ETV Bharat / state

ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್: ಸಿಎಂ ಬೊಮ್ಮಾಯಿ ತಿರುಗೇಟು - ETV Bharat Kannada News

ಕಾಂಗ್ರೆಸ್​​ನವರು ನಮ್ಮ ವಿರುದ್ದ ಒಂದು ದೂರು ಕೊಟ್ಟರೇ ನಾವು ಅವರ ವಿರುದ್ದ ಈ ರೀತಿ ನೂರು ದೂರುಗಳನ್ನು ನೀಡಬಹುದು ಎಂದು ಸಿಎಂ ವಾಗ್ದಾಳಿ ನಡೆಸಿದರು.

Chief Minister Basavaraju Bommai
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ
author img

By

Published : Jan 25, 2023, 2:09 PM IST

ಕಾಂಗ್ರೆಸ್​ ನವರು ತಮ್ಮ ಎಲೆಯಲ್ಲಿ ಇಷ್ಟೆಲ್ಲಾ ಇಟ್ಟುಕೊಂಡು ಜನರಲ್ಲಿ ಗೊಂದಲ ಉಂಟು ಮಾಡುವಷ್ಟು ತಳಮಟ್ಟಕ್ಕೆ ಇಳಿದಿದ್ದಾರೆ

ಬೆಂಗಳೂರು: ಮತದಾರರ ಓಲೈಕೆಗೆ ಅಕ್ರಮ ಎಸಗುತ್ತಿರುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಮುಖಂಡರ ವಿರುದ್ಧ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಈ ರೀತಿಯ ನೂರು ದೂರುಗಳನ್ನು ನಾವು ಅವರ ಮೇಲೆ ನೀಡಬಹುದು. ಆದರೆ ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.

ಭ್ರಷ್ಟಚಾರದ ಬಗ್ಗೆ ಜನರಿಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್​​ನವರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ. ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಎನ್ನುವುದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ಸಿಎಂ ತಿರುಗೇಟು ನೀಡಿದರು. ಹೆಚ್​ಎಂಟಿ ಮೈದಾನದಲ್ಲಿ ಹರ್ಷಕಲಾ - ರಾಷ್ಟ್ರೀಯ ಕೈಮಗ್ಗ ಮೇಳ 2023 ನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.

ಮತದಾರರ ಓಲೈಕೆಗೆ ಅಕ್ರಮ ಎಸಗುತ್ತಿರುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಮುಖಂಡರ ವಿರುದ್ಧ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ ಎನ್ನಲು ಇದು ಉತ್ತಮ ಉದಾಹರಣೆಯಾಗಿದೆ. ಯಾರು ಯಾರು ಹೇಳಿಕೆ ಕೊಡುತ್ತಾರೆ, ಅದಕ್ಕೆ ಸ್ಪಷ್ಟೀಕರಣ ಹಾಗೂ ಉತ್ತರವನ್ನೂ ಕೊಡುತ್ತಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಎರಡು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನೀಡುವುದಾಗಿಯೂ ಘೋಷಿಸಿದ್ದು, ಪ್ರತಿದಿನ ಒಂದೊಂದೇ ಪ್ರಕಟಿಸುತ್ತಿದ್ದಾರೆ. ಈ ಮಾನದಂಡ ಹಾಕಿದರೆ ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಅವರೂ ಕೂಡ ಮತದಾರರಿಗೆ ಆಸೆ, ಆಮಿಷಗಳನ್ನು ನೀಡುತ್ತಿಲ್ಲವೇ? ಎಂದು ಸಿಎಂ ಪ್ರಶ್ನಿಸಿದರು.

ಮತದಾರರಿಗೆ ಫೋಟೋವುಳ್ಳ ಕುಕ್ಕರ್ ನೀಡಿದ ಪ್ರಕರಣದ ಸಮಗ್ರ ತನಿಖೆ: ಕಾಂಗ್ರೆಸ್​ನ ನಾಲ್ಕೈದು ಶಾಸಕರು ಅವರ ಚಿತ್ರವುಳ್ಳ ಕುಕ್ಕರ್ ಮತದಾರರಿಗೆ ಕೊಟ್ಟಿರುವುದು ಸಾಕ್ಷಿ ಸಮೇತ ದೊರೆತಿದೆ. ಕುಣಿಗಲ್​ನಲ್ಲಿ ಕುಕ್ಕರ್​ ನೀಡುವಾಗ ಸಿಕ್ಕು ಬಿದ್ದು, ವಾಣಿಜ್ಯ ತೆರಿಗೆ ಇಲಾಖೆಯವರು ನಾಲ್ಕು ಜನರಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ತನಿಖೆ ಮಾಡಿಸುತ್ತೇವೆ ಎಂದರು.

ಅವರ ಎಲೆಯಲ್ಲಿ ಇಷ್ಟೆಲ್ಲ ಇಟ್ಟುಕೊಂಡು ಜನರಲ್ಲಿ ಗೊಂದಲ ಉಂಟು ಮಾಡುವಷ್ಟು ತಳಮಟ್ಟಕ್ಕೆ ಇಳಿದಿದ್ದಾರೆ. ಸೋಲುತ್ತೇವೆ ಎನ್ನುವುದು ಅವರಿಗೆ ಗ್ಯಾರಂಟಿ ಆಗಿದೆ. ಹೀಗಾಗಿ ಈ ರೀತಿ ದೂರು ನೀಡುವುದನ್ನು ಮಾಡುತ್ತಿದ್ದಾರೆ. ಸಮಾಜ ಚೌಕಟ್ಟಿನಲ್ಲಿ ಪೊಲೀಸ್ ಹಾಗೂ ಕಾನೂನು ವ್ಯವಸ್ಥೆ ಇದೆ. ಅದರಂತೆಯೇ ಕಾನೂನಿನ ಪ್ರಕಾರ ಕ್ರಮವಾಗಲಿ. ಈ ರೀತಿಯ ನೂರು ದೂರುಗಳನ್ನು ನಾವು ಅವರ ಮೇಲೆ ನೀಡಬಹುದು. ಆದರೆ ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರಿಗೂ ಗೊತ್ತಿದೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಜನತೆ ಕಾಂಗ್ರೆಸ್​ನ್ನು ಮನೆಗೆ ಕಳುಹಿಸಲಿದ್ದಾರೆ: ಸುರ್ಜೆವಾಲ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಬಹಳ ಹಳೆಯದು. ಕಾಂಗ್ರೆಸ್ ಸರ್ಕಾರ ಇದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ಪರೀಕ್ಷೆಗೆ ಕುಳಿತಿಲ್ಲದವರನ್ನು ಪಾಸ್ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲು ಅದಕ್ಕೆ ಉತ್ತರ ನೀಡಲಿ. ಉದ್ಯೋಗ ಏನಾದರೂ ಮಾರಾಟವಾಗಿದ್ದರೆ ಅದು ಕಾಂಗ್ರೆಸ್ ಕಾಲದಲ್ಲಿ ಎಂದು ಟಾಂಗ್​ ಕೊಟ್ಟರು.

ಇದನ್ನೂ ಓದಿ :ಆರ್.ಡಿ.ಪಾಟೀಲ್​ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.