ETV Bharat / state

ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್..! - ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್,

ಮಸ್ಕಿ ವಿಧಾನಸಭೆ ಉಪಚುನಾವಣೆ ಗೆಲುವು ಹಾಗೂ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವಿನ ಹೊಸ್ತಿಲು ತಲುಪಿರುವ ಕಾಂಗ್ರೆಸ್ ಅತ್ಯಂತ ಉತ್ಸಾಹದಿಂದ ಉಪಚುನಾವಣೆಯತ್ತ ಗಮನ ಹರಿಸುತ್ತಿದೆ.

Congress preparation, Congress preparation for next by election, Congress preparation for next by election news,ಕಾಂಗ್ರೆಸ್​ ಸಜ್ಜು, ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್, ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್ ಸುದ್ದಿ,
ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್
author img

By

Published : Jun 16, 2021, 5:20 AM IST

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಬಿಜೆಪಿಯ ಮಾಜಿ ಸಚಿವ ಹಾಗೂ ಹಾನಗಲ್ ಶಾಸಕ ಸಿ.ಎಂ. ಉದಾಸಿ ಮತ್ತು ಸಿಂದಗಿ ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಎರಡೂ ಕ್ಷೇತ್ರದಲ್ಲಿ ಸೋತರೂ ಕಾಂಗ್ರೆಸ್​ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಗೆದ್ದ ಮಾತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಿಕೊಳ್ಳುವ ಉತ್ತಮ ಅವಕಾಶ ಇದೆ.

Congress preparation, Congress preparation for next by election, Congress preparation for next by election news,ಕಾಂಗ್ರೆಸ್​ ಸಜ್ಜು, ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್, ಉಪ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುತ್ತಿದೆ ಕಾಂಗ್ರೆಸ್ ಸುದ್ದಿ,
ಮಾಜಿ ಸಚಿವ ಸಿ.ಎಂ. ಉದಾಸಿ

ಇದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದಿರಲು ಕೈ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ಬಲಾಬಲ, ಅನುಕಂಪ ಇತ್ಯಾದಿಗಳ ಜತೆ ಅದೃಷ್ಟ ಪ್ರಯತ್ನಗಳೂ ಒಮ್ಮೊಮ್ಮೆ ಸಫಲತೆ ತಂದುಕೊಡುತ್ತವೆ. ಮಸ್ಕಿ ಗೆಲುವು ಹಾಗೂ ಬೆಳಗಾವಿ ಹೋರಾಟದ ಅಲೆಯಲ್ಲಿರುವ ಕಾಂಗ್ರೆಸ್ ಒಂದು ಕ್ಷೇತ್ರವನ್ನಾದರೂ ಗೆಲ್ಲುವ ತವಕದಲ್ಲಿದೆ. ಅಲ್ಲದೇ ಒಂದು ಹೆಜ್ಜೆ ಸಫಲತೆಯತ್ತ ಎನ್ನುವ ರೀತಿ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಎಂ.ಸಿ. ಮನಗೂಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಹ ಮಂತ್ರಿ ಆಗಿದ್ದವರು. ಆದರೆ ಅವರ ಪುತ್ರ ಜೆಡಿಎಸ್ ತೊರೆದು ಕೈವಶವಾಗಿದ್ದಾರೆ. ಉತ್ತಮ ರಾಜಕೀಯ ಬಲ ಹೊಂದಿರುವ ಇವರನ್ನು ಮುಂದಿಟ್ಟು ಗೆಲುವಿನ ದಾಳ ಎಸೆಯುವ ಸಿದ್ಧತೆಯನ್ನು ಕಾಂಗ್ರೆಸ್ ನಡೆಸಿದೆ.

ಸಿಂದಗಿ ಧನಾತ್ಮಕ ಅಂಶ!

ಸಿಂದಗಿ ವಿಧಾನಸಭೆ ಚುನಾವಣೆಯಲ್ಲಿ ಸ್ವಾತಂತ್ರ್ಯಾ ನಂತರ ಇದುವರೆಗೆ ನಡೆದ ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಹಾಗೂ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿವೆ. 2004 ರ ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ಎಲ್ಲಿಯೂ ಮೊದಲ ಎರಡು ಸ್ಥಾನದಲ್ಲಿ ಕಂಡು ಬಂದಿಲ್ಲ. ಜೆಡಿಎಸ್-ಬಿಜೆಪಿ ನಡುವೆ ನೇರ ಸ್ಫರ್ಧೆ ಏರ್ಪಟ್ಟಿದೆ. ಕಳೆದ 17 ವರ್ಷದಿಂದ ಬಿಜೆಪಿ-ಜೆಡಿಎಸ್ ವಶದಲ್ಲಿರುವ ಕ್ಷೇತ್ರವನ್ನು ಸೆಳೆಯುವ ಯತ್ನ ನಡೆಸಿದೆ.

