ETV Bharat / state

ರಾಜರಾಜೇಶ್ವರಿ ಕೈವಶವಾದರೆ ಅದು ಡಿಕೆಶಿಗೆ ದಿಗ್ವಿಜಯ!!

ರಾಜ ರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಹಿನ್ನೆಲೆ, ರಾಜ್ಯ ರಾಜಧಾನಿಯಲ್ಲಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್​​​ಗೆ ಅನುಕೂಲವಾಗಲಿದೆ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಗೆಲ್ಲುವುದು ಅನಿವಾರ್ಯವಾಗಿದೆ.

congress Plan to win in rajarajeshwari by election
ರಾಜರಾಜೇಶ್ವರಿ ಕೈವಶವಾದರೆ ಅದು ಡಿಕೆಶಿಗೆ ದಿಗ್ವಿಜಯ
author img

By

Published : Oct 29, 2020, 4:20 PM IST

ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಪಕ್ಷದವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್​​​ಗೆ ಹತ್ತು ಹಲವು ಅನುಕೂಲಗಳು ಲಭಿಸಲಿವೆ. ಹೀಗಾಗಿ ಪಕ್ಷ ಇಲ್ಲಿನ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹಲವು ಕಾರ್ಯ ಯೋಜನೆಯನ್ನು ರೂಪಿಸಿದೆ.

ಉಪಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ಹಗಲಿರುಳು ಶ್ರಮಿಸುತ್ತಿದ್ದು, ಒಂದು ಗೆಲವು ಹಲವು ಯಶಸ್ಸಿಗೆ ಪಾತ್ರವಾಗಲಿದೆ ಎಂಬ ಚಿಂತನೆಯೊಂದಿಗೆ ಪ್ರಚಾರದ ಕಣಕ್ಕಿಳಿದಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್​​​ಗೆ ಅನುಕೂಲವಾಗಲಿದೆ ಎನ್ನುವುದು ಪಕ್ಷದ ಮೊದಲ ಆದ್ಯತೆಯಾಗಿದೆ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹಾಗಾಗಿ ಇಲ್ಲಿ ಗೆದ್ದರೆ ತಮ್ಮ ಅಧ್ಯಕ್ಷಗಿರಿಯ ಶುಭಾರಂಭದ ಜೊತೆಗೆ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಡುವ ಮೂಲಕ ತಾವೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಒಕ್ಕಲಿಗ ನಾಯಕ ಎಂಬುದನ್ನು ಬಿಂಬಿಸಿಕೊಳ್ಳುತ್ತಾರೆ. ಇದು ಡಿಕೆಶಿಗೆ ಅನಿವಾರ್ಯ ಕೂಡಾ ಆಗಿದೆ.

ರಾಜರಾಜೇಶ್ವರಿ ಕೈವಶವಾದರೆ ಅದು ಡಿಕೆಶಿಗೆ ದಿಗ್ವಿಜಯ

ಹಾಗಾಗಿ ಒಕ್ಕಲಿಗ ನಾಯಕರ ದೊಡ್ಡ ತಂಡವನ್ನೇ ಕಟ್ಟಿಕೊಂಡು ಪ್ರಚಾರಕ್ಕಿಳಿದಿರುವ ಡಿಕೆ ಶಿವಕುಮಾರ್ ಅಭ್ಯರ್ಥಿಯನ್ನು ಕೂಡ ಒಕ್ಕಲಿಗ ಸಮುದಾಯದಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​​​ಗೆ ಗೆಲುವು ಸಿಕ್ಕರೆ ಅದು ಕೇವಲ ಅಭ್ಯರ್ಥಿಯ ಯಶಸ್ಸು ಮಾತ್ರವಲ್ಲದೇ, ಇಡೀ ಕಾಂಗ್ರೆಸ್ ಪಕ್ಷದ ಮಹತ್ವದ ಗೆಲುವಾಗಲಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷ ತ್ಯಜಿಸಿದ ಮುನಿರತ್ನ ವಿರುದ್ಧ ಗೆಲುವು ಸಾಧಿಸಿದಂತಾಗುತ್ತದೆ. ಜೊತೆಗೆ ತಾನು ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆದಂತೆ ಆಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಈ ಉಪಚುನಾವಣೆ ಕದನವನ್ನು ಡಿಕೆ ಸೋದರರು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಸಹಜವಾಗಿ ಅಧ್ಯಕ್ಷರಾಗಿರುವ ಶಿವಕುಮಾರ್​​ಗೆ ಗೆಲುವು ಸಾಧಿಸುವುದು ಅನಿವಾರ್ಯ ಕೂಡ ಆಗಿದೆ.

ಇನ್ನೂ, ಚುನಾವಣಾ ವೀಕ್ಷಣೆಗೆ ಒಟ್ಟು 58 ಮಂದಿ ವೀಕ್ಷಕರ ತಂಡವನ್ನು ರಚಿಸಿರುವ ಡಿಕೆ ಶಿವಕುಮಾರ್ ಇದರ ನೇತೃತ್ವವನ್ನು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದ್ದಾರೆ. ಬೆಂಗಳೂರು ನಗರದ ಪಾಲಿಗೆ ಮತ್ತೋರ್ವ ನಾಯಕ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡ ತಂಡದ ಸಮನ್ವಯಕಾರರಾಗಿದ್ದಾರೆ. ಎಂ. ಕೃಷ್ಣಪ್ಪ, ಶಿವಶಂಕರ್ ರೆಡ್ಡಿ, ಚಲುವರಾಯಸ್ವಾಮಿ ಮತ್ತಿತರ ಒಕ್ಕಲಿಗ ನಾಯಕರನ್ನು ಮುಂಚೂಣಿ ಪ್ರಚಾರಕರರಾಗಿ ನಿಯೋಜಿಸಿ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸಾಕಷ್ಟು ಪ್ರಬಲವಾಗಿದ್ದ ಜೆಡಿಎಸ್ ಪಕ್ಷದ ನಾಯಕರನ್ನು ಸಹ ಕಾಂಗ್ರೆಸ್ ಸೆಳೆದಿದೆ.

