ETV Bharat / state

ಬಿಜೆಪಿ ಭ್ರಷ್ಟೋತ್ಸವ ಜಾತ್ರೆಯಲ್ಲಿ ನೂರಾರು ಹಗರಣಗಳ ಮೆರವಣಿಗೆ: ಕಾಂಗ್ರೆಸ್ ಲೇವಡಿ - ಬಿಜೆಪಿ ಡ್ರಗ್ ಡೀಲರ್​​

ಯಾವ ಸರ್ಜರಿ ಮಾಡಿದರೂ, ಎಷ್ಟೇ ಡಿಸಿಎಂ ಹುದ್ದೆ ಸೃಷ್ಟಿಸಿದರೂ ತಳ್ಳಿಕೊಂಡು ಹೋಗುತ್ತಿರುವ ಸರ್ಕಾರದ ಇಂಜಿನ್ ಸ್ಟಾರ್ಟ್ ಮಾಡಲಾಗದು. ಮ್ಯಾನೇಜ್ಮೆಂಟ್ ಸರ್ಕಾರ ಟೇಕಾಫ್ ಆಗಲಾರದು ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಲೇವಡಿ ಮಾಡಿದೆ.

ಕಾಂಗ್ರೆಸ್ ಲೇವಡಿ
ಕಾಂಗ್ರೆಸ್ ಲೇವಡಿ
author img

By

Published : Aug 22, 2022, 10:37 PM IST

ಬೆಂಗಳೂರು: ಸಚಿವ ಸಂಪುಟಕ್ಕೆ ಮಾತ್ರವಲ್ಲ ಇಡೀ ಸರ್ಕಾರಕ್ಕೆ ಸೂಕ್ತ ಸರ್ಜರಿ ನಡೆಯಬೇಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್,‌ ಬಿಜೆಪಿಗೆ ಜನಪರ ಆಡಳಿತ ನೀಡುವುದಕ್ಕಿಂತ ಚುನಾವಣೆ ದೃಷ್ಟಿಕೋನವೇ ಮುಖ್ಯ. ಸಂಪುಟಕ್ಕೆ ಮಾತ್ರವಲ್ಲ, ಐಸಿಯುನಲ್ಲಿರುವ ಇಡೀ ಸರ್ಕಾರಕ್ಕೇ ಸರ್ಜರಿ ಮಾಡಬೇಕಿದೆ. ಯಾವ ಸರ್ಜರಿ ಮಾಡಿದರೂ, ಎಷ್ಟೇ ಡಿಸಿಎಂ ಹುದ್ದೆ ಸೃಷ್ಟಿಸಿದರೂ ತಳ್ಳಿಕೊಂಡು ಹೋಗುತ್ತಿರುವ ಸರ್ಕಾರದ ಇಂಜಿನ್ ಸ್ಟಾರ್ಟ್ ಮಾಡಲಾಗದು. ಮ್ಯಾನೇಜ್ಮೆಂಟ್ ಸರ್ಕಾರ ಟೇಕಾಫ್ ಆಗಲಾರದು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಶೇ. 40ರಷ್ಟು ರೋಲ್ಕಾಲ್ ಸರ್ಕಾರದಲ್ಲಿ 100% ಗೋಲ್ಮಾಲ್ ನಡೆಯುವುದು ಸಾಮಾನ್ಯವಾಗಿದೆ. ಕಾನ್​ಸ್ಟೇಟೆಬಲ್‌ಗಳ ಪಾಲಿನ ಅನ್ನ ನೀರಿನ ಭತ್ಯೆಗಳನ್ನು ಅಧಿಕಾರಿಗಳು ಲೂಟಿ ಮಾಡುತ್ತಿರುವುದು ಗೃಹಸಚಿವರ ಗಮನಕ್ಕೆ ಬರಲಿಲ್ಲವೇ?. ಪಿಎಸ್ಐ ನೇಮಕದಿಂದ ಹಿಡಿದು ಭತ್ಯೆ ಲೂಟಿಯವರೆಗೆ ಗೃಹ ಇಲಾಖೆಯ ಎಲ್ಲಾ ಅಕ್ರಮಗಳಿಗೂ ಗೃಹಸಚಿವರ ಅಸಾಮರ್ಥ್ಯ, ಭ್ರಷ್ಟತನವೇ ಕಾರಣ ಎಂದು ಕಿಡಿಕಾರಿದೆ.

  • ದೇಶದ ಯುವಕರಿಗೆ ಉದ್ಯೋಗ ಕೊಡಲಾಗದ ಬಿಜೆಪಿ ಸರ್ಕಾರ ಡ್ರಗ್ಸ್ ನೀಡಿ ಸಮಾಧಾನಪಡಿಸಲು ಹೊರಟಿದೆಯೇ?

    ಗುಜರಾತಿನ ಬಂದರುಗಳಲ್ಲಿ ಹತ್ತಾರು ಬಾರಿ ಸಾವಿರಾರು ಕೋಟಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, ಹೀಗಿದ್ದೂ ದೇಶದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವ ಯಾವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳದಿರುವುದು ಏಕೆ?#BjpDrugDealers pic.twitter.com/B69B7I3JrV

    — Karnataka Congress (@INCKarnataka) August 22, 2022 " class="align-text-top noRightClick twitterSection" data=" ">

ಬಿಜೆಪಿ ಭ್ರಷ್ಟೋತ್ಸವ ಜಾತ್ರೆ: ಶೇ.40ರಷ್ಟು ಪರ್ಸಟೇಂಜ್​​ ಸರ್ಕಾರದಲ್ಲಿ ನಡೆದ ಪಿಎಸ್ಐ ಹಗರಣದ ಒಳಸುಳಿಗಳು ಬಿಡಿಸಿದಷ್ಟೂ ಹೊರಬರುತ್ತಿವೆ. ಇಂತಸೊಂದು ಬೃಹತ್ ಅಕ್ರಮ ನಡೆದೇ ಇಲ್ಲ ಎಂದು ಸದನದಲ್ಲಿ ನಿರಾಕರಿಸಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು, ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಬಿಜೆಪಿ ಭ್ರಷ್ಟೋತ್ಸವ ಜಾತ್ರೆಯಲ್ಲಿ ನೂರಾರು ಹಗರಣಗಳ ಮೆರವಣಿಗೆ ಎಂದಿದೆ.

