ETV Bharat / state

ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಕೈ ನಾಯಕರ ಆಕ್ರೋಶ - Bengalore political news

2008ರಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಅದು ಮತ್ತೆ ಮರುಕಳಿಸಬಹುದು ಎಂಬ ಕಾರಣಕ್ಕೆ ಮಾಧ್ಯಮಗಳನ್ನ ಹೊರಗಿಡುವ ಕೆಲಸ ಮಾಡಿರಬಹುದು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧಕ್ಕೆ ನಾಯಕರ ಆಕ್ರೋಶ
author img

By

Published : Oct 9, 2019, 8:11 PM IST

ಬೆಂಗಳೂರು: 2008ರಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಅದು ಮತ್ತೆ ಮರುಕಳಿಸಬಹುದು ಎಂಬ ಕಾರಣಕ್ಕೆ ಮಾಧ್ಯಮಗಳನ್ನ ಹೊರಗಿಡುವ ಕೆಲಸ ಮಾಡಿರಬಹುದು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧಕ್ಕೆ ನಾಯಕರ ಆಕ್ರೋಶ

ಖಾಸಗಿ ಹೋಟೆಲ್​ನಲ್ಲಿ ಶಾಸಕಾಂಗ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾತನಾಡಿದ ಪರಮೇಶ್ವರ್​, ನಾಳೆ ಇದಕ್ಕೆ ಅವರು ಸದನದಲ್ಲಿ ಉತ್ತರ ಕೊಡಬೇಕಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಸ್ತಾವನೆ ಬಂದಿರಬಹುದು. ಆದ್ರೆ ನಾವು ಮಾಡಿರಲಿಲ್ಲ. ನಾವು ಮಾಡುವ ಎಲ್ಲ ಕೆಲಸಗಳನ್ನ ಮಾಡುತ್ತಾರೆ ಅನ್ನೋದಾದ್ರೆ ಮಾಡಲಿ. ಅಭಿವೃದ್ಧಿ ಕೆಲಸಗಳನ್ನ ಮುಂದುವರೆಸಲಿ ಎಂದು ಕುಟುಕಿದರು.

ಮಾಜಿ ಸಚಿವ ಹೆಚ್​.ಕೆ.ಪಾಟೀಲ್ ಮಾತನಾಡಿ, ಮಾಧ್ಯಮಗಳ ಭಯದಿಂದ ದುರಾಲೋಚನೆ ಮಾಡಿದ್ದಾರೆ. ಕೆಟ್ಟ ನಿರ್ಧಾರವನ್ನ ಸ್ಪೀಕರ್ ತೆಗೆದುಕೊಂಡಿದ್ದಾರೆ. ಶಾಸಕರು ಮಲಗೋದು, ಇನ್ನಿತರ ಸುದ್ದಿಗಳನ್ನು ತೋರಿಸ್ತಾರೆ ಎಂದು ಹೀಗೆ ಮಾಡಿದ್ದಾರೆ. ಸುಧಾರಣೆ ಬೇಕಾದರೆ ತನ್ನಿ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಸರಿಯಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲಿನ ನಿರ್ಬಂಧ ಸರಿಯಲ್ಲ. ಬೇಕಾದರೆ ಒಂದು ಬಾಕ್ಸ್ ಮಾಡಿ ಅವರಿಗೆ ಅವಕಾಶ ಕೊಡಿ. ಆದರೆ ನಿರ್ಬಂಧಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ನೆರೆ ಪರಿಹಾರದ ಕುರಿತು ಮಾತನಾಡಿದ ಹೆಚ್​.ಕೆ.ಪಾಟೀಲ್​, ಕೇಂದ್ರದ ನೆರವು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. ನೆರೆ ಸಂತ್ರಸ್ತರು ಬೀದಿಗೆ ಬಿದ್ದಿದ್ದಾರೆ. ನಮ್ಮ ಪಕ್ಷದ ನಾಯಕರೆಲ್ಲ ಸರ್ವಪಕ್ಷ ನಿಯೋಗ ಒಯ್ಯುವಂತೆ ಒತ್ತಾಯಿಸಿದ್ದೆವು. ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ. ನೆರೆ ಸಂತ್ರಸ್ತರಿಗೆ ಘಾಸಿಯಾಗುವಂತೆ ಮಾತನಾಡಿದ್ದಾರೆ. ಇದರ ಬಗ್ಗೆ ಹೋರಾಟದ ರೂಪುರೇಷೆ ರೂಪಿಸುತ್ತೇವೆ ಎಂದರು.

