ETV Bharat / state

ಮೊದಲ ಬಾರಿಗೆ ಸತ್ಯ ನುಡಿದ ರಮೇಶ್ ಜಾರಕಿಹೊಳಿಗೆ ಅಭಿನಂದನೆ: ವಿ.ಎಸ್.ಉಗ್ರಪ್ಪ

ಸುಮಾರು 9 ಕೋಟಿ ಹಣವನ್ನು ರಾಜ್ಯ ಸರ್ಕಾರ ಬೀಳಿಸಲು ಯೋಗೇಶ್ವರ್ ವ್ಯಯ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಮೊದಲನೆಯದಾಗಿ ಕ್ರಿಮಿನಲ್ ಸಂಚು ನಡೆಸಿದ್ದಾರೆ. ಸೆಕ್ಷನ್ 120ಎ ಬಿ ಐಪಿಸಿಯಲ್ಲಿ ಇದು ಅಪರಾಧ. 6 ತಿಂಗಳ ಶಿಕ್ಷೆ ಕೂಡ ಇದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೂಡ ಅಪರಾಧ ಎಂದರು.

VS Ugrappa
ವಿಎಸ್ ಉಗ್ರಪ್ಪ
author img

By

Published : Jan 15, 2021, 8:49 PM IST

ಬೆಂಗಳೂರು: ಮೊದಲ ಬಾರಿಗೆ ಸತ್ಯ ನುಡಿದ ರಮೇಶ್ ಜಾರಕಿಹೊಳಿಗೆ ಅಭಿನಂದನೆ ಎಂದು ಮಾಜಿ ಸಂಸದ ವಿ.ಎಸ್​​ ಉಗ್ರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 9 ಕೋಟಿ ಹಣ ಯೋಗೇಶ್ವರ್ ವ್ಯಯ‌ ಮಾಡಿದ್ದಾರೆ. ಮನೆ‌ಮೇಲೆ ಸಾಲ ಮಾಡಿ ಸರ್ಕಾರ ಬರುವುದಕ್ಕೆ ಹಣ ಖರ್ಚು ಮಾಡಿದ್ದಾರೆ. ಹೀಗಂತ ಸ್ವತಃ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಇದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಇಂತಹ ಅಪರಾಧ ಎಸಗುವಾಗ ಜಾರಕಿಹೊಳಿ ಏನು ಮಾಡುತ್ತಿದ್ದರು? ಅದನ್ನು ಪೊಲೀಸರ ಗಮನಕ್ಕೆ ತರಬೇಕು ಎಂದರು.

ಬಿಜೆಪಿ ನಾಯಕರ ಹೇಳಿಕೆಗಳ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಉಗ್ರಪ್ಪ ಪ್ರತಿಕ್ರಿಯೆ

ಸುಮಾರು 9 ಕೋಟಿ ಹಣವನ್ನು ರಾಜ್ಯ ಸರ್ಕಾರ ಬೀಳಿಸಲು ಯೋಗೇಶ್ವರ್ ವ್ಯಯ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಮೊದಲನೆಯದಾಗಿ ಕ್ರಿಮಿನಲ್ ಸಂಚು ನಡೆಸಿದ್ದಾರೆ. ಸೆಕ್ಷನ್ 120ಎ ಬಿ ಐಪಿಸಿಯಲ್ಲಿ ಇದು ಅಪರಾಧ. 6 ತಿಂಗಳ ಶಿಕ್ಷೆ ಕೂಡ ಇದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೂಡ ಅಪರಾಧ ಎಂದರು.

ಮಿಸ್ಟರ್ ರಮೇಶ್ ಜಾರಕಿಹೊಳಿ ಅವರೇ, ನೀವು ಈ ದೇಶದ ಸಂವಿಧಾನದ ರೀತಿ ನಡೆದುಕೊಳ್ಳುತ್ತೇನೆ ಅಂತ ಪ್ರಮಾಣ ಮಾಡಿದ್ದೀರ. ಅಪರಾಧದ ಬಗ್ಗೆ ಮಾಹಿತಿ ಗೊತ್ತಿದ್ದರೆ ಅದನ್ನು ಪೊಲೀಸರಿಗೆ ತಿಳಿಸಬೇಕು. ಪೊಲೀಸರಿಗೆ ದೂರು ನೀಡಬೇಕಿರುವುದು ನಿಮ್ಮ ಜವಾಬ್ದಾರಿ ಅಲ್ವಾ ಎಂದು ಪ್ರಶ್ನಿಸಿದರು.

