ಬೆಂಗಳೂರು: ರೆಬೆಲ್ ಕಾಂಗ್ರೆಸ್ ಮುಖಂಡರ ವಿಚಾರದಲ್ಲಿ ಕೈ ನಾಯಕರು ಸಾಫ್ಟ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣೆ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ಗೆ ಬೆಂಬಲ ನೀಡದಿರುವ ಬಗ್ಗೆ ಕುಮಾರಸ್ವಾಮಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡ್ಯ ರೆಬೆಲ್ ಮುಖಂಡರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ಸಿಎಂ ಕುಮಾರಸ್ವಾಮಿ ದೂರು ನೀಡಿದ್ದರು. ಸಿಎಂ ನೀಡಿದ ದೂರನ್ನು ಕಾಂಗ್ರೆಸ್ ಹೋಲ್ಡ್ನಲ್ಲಿ ಇಟ್ಟಿದ್ದು, ಸದ್ಯಕ್ಕೆ ಮಂಡ್ಯ ರೆಬೆಲ್ಗಳ ವಿರುದ್ಧ ಯಾವುದೇ ಕ್ರಮ ಇಲ್ಲ ಎಂಬ ಸಂದೇಶವನ್ನು ಸಿಎಂಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆ ಫಲಿತಾಂಶ ಬರುವ ತನಕ ಕಾದು ನೋಡುವ ನಿರ್ಧಾರಕ್ಕೆ ಕೈ ನಾಯಕರು ಬಂದಿದ್ದು, ಯಾವುದೇ ಕ್ರಮ ಕೈಗೊಳ್ಳಬೇಕಾದರೂ ಮೊದಲು ಫಲಿತಾಂಶ ಬರಬೇಕು ಎಂದು ದಿನೇಶ್ ಗುಂಡೂರಾವ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಫಲಿತಾಂಶ ಬಂದ ಮೇಲೆ ವಾಸ್ತವ ಸ್ಥಿತಿ ಏನು ಎಂದು ತಿಳಿಯಬೇಕು. ಅದಾದ ಬಳಿಕ ನಿರ್ಧಾರ ಕೈಗೊಳ್ಳುವುದು ಒಳಿತು ಎಂಬುದು ಕೈ ನಾಯಕರ ಅಭಿಪ್ರಾಯವಾಗಿದೆ.
ಸಿಎಂ ಮಾತು ಕೇಳಿ ಈಗ ಕ್ರಮ ಕೈಗೊಂಡರೆ ಕಾಂಗ್ರೆಸ್ಗೆ ಹೆಚ್ಚು ನಷ್ಟವಾಗಲಿದೆ ಎಂಬುದು ಕಾಂಗ್ರೆಸ್ ಆತಂಕ. ಹೀಗಾಗಿ ರೆಬೆಲ್ ಮುಖಂಡರ ಪರ ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ಕಾಂಗ್ರೆಸ್ನ ಈ ನಿಲುವಿನಿಂದಲೇ ಸಿಎಂ ಸಿಡಿಮಿಡಿಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.