದುವರೆದ ಅಧ್ಯಾಯವೇ ಎಂದು ಈ ಹಿಂದೆ ಶಿವರಾಜ್ ಪಾಟೀಲ್ ನೀಡಿದ್ದ ಹೇಳಿಕೆಯ ವಿಡಿಯೋ ತುಣುಕವನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಕಿಡಿಕಾರಿದೆ.
-
ಅಭಿವೃದ್ದಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಣಕ್ಕೆ ಆಹ್ವಾನಿಸಿದ್ದರು, ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ.
— Karnataka Congress (@INCKarnataka) August 18, 2022 " class="align-text-top noRightClick twitterSection" data="
ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ @BSBommai ಅವರೇ,
ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ? pic.twitter.com/qBOlYFA4hk
">ಅಭಿವೃದ್ದಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಣಕ್ಕೆ ಆಹ್ವಾನಿಸಿದ್ದರು, ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ.
— Karnataka Congress (@INCKarnataka) August 18, 2022
ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ @BSBommai ಅವರೇ,
ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ? pic.twitter.com/qBOlYFA4hkಅಭಿವೃದ್ದಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಣಕ್ಕೆ ಆಹ್ವಾನಿಸಿದ್ದರು, ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ.
— Karnataka Congress (@INCKarnataka) August 18, 2022
ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ @BSBommai ಅವರೇ,
ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ? pic.twitter.com/qBOlYFA4hk
ಇದಲ್ಲದೇ, ಅಭಿವೃದ್ಧಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಾಣಕ್ಕೆ ಆಹ್ವಾನಿಸಿದ್ದರು. ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ. ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ ಬೊಮ್ಮಾಯಿ ಅವರೇ?, ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ ಎಂದು ಪ್ರಶ್ನಿಸಲಾಗಿದೆ.
ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕೂಡ ಸರ್ಕಾರದ ಮೌನದ ಬಗ್ಗೆ ಟೀಕಾಪ್ರಹಾರ ಮಾಡಿದ್ದಾರೆ. ಕೆಸಿಆರ್ ಹೇಳಿಕೆಗೆ ಮುಖ್ಯಮಂತ್ರಿಗಳೇ ನಿಮ್ಮಿಂದ ಮತ್ತು ನಿಮ್ಮ ಸರ್ಕಾರದಿಂದ ಒಂದೇ ಒಂದು ಹೇಳಿಕೆ ಹೊರಬರದೇ ಇರುವುದನ್ನು ಕಂಡು ನನಗೆ ನಿರಾಶೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಒಂದೇ ವೇಳೆ ಬೆಳಗಾವಿ ಗಡಿ ವಿವಾದವಾದರೆ ಇಡೀ ಸಂಪುಟವೇ ಮುಂದೆ ಬಂದು ಸಮರ್ಥನೆಗೆ ನಿಲ್ಲುತ್ತಿತ್ತು. ಈಗ ನಮ್ಮ ಬೆಂಬಲಕ್ಕೆ ಯಾಕಿಲ್ಲ?. ಬಿಜೆಪಿ ಸರ್ಕಾರ ನಾವು ಕರ್ನಾಟಕದ ಭಾಗ ಎಂದು ಪರಿಗಣಿಸುತ್ತದೋ, ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಶಾಸಕರೇ ಕೊಟ್ಟ ಸಲಹೆ: ತೆಲಂಗಾಣಕ್ಕೆ ರಾಯಚೂರು ಸೇರಿಸಬೇಕೆಂದು ನಿಮ್ಮ ಶಾಸಕರೇ ಕೊಟ್ಟಿರುವ ಸಲಹೆ. ಅವರ ವಿರುದ್ಧ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದೂ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಸಂಪುಟದ ಸಚಿವರ ಮುಂದೆಯೇ ಇಂತಹ ಹೇಳಿಕೆ ಕೊಟ್ಟಿರುವ ಶಾಸಕರನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಯಾಕೆ ತರಾಟೆಗೆ ತೆಗೆದುಕೊಂಡಿಲ್ಲ?. ನಿಮ್ಮ ನಿಷ್ಕ್ರಿಯತೆಯೇ ತೆಲಂಗಾಣ ಸಿಎಂ ಧೈರ್ಯದಿಂದ ರಾಯಚೂರು ಬಗ್ಗೆ ಮಾತನಾಡಲು ಉತ್ತೇಜಿಸಿದೆ. ಇದನ್ನು ಒಪ್ಪಲಾಗದ ಬಿಜೆಪಿ. ರಾಯಚೂರು ಕರ್ನಾಟಕದ್ದು, ಕರ್ನಾಟಕ ಭಾಗವಾಗಿಯೇ ಉಳಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೆಸಿಆರ್ ಹೇಳಿದ್ದೇನು?: ತೆಲಂಗಾಣದಲ್ಲಿ ವಿಕಾರಾಬಾದ್ನಲ್ಲಿ ಎರಡು ದಿನಗಳ ಹಿಂದೆ ಮಾತನಾಡಿದ್ದ ಸಿಎಂ ಕೆ.ಚಂದ್ರಶೇಖರ್ ರಾವ್ ರಾಯಚೂರಿನ ಜನತೆ ನಮ್ಮನ್ನು ತೆಲಂಗಾಣದಲ್ಲಿ ವಿಲೀನ ಮಾಡಿ, ಇಲ್ಲವೇ ತೆಲಂಗಾಣದಲ್ಲಿರುವ ಯೋಜನೆಗಳನ್ನು ಇಲ್ಲಿ ಕೂಡ ಅನುಷ್ಠಾನ ಮಾಡಿ ಎಂದು ಸ್ಥಳೀಯ ಶಾಸಕರನ್ನು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ನಾವು ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.. ಸಚಿವ ಶ್ರೀರಾಮುಲು