ಮಾಜಿ ಸಚಿವ ಎಂ.ಸಿ. ಮನಗೂಳಿ

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಈ ಕ್ಷೇತ್ರದ ಮೂಲಕ ವಿಧಾನಸಭೆಗೆ ಆಯ್ಕೆಯಾಗಲು ಯತ್ನ ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 2008 ಹಾಗೂ 2013ರ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ರಮೇಶ್ ಭೂಸನೂರು ಕಳೆದ ಚುನಾವಣೆಯಲ್ಲಿ ಮನಗೂಳಿ ಅವರ ವಿರುದ್ಧ ಸೋತಿದ್ದಾರೆ. ಈ ಸಾರಿ ಇವರನ್ನು ಕೈ ಬಿಟ್ಟು ಲಕ್ಷ್ಮಣ್ ಸವದಿಗೆ ಬಿಜೆಪಿ ಮಣೆ ಹಾಕಿದರೆ ಬೇಸರಗೊಳ್ಳುವ ರಮೇಶ್​ಗೆ ಗಾಳ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ.

ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಈ ಹಿನ್ನೆಲೆ ರಮೇಶ್ ಭೂಸನೂರು ಅವರನ್ನೂ ಸೆಳೆದು ಹೋರಾಟವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಇದುವರೆಗೂ ಹಂತ ಹಂತವಾಗಿ ತನ್ನ ಮತ ಬ್ಯಾಂಕ್ ಕಳೆದುಕೊಳ್ಳುತ್ತಾ ಬಂದಿರುವ ಕಾಂಗ್ರೆಸ್ ಈ ಸಾರಿ ಗೆಲುವಿನ ನಗೆ ಬೀರುವ ಯತ್ನದಲ್ಲಿದೆ. ಅದಕ್ಕೆ ಯಶಸ್ಸು ಸಿಗುತ್ತಾ ಅನ್ನುವುದನ್ನು ಕಾದುನೋಡಬೇಕಿದೆ.

ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಇದುವರೆಗೂ ನಡೆದ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ ಸಾಧಿಸಿವೆ. ತಲಾ ನಾಲ್ಕು ಬಾರಿ ಗೆಲುವಿನ ನಗೆ ಬೀರಿವೆ. ಆದರೆ ಕಳೆದ ನಾಲ್ಕು ಚುನಾವಣೆಗಳನ್ನು ಗಮನಿಸಿದರೆ 2004 ರಲ್ಲಿ ಚಂದ್ರಶೇಖರ್ ಹಾಗೂ 2013ರಲ್ಲಿ ಮನೋಹರ್ ತಹಶೀಲ್ದಾರ್ ಗೆದ್ದು ಕಾಂಗ್ರೆಸ್ ಕೈ ಮೇಲಾಗಿಸಿದ್ದರೆ, 2008 ಮತ್ತು 2018ರಲ್ಲಿ ಸಿ.ಎಂ. ಉದಾಸಿ ಗೆಲುವಿನ ನಗೆ ಬೀರಿದ್ದರು.

ಕಾಂಗ್ರೆಸ್ ಕಳೆದ ಸಾರಿ ಶ್ರೀನಿವಾಸ ಮಾನೆಯನ್ನು ಕಣಕ್ಕಿಳಿಸಿತ್ತು. ಈ ಸಾರಿ ಒಬ್ಬ ಪ್ರಭಲ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಬಿಜೆಪಿಯಲ್ಲಿ ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಹಾಲಿ ಸಂಸದರಾಗಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷ ಸಿ.ಎಂ. ಉದಾಸಿ ಅವರ ಪತ್ನಿ ಇಲ್ಲವೇ ಪುತ್ರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದನ್ನು ಈಗಲೇ ನಿರ್ಧರಿಸುವುದು ಅಸಾಧ್ಯ.

ವಾರದ ಹಿಂದಷ್ಟೇ ಉದಾಸಿ ನಿಧನರಾಗಿರುವ ಹಿನ್ನೆಲೆ ಇನ್ನು ಕೆಲ ತಿಂಗಳು ಚುನಾವಣೆಗೆ ಸಮಯ ಹಿಡಿಯಲಿದೆ. ಆದರೆ ಕಾಂಗ್ರೆಸ್ ಈ ಕ್ಷೇತ್ರವನ್ನೂ ಗಂಭೀರವಾಗಿ ಪರಿಗಣಿಸಿ ತನ್ನ ಹಿಂದಿನ ವೈಭವವನ್ನು ಮತ್ತೆ ಮೆರೆಯುವ ಹಂಬಲ ಹೊಂದಿದೆ.

ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ನಿಯಾಜ್ ಶೇಖ್ ಇಂದು ಜೆಡಿಎಸ್​ಗೆ ಸೇರ್ಪಡೆಯಾಗಿ ಅಧಿಕೃತ ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ. ಆದರೆ ಇದು ಕಾಂಗ್ರೆಸ್ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು ಎಂದು ನಾಯಕರು ಹೇಳಿಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎರಡು ದಿನ ಹಿಂದಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಮುಂಬರುವ ವಿಧಾನಸಭೆ ಉಪಚುನಾಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂಬ ವಿಚಾರವೂ ಸೇರಿದೆ ಎಂಬ ಮಾತು ಕೇಳಿಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.