congress Plan to win in rajarajeshwari by election
ಡಿಕೆಶಿ ನೇತೃತ್ವದಲ್ಲಿ ಪ್ರಚಾರದ ಕಣಕ್ಕಿಳಿದ ಕಾಂಗ್ರೆಸ್​​

ಜೆಡಿಎಸ್​​​ನಿಂದ ರಾಜರಾಜೇಶ್ವರಿ ನಗರ ಘಟಕದ ಅಧ್ಯಕ್ಷರಾಗಿದ್ದ ಬೆಟ್ಟಸ್ವಾಮಿ ಗೌಡ, ಜೆಡಿಎಸ್​​​​​ನ ಬೆಂಗಳೂರು ನಗರ ಮಹಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಹೆಚ್. ಚಂದ್ರಶೇಖರ್ ಮತ್ತಿತರ ಅತೃಪ್ತ ನಾಯಕರನ್ನು ಉಪಚುನಾವಣೆ ಪ್ರಚಾರ ಆರಂಭವಾದ ನಂತರ ಕಾಂಗ್ರೆಸ್ ತನ್ನೆಡೆ ಸೆಳೆದಿದೆ. ಈ ನಾಯಕರು ಸಕ್ರಿಯವಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಪ್ರಚಾರದಲ್ಲಿ ತೊಡಗಿರುವುದು ಕಾಂಗ್ರೆಸ್​​​ಗೆ ಉಪಯೋಗವಾಗಿದೆ.

ಮುನಿರತ್ನ ಕ್ಷೇತ್ರದಲ್ಲಿ ಜನರು ಹಾಗೂ ಪಕ್ಷದ ಕಾರ್ಯಕರ್ತರನ್ನು ಹೆದರಿಸಿ ಬೆದರಿಸಿ ಇಟ್ಟುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರೌಡಿಸಂ ಮಾಡುತ್ತಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ಕೆಲ ದಿನಗಳ ಹಿಂದೆ ಮುನಿರತ್ನ ಬೆಂಬಲಿತ ಮಾಜಿ ಕಾರ್ಪೊರೇಟರ್​​ಗಳಾದ ವೇಲು ನಾಯ್ಕರ್, ಜಿ.ಕೆ ವೆಂಕಟೇಶ್ ಸೇರಿದಂತೆ ಮತ್ತಿತರರು ಒಂದಿಷ್ಟು ಗದ್ದಲ ನಡೆಸಿರುವ ಆರೋಪವಿದ್ದು, ಇದನ್ನು ಕೂಡ ಕಾಂಗ್ರೆಸ್ ಪ್ರಚಾರದ ತಂತ್ರಗಾರಿಕೆಗೆ ಬಳಸಿಕೊಂಡಿದೆ.

ಬಿಬಿಎಂಪಿ ಮಾಜಿ ಸದಸ್ಯರ ನಡವಳಿಕೆ ಮುನಿರತ್ನ ಕುಮ್ಮಕ್ಕಿನ ಭಾಗವಾಗಿದೆ. ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಮುನಿರತ್ನ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ಪ್ರಯತ್ನ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕರು ಮಾಡುತ್ತಿದ್ದು, ಸಾಕಷ್ಟು ಯಶಸ್ಸು ಕೂಡ ಕಂಡಿದೆ. ಮುನಿರತ್ನ ಕ್ಷೇತ್ರದಲ್ಲಿ ಸಾಕಷ್ಟು ಅಕ್ರಮಗಳನ್ನು ನಡೆಸುತ್ತಿದ್ದಾರೆ. ಹಿಂದೆ ಮಾಡಿದಂತೆ ಮತ್ತೆ ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಹಣ ನೀಡುವ ಕಾರ್ಯ ಮಾಡುತ್ತಿದ್ದಾರೆ. ಮತದಾರರಿಗೆ ಸೆಟ್ ಆಫ್ ಬಾಕ್ಸ್ ಗಳನ್ನು ನೀಡುವ ಆಮಿಷ ಒಡ್ಡಿದ್ದಾರೆ. ಕೆಲವಡೆ ಟಿವಿ, ಕಂಪ್ಯೂಟರ್ ಮಾನಿಟರ್​ಗಳನ್ನು ನೀಡಿದ್ದಾರೆ. ದಬ್ಬಾಳಿಕೆ ಜೊತೆ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದನ್ನು ಕಾಂಗ್ರೆಸ್​ ತಂತ್ರಗಾರಿಕೆಯ ಭಾಗವನ್ನಾಗಿಸಿಕೊಂಡಿದ್ದು, ಕ್ಷೇತ್ರದ ಮತದಾರರ ಮೇಲೆ ಪರಿಣಾಮ ಬೀರುವ ಮಾತುಗಳನ್ನು ಆಡುತ್ತಾ ಬಂದಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.

ಒಟ್ಟಾರೆ ಉಪಚುನಾವಣೆ ಗೆಲ್ಲಲು ಸಾಕಷ್ಟು ತಂತ್ರಗಾರಿಕೆ ರೂಪಿಸುತ್ತಿರುವ ಕಾಂಗ್ರೆಸ್ ಪಾಲಿಗೆ ರಾಜರಾಜೇಶ್ವರಿ ಒಲಿಯುತ್ತಾಳಾ ಅನ್ನೋದನ್ನು ಕಾದುನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.