ಬಿಜೆಪಿ ಡ್ರಗ್ ಡೀಲರ್​​: ಯುವಕರಿಗೆ ಉದ್ಯೋಗ ಕೊಡಲಾಗದ ಬಿಜೆಪಿ ಸರ್ಕಾರ ಡ್ರಗ್ಸ್ ನೀಡಿ ಸಮಾಧಾನಪಡಿಸಲು ಹೊರಟಿದೆಯೇ? ಗುಜರಾತಿನ ಬಂದರುಗಳಲ್ಲಿ ಹತ್ತಾರು ಬಾರಿ ಸಾವಿರಾರು ಕೋಟಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹೀಗಿದ್ದೂ ದೇಶದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವ ಯಾವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳದಿರುವುದು ಏಕೆ? ಎಂದು ಬಿಜೆಪಿ ಡ್ರಗ್ ಡೀಲರ್ಸ್ ಎಂಬ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿದೆ.

ರಾಜ್ಯದಲ್ಲಿ ಗಾಂಜಾ ಹಾಗೂ ಡ್ರಗ್ಸ್ ಹಾವಳಿ ತಡೆಯಲು ಬಿಜೆಪಿ ಸರ್ಕಾರ ಯಾವುದೇ ಕ್ರಮ ವಹಿಸುತ್ತಿಲ್ಲ. ಇಷ್ಟೆಲ್ಲಾ ಡ್ರಗ್ಸ್ ಪ್ರಕರಣಗಳು ಬಯಲಿಗೆ ಬಂದಿದ್ದರೂ, ಈವರೆಗೆ ವಿಶೇಷ ತನಿಖಾ ತಂಡ ರಚಿಸಿಲ್ಲ. ಎನ್ ಸಿ ಬಿ ತನಿಖೆ ನಡೆದಿಲ್ಲ. ಗೃಹ ಸಚಿವರು ಒಂದೇ ಒಂದು ತನಿಖಾ ಪ್ರಗತಿ ಸಭೆ ನಡೆಸಿಲ್ಲ. ಈ ನಿಷ್ಕ್ರಿಯತೆ ಯಾರ ಲಾಭಕ್ಕಾಗಿ? ಎಂದು ಕೇಳಿದೆ.

ಇದನ್ನೂ ಓದಿ: ಬಿಜೆಪಿ ವಿರುದ್ಧ ಕಾಂಗ್ರೆಸ್​ ಸರಣಿ ಟ್ವೇಟ್... ಕೇಸರಿ ನಾಯಕರ ವಿರುದ್ಧ ಆಕ್ರೋಶ

ಹಿಂದೆ ಸ್ಟೀಲ್ ಫ್ಲೈಓವರ್‌ ವಿಚಾರದಲ್ಲಿ ಪರಪರ ಮೈ ಪರಚಿಕೊಂಡಿತ್ತು ಬಿಜೆಪಿ. ಈಗ ಅವರ ಸರ್ಕಾರದ ಅವಧಿಯಲ್ಲೇ ನಿರ್ಮಾಣವಾದ ಶಿವಾನಂದ ಸರ್ಕಲ್ ಫ್ಲೈಓವರ್ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ದುರಸ್ತಿಗಾಗಿ ಮುಚ್ಚಲಾಗಿದ್ದು, 40% ಕಮಿಷನ್ ಲೂಟಿಯ ಪ್ರಭಾವಲ್ಲವೇ ರಾಜ್ಯ ಬಿಜೆಪಿ? ಈ ಕಳಪೆ ಕಾಮಗಾರಿಗೆ ಕಮಿಷನ್ ಸರ್ಕಾರವಲ್ಲದೆ ಇನ್ಯಾರು ಹೊಣೆ? ಎಂದು ಪ್ರಶ್ನಿಸಿದೆ.

ಈಗಾಗಲೇ ಕಳೆದ 8 ವರ್ಷಗಳಿಂದ ಆರ್​ಎಸ್​ಎಸ್ ಮಾದರಿಯ ಅಡಳಿತವೇ ವಿಶ್ವದಲ್ಲಿ ಭಾರತವನ್ನು ಮಾದರಿಯಾಗಿಸಿದೆ. ನಿರುದ್ಯೋಗದಲ್ಲಿ, ಕಳಪೆ ಆರ್ಥಿಕ ನಿರ್ವಹಣೆಯಲ್ಲಿ, ಬೆಲೆ ಏರಿಕೆಯಲ್ಲಿ, ಕೋಮು ಕಲಹ ಸೃಷ್ಟಿಸುವುದರಲ್ಲಿ, ದ್ವೇಷ ಬಿತ್ತುವುದರಲ್ಲಿ, ಮೌಢ್ಯ ಸ್ಥಾಪಿಸುವುದರಲ್ಲಿ, ಸಾಂವಿಧಾನಿಕ ಸ್ವತಂತ್ರ ಕಸಿಯುವುದರಲ್ಲಿ. ಇನ್ಯಾವುದು ಬಾಕಿ ಇದೆ? ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಕೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.