Intro:newsBody:ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧಕ್ಕೆ ನಾಯಕರ ಆಕ್ರೋಶ

ಬೆಂಗಳೂರು: 2008ರಲ್ಲಿ ಅಹಿತಕರ ಘಟನೆಗಳು ನಡೆದಿದ್ವು. ಅದು ಮತ್ತೆ ಮರುಕಳಿಸಬಹುದು ಅನ್ನೋ ಕಾರಣಕ್ಕೆ ಮಾಧ್ಯಮಗಳ ನ್ನ ಹೊರಗಿಡುವ ಕೆಲಸ ಮಾಡಿರಬಹುದು ಎಂದು ಮಾಜಿ ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ವಿಧಾನಸೌಧ ಅಧಿವೇಶನಕ್ಕೆ ಮಾಧ್ಯಮ ಪ್ರವೇಶ ನಿರ್ಭಂಧ ನಿಯಂತ್ರಣ ಕುರಿತು ಮಾತನಾಡಿ, ನಾಳೆ ಇದಕ್ಕೆ ಅವರು ಸದನದಲ್ಲಿ ಉತ್ತರ ಕೊಡಬೇಕಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಸ್ತಾವನೆ ಬಂದಿರಬಹುದು ಆದ್ರೆ ನಾವು ಮಾಡಿರಲಿಲ್ಲ. ಹಾಗಾದ್ರೆ ನಾವು ಮಾಡುವ ಎಲ್ಲ ಕೆಲಸಗಳನ್ನ ಮಾಡ್ತಿವಿ ಅನ್ನೋದಾದ್ರೆ ಮಾಡ್ಲಿ. ಅಭಿವೃದ್ಧಿ ಕೆಲಸಗಳನ್ನ ಮುಂದುವರೆಸಲಿ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಸ್ತಾವನೆ ಬಂದಿರಬಹುದು. ಆದ್ರೆ ನಾವು ನಿರ್ಬಂಧ ಮಾಡಿರಲಿಲ್ಲ. ಹಿಂದಿನ ಪ್ರಸ್ತಾಪ ಅಂದರೆ ನಮ್ಮ ಎಲ್ಲ ಪ್ರಸ್ತಾಪ ತರಲಿ. ಅಭಿವೃದ್ಧಿ ಕೆಲಸಗಳನ್ನ ಮುಂದುವರಿಸಲಿ ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಕುಟುಕಿದರು.
ನೆರೆ ಸಂತ್ರಸ್ಥರು ಬೀದಿಗೆ ಬಿದ್ದಿದ್ದಾರೆ.
ಮಾಜಿ ಸಚಿವ ಎಚ್ಕೆ ಪಾಟೀಲ್ ಮಾತನಾಡಿ, ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿದೆ. ಕೇಂದ್ರದ ನೆರವು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. ನೆರೆ ಸಂತ್ರಸ್ಥರು ಬೀದಿಗೆ ಬಿದ್ದಿದ್ದಾರೆ. ನಮ್ಮ ಪಕ್ಷದ ನಾಯಕರೆಲ್ಲ ಒತ್ತಾಯಿಸಿದ್ದೆವು. ಸರ್ವ ಪಕ್ಷ ನಿಯೋಗ ಒಯ್ಯುವಂತೆ ಒತ್ತಾಯಿಸಿದ್ದೆವು. ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ. ನೆರೆ ಸಂತ್ರಸ್ಥರಿಗೆ ಘಾಸಿಯಾಗುವಂತೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಮಾಡಿದ್ದಾರೆ. ಇದರ ಬಗ್ಗೆ ಹೋರಾಟದ ರೂಪುರೇಷೆ ರೂಪಿಸುತ್ತೇವೆ ಎಂದರು.
ಮಾಧ್ಯಮಗಳ ನಿರ್ಬಂಧ ವಿಚಾರ ಮಾತನಾಡಿ, ಮಾಧ್ಯಮಗಳ ಭಯದಿಂದ ದುರಾಲೋಚನೆ ಮಾಡಿದ್ದಾರೆ. ಕೆಟ್ಟ ನಿರ್ಧಾರವನ್ನ ಸ್ಪೀಕರ್ ತೆಗೆದುಕೊಂಡಿದ್ದಾರೆ. ಶಾಸಕರು ಮಲಗೋದು, ಇನ್ನಿತರ ತೋರಿಸ್ತಾರೆ ಅಂತ ಮಾಡಿದ್ದಾರೆ. ಸುಧಾರಣೆ ಬೇಕಾದರೆ ತನ್ನಿ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಸರಿಯಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲಿನ ನಿರ್ಭಂದ ಸರಿಯಿಲ್ಲ. ಬೇಕಾದರೆ ಒಂದು ಬಾಕ್ಸ್ ಮಾಡಿ ಅವರಿಗೆ ಅವಕಾಶ ಕೊಡಿ. ಆದರೆ ನಿರ್ಬಂದಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.