ETV Bharat / state

ಕೊರೊನಾ ಆತಂಕದ ನಡುವೆ ಸಾಮಾಜಿಕ ಅಂತರ ಮರೆಸುತ್ತಿದ್ದಾರೆಯೇ ಕೈ ನಾಯಕರು? - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿ ಊರಿಗೆ ತೆರಳಲು ಕಾಯುತ್ತಿರುವ ಕಾರ್ಮಿಕರನ್ನು ಒಂದೆಡೆ ಸೇರಿಸಿ ಅವರ ಅಹವಾಲು ಸ್ವೀಕರಿಸುವ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯವನ್ನು ಮಾಡಿಲ್ಲ.

Congress leaders
ಕೊರೊನಾ ಆತಂಕದ ನಡುವೆ ಮಹಾನಗರದಲ್ಲಿ ಸಾಮಾಜಿಕ ಅಂತರ ಮರೆಸುತ್ತಿದ್ದಾರೆಯೇ ಕಾಂಗ್ರೆಸ್ ನಾಯಕರು?!
author img

By

Published : May 4, 2020, 7:59 PM IST

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಕೊರೊನಾ ಹಾಟ್​ಸ್ಪಾಟ್ ಆಗಿ ಆರಂಭದ ದಿನಗಳಿಂದಲೂ ಗೋಚರಿಸುತ್ತಿದ್ದು, ತೀವ್ರ ಆತಂಕ ಮನೆ ಮಾಡಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಜನಪ್ರಿಯತೆಗೆ ಸಾಮಾಜಿಕ ಅಂತರವನ್ನು ಮರೆಸುವ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ರಾಜ್ಯದಲ್ಲಿ ಕೆಲಸವಿಲ್ಲದೆ ಕುಳಿತಿರುವ ಜನರ ಗೋಳು ಆಲಿಸುತ್ತಿಲ್ಲ, ವಿವಿಧ ರಾಜ್ಯಗಳು ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಉಚಿತವಾಗಿ ಕಳಿಸುತ್ತಿರುವಾಗ ಕರ್ನಾಟಕ ಸರ್ಕಾರ ಇಂಥವರಿಂದಲೇ ಹಣ ಕೇಳುತ್ತಿದೆ ಎಂಬಿತ್ಯಾದಿ ಆರೋಪ ಮಾಡುವ ಭರದಲ್ಲಿ ಕಾಂಗ್ರೆಸ್ ನಾಯಕರು ಎಲ್ಲೋ ಒಂದು ಕಡೆ ಮಹಾಮಾರಿ ಕೊರೊನಾ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿ ಊರಿಗೆ ತೆರಳಲು ಕಾಯುತ್ತಿರುವ ಕಾರ್ಮಿಕರನ್ನು ಒಂದೆಡೆ ಸೇರಿಸಿ ಅವರ ಅಹವಾಲು ಸ್ವೀಕರಿಸುವ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯವನ್ನು ಮಾಡಿಲ್ಲ. ಇದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತೆರಳಿದ್ದ ಕಾಂಗ್ರೆಸ್ ನಿಯೋಗ ಕೂಡ ಸಾಮಾಜಿಕ ಅಂತರವನ್ನು ಮರೆತಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದರಾಯನಪುರ ಟಿಪ್ಪು ನಗರ ಹಾಗೂ ಬಾಪೂಜಿ ನಗರದಲ್ಲಿ ಕೊರೊನಾ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಭಾಗದ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ದೊಡ್ಡಮಟ್ಟದ ಆತಂಕದ ಮಧ್ಯವೇ ಸ್ಥಳೀಯ ನಾಯಕರ ಸಭೆ ಸೇರಿ ಗುಂಪುಗೂಡಿ ಚರ್ಚಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರು ನಗರದ ವಿವಿಧೆಡೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದು ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯ ಆಗುತ್ತಿಲ್ಲ.

ಇದು ಕೆಲ ಉದಾಹರಣೆ ಮಾತ್ರ ಆಗಿದ್ದು, ಎಲ್ಲೆಡೆ ಕಾಂಗ್ರೆಸ್ ಪಕ್ಷ ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರದ ತಪ್ಪುಗಳನ್ನು ಪತ್ತೆ ಮಾಡುವ ಆತುರದಲ್ಲಿ ತಾನೇ ಸಾಕಷ್ಟು ಕಡೆ ಎಡವುತ್ತಿರುವುದು ಗೋಚರಿಸುತ್ತಿದೆ. ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಆತಂಕದ ಸ್ಥಿತಿ ಮುಂದುವರಿದಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಕಚೇರಿ ಹಾಗೂ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿವೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ತನ್ನ ಕಚೇರಿ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಸಾಗಿದ್ದು, ನಿರಂತರವಾಗಿ ರೋಗ ಹರಡಿಸುವ ಆತಂಕವನ್ನು ಮೂಡಿಸುತ್ತಲೇ ಇದೆ.

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಕೊರೊನಾ ರಾಜ್ಯಕ್ಕೆ ವಕ್ಕರಿಸಿದ ಹಿನ್ನೆಲೆ ಆರಂಭಿಕ ಜನಪ್ರಿಯತೆಯನ್ನು ಗಳಿಸಿಕೊಳ್ಳಲು ಆಗದೆ ಹೋಗಿರುವ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧದ ಹೋರಾಟದ ಹೆಸರಿನಲ್ಲಿ ನಿರಂತರವಾಗಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರು ಹೋದಲ್ಲೆಲ್ಲಾ ಅಪಾರ ಸಂಖ್ಯೆಯ ಜನ ಜಮಾವಣೆ ಗೊಳ್ಳುತ್ತಲೇ ಇದ್ದು, ಕಾಂಗ್ರೆಸ್ ಪಕ್ಷವೇ ಕೊರೊನಾ ಹರಡಿಸುವ ಕೇಂದ್ರ ಸ್ಥಳವಾಗಬಹುದೇನೋ ಎನ್ನುವ ಆತಂಕ ಮೂಡಿಸುತ್ತಿದೆ.

ಡಿ.ಕೆ ಶಿವಕುಮಾರ್ ತೆರಳುವ ಸ್ಥಳಗಳು ನಡೆಸುವ ಸಭೆಗಳು ಹಾಗೂ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕನಿಷ್ಠ 100-200 ಮಂದಿ ಭಾಗವಹಿಸುತ್ತಿದ್ದು ಇದು ಸಾಕಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಒಂದು ಉತ್ತಮ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆಯಾದರೂ ನಾಯಕರು ಕೈಗೊಳ್ಳುತ್ತಿರುವ ನಿಲುವು ಹಾಗೂ ಸೇರಿಸುತ್ತಿರುವ ಜನ ರೋಗ ಭೀತಿ ಹೆಚ್ಚುವಂತೆ ಮಾಡಿದೆ. ಮುಂದಿನ ದಿನಗಳಲ್ಲಾದರೂ ಪಕ್ಷದ ನಾಯಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿದರೆ ಮಾತ್ರ ಜವಾಬ್ದಾರಿಯುತ ಪ್ರತಿಪಕ್ಷ ಎನಿಸಿಕೊಳ್ಳಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.