ಯೋಗೇಶ್ವರ್ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಇತ್ತು. ಅವರ ಆಸ್ತಿ ಮೌಲ್ಯ 2008ರಲ್ಲಿ 8 ಕೋಟಿ ಇತ್ತು. 2018ರಲ್ಲಿ 40 ಕೋಟಿ ಅಂತಾ ಡಿಕ್ಲೇರ್ ಮಾಡಿದ್ದಾರೆ. 9 ಕೋಟಿ ಆಪರೇಷನ್ ಕಮಲ‌ ಮಾಡಲು, ಭ್ರಷ್ಟ ಹಣವನ್ನು ಸರ್ಕಾರ ಬೀಳಿಸಲು ಬಳಸಿದ್ದಾರೆ. ಬಿಜೆಪಿಯ ನಾಯಕತ್ವ ಇದರಲ್ಲಿ ಭಾಗಿಯಾಗಿದೆ. ಸ್ವತಃ ಸಚಿವರೇ ಇದನ್ನು ಹೇಳಿದ್ದಾರೆ. ಮಂತ್ರಿಗಿರಿ ವ್ಯಾಪಾರಕ್ಕಿದೆಯಾ? ಯತ್ನಾಳ್ ಬ್ಲಾಕ್ ಮೇಲ್ ಮಾಡುವವರಿಗೆ ಮಂತ್ರಿಗಿರಿ ಕೊಡ್ತಾರೆ ಅಂತಾ ಹೇಳಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ರೆ ಸೂಮೋಟೋ ಕೇಸ್ ದಾಖಲಿಸಲಿ ಎಂದು ಗುಡುಗಿದರು.

ನಮಸ್ತೆ ಸದಾ ವತ್ಸಲೆ‌ ಮಾತೃಭೂಮಿ ಅನ್ನುವ ಆರ್​​​​​ಎಸ್​​ಎಸ್ ನಾಯಕರೇ, ಪ್ರಾಂಥ ಪ್ರಚಾರಕರೇ ನಿಮಗೆ ಈ ಭ್ರಷ್ಟಾಚಾರ ಕಾಣಿಸ್ತಾ ಇಲ್ವಾ? ಯಡಿಯೂರಪ್ಪ ನಿಮಗೆ ತಾಕತ್ತು ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಿ ಎಂದರು.

ರೇಣುಕಾಚಾರ್ಯ, ವಿಶ್ವನಾಥ್ ಕೂಡ ಯೋಗೇಶ್ವರ್ ವಿರುದ್ಧ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಇದೆ ಅಂದ್ರೆ ಜಾರಿ ನಿರ್ದೇಶನಾಲಯ ಕೂಡ ಸುಮೋಟೋ ಕೇಸ್ ತಕ್ಷಣ ದಾಖಲಿಸಬೇಕು. ಮೋದಿ ‌ನಾ ಕಾವುಂಗ ನಾ ಖಾನೆದುಂಗಾ ಅಂತಾರೆ. ಹಾಗಾದ್ರೆ ಇದು ಏನು..? ಅವರಿಗೆ ಕಾಣಿಸ್ತಿಲ್ವ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಎಸ್​​ವೈ ಮೇಲಿನ ಸಿಡಿ ಆರೋಪ ವಿಚಾರ ಮಾತನಾಡಿ, ಇದರ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ, ರಾಜ್ಯ ಅಧೋಗತಿಯತ್ತ ಸಾಗುತ್ತಿದೆ, ಹೀಗಾಗಿ ಭ್ರಷ್ಟಾಚಾರ, ಸಿಡಿ ಬಗ್ಗೆ ತನಿಖೆಯಾಗಬೇಕು ಎಂದರು.

ಕಾಂಗ್ರೆಸ್ ನಾಯಕರ ಬಳಿ ಸಿಡಿ ಇದೆ ಎಂಬ ಯತ್ನಾಳ್ ವಿಚಾರವಾಗಿ ಮಾತನಾಡಿ, ನಮ್ಮ ನಾಯಕರ ಬಳಿ ಯಾವ ಸಿಡಿ ಇಲ್ಲ, ಹಾಗೊಂದು ವೇಳೆ ಇದ್ದಿದ್ದರೆ ಬಿಡುಗಡೆ ಮಾಡ್ತಿದ್ವಿ, ಈಗಾಗಲೇ ಸಾಕಷ್ಟು ಸಿಡಿ ನಾವು ಬಿಡುಗಡೆ ಮಾಡಿದ್ದೇವೆ. ಯತ್ನಾಳರಿಂದ ಹೇಳಿಸಿಕೊಂಡು ಮಾಡಬೇಕಿಲ್ಲ, ನೇರವಾಗಿಯೇ ಸಿಡಿ ರಿಲೀಸ್ ಮಾಡುತ್ತಿದ್ದೆವು ಎಂದರು.

ಇದನ್ನೂ ಓದಿ: ಯತ್ನಾಳ್‌ಗೆ ನೀಡಿದ್ದ ಭದ್ರತೆ ವಾಪಸ್... ಬಿಎಸ್​ವೈ ವಿರುದ್ಧ ಗುಡುಗಿದ ಶಾಸಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.