ಬೆಂಗಳೂರು : ನೀವು ಅಲ್ಪಸಂಖ್ಯಾತ ಅಭ್ಯರ್ಥಿ ಇಳಿಸಿದರೆ, ನಾವು ವೋಟ್ ಹಾಕಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಹಾಗಾಗಿ, ನಾವು ಕುಪೇಂದ್ರ ರೆಡ್ಡಿ ಅವರನ್ನ ನಿಲ್ಲಿಸಿದ್ದೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಾವು ಅಭ್ಯರ್ಥಿ ಹಾಕುವಾಗ ಸೋನಿಯಾ ಗಾಂಧಿ ಕೇಳಿ ಹಾಕಿದ್ವಿ.
ದೇವೇಗೌಡರೆ ಸೋನಿಯಾ ಗಾಂಧಿ ಜೊತೆ ಮಾತನಾಡಿದ್ರು. ಆದರೆ, ಏಕಾಏಕಿ ಅವರು ನಿನ್ನೆ ಮತ್ತೊಬ್ಬ ಅಭ್ಯರ್ಥಿಯನ್ನು ಹಾಕಿದ್ದಾರೆ. ಕೋಮುವಾದಿ ಪಕ್ಷ ದೂರ ಇಡಲು ಕಾಂಗ್ರೆಸ್ ನಮಗೆ ಸಹಕಾರ ನೀಡಲಿ. ಈಗಲೂ ನಾವು ಸೋನಿಯಾ, ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ವೇಣುಗೋಪಾಲ್‌ರಿಗೆ ಮನವಿ ಮಾಡ್ತೇವೆ. ಜೆಡಿಎಸ್ ಪ್ರಾದೇಶಿಕ ಪಕ್ಷ, ಕಾಂಗ್ರೆಸ್ ಸಹಕಾರ ನೀಡಬೇಕು ಎಂದು ಹೇಳಿದರು.
ನಮ್ಮ ಬಳಿ 32 ಮತಗಳಿವೆ. ಈಗ ಮೊದಲ ಪ್ರಾಶಸ್ತ್ಯ 32ಕ್ಕೆ ಇದೆ. ಎರಡೂ ರಾಷ್ಟ್ರೀಯ ಪಕ್ಷ ಇದೆ. ಒಂದು ಕೋಮುವಾದಿ ಪಕ್ಷ. ಮತ್ತೊಂದು ಕೋಮುವಾದದ ವಿರುದ್ಧ ಇರೋ ರಾಷ್ಟ್ರೀಯ ಪಕ್ಷ. ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನ ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಬೆಂಬಲಿಸಲು ಸೋನಿಯಾ ಗಾಂಧಿ ಜೊತೆ ಚರ್ಚೆ ಮಾಡಿದ್ದೇವೆ.
ನಮ್ಮ ಕುಪೇಂದ್ರ ರೆಡ್ಡಿ ಕೂಡ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ. ಆದರೆ, ನಿನ್ನೆ ಕಾಂಗ್ರೆಸ್ ದಿಢೀರಾಗಿ ಮತಗಳಿಲ್ಲದಿದ್ದರೂ ಎರಡನೇ ಅರ್ಜಿ ಹಾಕಿದ್ದಾರೆ ಎಂದರು. ಶುಕ್ರವಾರವೇ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದಾರೆ.
ಕಾಂಗ್ರೆಸ್ ಅವರಿಗೆ ಮತ ಇಲ್ಲದಿದ್ದರೂ ಅಭ್ಯರ್ಥಿಯನ್ನು ಹಾಕಿದ್ದಾರೆ. ಜೆಡಿಎಸ್ ಮತವೇ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸೋನಿಯಾ, ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರಿಗೂ ಮನವಿ ಮಾಡ್ತೀನಿ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ. ಕೋಮುವಾದದ ಪಕ್ಷವನ್ನು ದೂರ ಇಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಓದಿ : ಜೆಡಿಎಸ್ ಪ್ರಯತ್ನಕ್ಕೆ ಸಿದ್ದರಾಮಯ್ಯ ಅಡ್ಡಿ: ಅಡ್ಡ ಮತದಾನದ ಸುಳಿವು ನೀಡಿದ ಜಮೀರ್!?