ETV Bharat / state

ಅನರ್ಹ ಶಾಸಕ ಸೋಮಶೇಖರ್​​​​​ ವಿರುದ್ಧ ಕಾಂಗ್ರೆಸ್​​​ ಪ್ರತಿಭಟನೆ - ಹೆಚ್​.ಎಂ. ರೇವಣ್ಣ

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್​ ಪ್ರತಿಭಟನೆ
author img

By

Published : Sep 30, 2019, 6:36 PM IST

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಕನಕಪುರ ರಸ್ತೆಯ ಕೆಎಸ್​​​ಐಟಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ಸೋಮಶೇಖರ್​ ಅವರೇ ನೀವು ಕಾಂಗ್ರೆಸ್​​ ಬಿಟ್ಟು ಅನೈತಿಕವಾಗಿ ಬಿಜೆಪಿ ಜೊತೆಗೆ ಹೋಗಿದ್ದೀರಿ. ಅತೃಪ್ತರಾಗುವಂತಾದ್ದು ಏನಾಗಿತ್ತು ನಿಮಗೆ. ಕೆಪಿಸಿಸಿಯಿಂದ ನಿಮ್ಮನ್ನು ಬೆಂಗಳೂರು ನಗರ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಳಿಕ ನಿಮ್ಮನ್ನು ಶಾಸಕರನ್ನಾಗಿ ಮಾಡಲಾಗಿತ್ತು. ಇಷ್ಟೆಲ್ಲಾ ಆದರೂ ಕೂಡ ಪಕ್ಷ ಬಿಟ್ಟು ಹೋಗಿರುವುದು ಅಪರಾಧ. ಇವತ್ತು ನೀವು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಏಕವಚನದಲ್ಲಿ ಟೀಕಿಸುವುದು ಸರಿಯೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸೋಮಶೇಖರ್​ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್​.ಎಂ.ರೇವಣ್ಣ, ಬಸ್ ಏಜೆಂಟ್ ಆಗಿದ್ದ ಸೋಮಶೇಖರ್ ಅವರನ್ನು ಕರೆತಂದು ಕಾಂಗ್ರೆಸ್ ಪಕ್ಷ ಶಾಸಕರಾಗಿ ಮಾಡಿ, ಬಿಡಿಎ ಅಧ್ಯಕ್ಷರಾಗಿ ಮಾಡಲಾಯಿತು‌. ಸೋಮಶೇಖರ್ ಕಾಂಗ್ರೆಸ್​ನಿಂದ ಎಲ್ಲವನ್ನು ಪಡೆದಿದ್ದಾರೆ. ಅದರೆ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಉಪಯೋಗವಾಗಿಲ್ಲ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ. ಸೋಮಶೇಖರ್​ಗೆ ತಾಕತ್ತಿದ್ದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ವಿರುದ್ಧ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು. ತಲಘಟ್ಟಪುರ ಜನತೆ ಮುಂದಿನ ಉಪ ಚುನಾವಣೆಯಲ್ಲಿ ಖಂಡಿತ ಸೋಮಶೇಖರ್​ಗೆ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಮಾಜಿ ಸಿಎಮ್ ಸಿದ್ದರಾಮಯ್ಯ ಹಾಗೂ ಕೆಪಿಸಿಸಿಬಾಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಕನಕಪುರ ರಸ್ತೆಯ ಕೆಎಸ್ ಐಟಿ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿ ಎಸ್ ಟಿ ಸೋಮಶೇಖರ್ ವಿರುದ್ದ ಅಕ್ರೋಶವ್ಯಕ್ತಪಡಿಸಿದ್ರು.ಇನ್ನೂ ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್ ಎಮ್ ರೇವಣ್ಣ, ಹಾಗೂ ತಲಘಟ್ಟಪುರ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಸೋಮಶೇಖರ್ ವಿರುದ್ದ ಘೋಷಣೆ ಕೂಗಿದರು.

Body:ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಮಾಜಿ ಸಚಿವ ಎಚ್ ಎಮ್ ರೇವಣ್ಣ ಬಸ್ ಏಜೆಂಟ್ ಆಗಿದ್ದ ಸೋಮಶೇಖರ್ ಅವರ ಕರೆತಂದು ಕಾಂಗ್ರೆಸ್ ಪಕ್ಷ ಶಾಸಕರಾಗಿ ಮಾಡಿ, ಬಿಡಿಎ ಅಧ್ಯಕ್ಷರಾಗಿ ಮಾಡಿತು‌. ಸೋಮಶೇಖರ್ ಕಾಂಗ್ರೆಸ್ ಎಲ್ಲವನ್ನು ಪಡೆದಿದ್ದಾರೆ.ಅದ್ರೆ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಉಪಯೋಗವಾಗಿಲ್ಲಿ.ಈಗಿರುವಾಗ ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ. ಸೋಮಶೇಖರ ತಾಕತ್ತಿದ್ದರೆ ಡಿಕೆ ಶಿವಕುಮಾರ್ ಡಿಕೆ ಸುರೇಶ್ ವಿರುದ್ಧ ಮಾತನಾಡಲಿ ನೋಡೋಣ ಎಂದು ಸೋಮಶೇಖರ್ ಗೆ ಚಾಲೆಂಜ್ ಹಾಕಿದರು. ತಲಘಟ್ಟಪುರ ಜನತೆ ಮುಂದಿನ ಉಪಚುನಾವಣೆಯಲ್ಲಿ ಖಂಡಿತ ಸೋಮಶೇಖರ ಬುದ್ಧಿ ಕಲಿಸುತ್ತಾರೆ ಎಂದು ಸೋಮಶೇಖರ್ ವಿರುದ್ಧ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.