ETV Bharat / state

ಯತ್ನಾಳ್​​ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್​​ ನಿರ್ಧಾರ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ನಂತರ ಸದನದಲ್ಲಿ ಧರಣಿ ಕೈಬಿಟ್ಟು ಸಂವಿಧಾನದ ಕುರಿತ ಚರ್ಚೆಯ ಕಲಾಪದಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದೆ.

banglore
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Mar 3, 2020, 8:42 PM IST

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ನಂತರ ಸದನದಲ್ಲಿ ಧರಣಿ ಕೈಬಿಟ್ಟು ಸಂವಿಧಾನದ ಕುರಿತ ಚರ್ಚೆಯ ಕಲಾಪದಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದೆ.

ಸದನದಲ್ಲಿ ದೊರೆಸ್ವಾಮಿ ಅವರಿಗೆ ಅಪಮಾನವೆಸಗಿದ ಹೇಳಿಕೆ ಕುರಿತ‌ ಚರ್ಚೆಗೆ ಸ್ಪೀಕರ್ ಅವಕಾಶ ನೀಡದೇ ಇರುವುದರಿಂದ ಪಕ್ಷದ ಮುಂದಿನ ನಡೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಪರಿಷತ್ ಸದಸ್ಯರ ಸಭೆ ನಡೆಯಿತು. ವಿಧಾನಸೌಧದ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಾಳಿನ ಕಲಾಪದಲ್ಲಿ ಯಾವ ರೀತಿ ಪಾಲ್ಗೊಳ್ಳಬೇಕು ಎಂದು‌ ಚರ್ಚಿಸಲಾಯಿತು.

ಸದನದಲ್ಲಿ ಚರ್ಚೆಗೆ ಅವಕಾಶ ನೀಡದೇ ಇರುವ ಕಾರಣ ಶಾಸಕ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ನಂತರ ಕಲಾಪದಲ್ಲಿ ಭಾಗಿಯಾಗುವ ನಿರ್ಧಾರ‌ ಕೈಗೊಳ್ಳಲಾಯಿತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂವಿಧಾನದ ಚ್ಯುತಿ ಆಗಿದೆ. ಸದನದ ಚ್ಯುತಿ ಆಗಿದೆ. ಇಷ್ಟೆಲ್ಲಾ ಹೇಳಿದರೂ ಕೂಡ ಸ್ಪೀಕರ್ ನಮಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಜೊತೆಗೆ ಸ್ಪೀಕರ್ ಕೂಡ ಅನುಚಿತವಾಗಿ ಮಾತನಾಡಿದ್ದಾರೆ. ಸ್ಪೀಕರ್ ಆದವರು ಒಂದು ಪಕ್ಷಕ್ಕೆ ಸೀಮಿತರಾದವರಲ್ಲ. ಅದಕ್ಕಿಂತ ದೊಡ್ಡವರು. ಆದರೆ ಏಕಪಕ್ಷೀಯವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಪೀಕರ್ ಸೂಚನೆಯಂತೆಯೇ ನಾವು ದೊರೆಸ್ವಾಮಿ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಿದೆವು. ಅವಕಾಶ ನೀಡುವುದಾಗಿ ತಿಳಿಸಿ ನಂತರ ಸದನ ಗದ್ದಲದಲ್ಲಿರುವಾಗಲೇ ನಮ್ಮ ನೋಟಿಸ್ ರದ್ದುಗೊಳಿಸಿರುವುದಾಗಿ ಸ್ಪೀಕರ್‌ ಪ್ರಕಟಿಸಿದರು. ನಮಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಹಾಗಾಗಿ ನಾವು ನಾಳೆ 10.45ಕ್ಕೆ ಕಾಂಗ್ರೆಸ್ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ‌ ಒತ್ತಾಯಿಸಿ ದೂರು ನೀಡಲಿದ್ದೇವೆ ಎಂದರು.

ಇನ್ನು ರಾಜ್ಯಪಾಲರಿಗೆ ದೂರು ಕೊಟ್ಟ ಬಳಿಕ ನಾಳೆ ಸದನದಲ್ಲಿ ಧರಣಿ ಕೈಬಿಟ್ಟು ಸಂವಿಧಾನದ ಚರ್ಚೆಯಲ್ಲಿ ಭಾಗಿಯಾಗುತ್ತೇವೆ. ಬಿಜೆಪಿಯವರು ಸಂವಿಧಾನದ ಕೆಲವು ಬಿಲ್​ಗಳನ್ನು ಚರ್ಚೆಯೇ ಇಲ್ಲದೆ ಪಾಸ್ ಮಾಡಿಕೊಳ್ಳಲು ಕುತಂತ್ರ ನಡೆಸುತ್ತಿದ್ದಾರೆ. ಆದ್ದರಿಂದ ನಾಳೆ ಸಂವಿಧಾನದ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.