ETV Bharat / state

ವೋಟ್ ಬ್ಯಾಂಕ್​​​​ಗಾಗಿ ಕಾಂಗ್ರೆಸ್ ಬಣ್ಣದ ರಾಜಕೀಯ ಮಾಡ್ತಿದೆ : ಸಚಿವ ನಾಗೇಶ್ ಆರೋಪ - ಸಚಿವ ನಾಗೇಶ್ ಆರೋಪ

ಸೂರ್ಯ ಕೂಡಾ ಕೇಸರಿ ಬಣ್ಣದಲ್ಲಿ ಇದ್ದಾನೆ. ಆದರೆ, ಸಿದ್ಧರಾಮಯ್ಯ ಕೇಸರಿ ಬಣ್ಣವನ್ನು ವಿನಾಕಾರಣ ವಿರೋಧ ಮಾಡ್ತಾರಾ? ಸಿದ್ದರಾಮಯ್ಯ ಕಾಲದಲ್ಲಿ ‌ಮಾಡದ‌ ಸಾಧನೆಯನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಜನರ ಮುಂದೆ ಮುಖ ತೋರಿಸಲು ಆಗದೇ ವಿರೋಧ ಮಾಡ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಆರೋಪಿಸಿದರು.

Education Minister BC Nagesh
ಶಿಕ್ಷಣ ಸಚಿವ ಬಿ.ಸಿ.ನಾಗೇಶ್
author img

By

Published : Nov 15, 2022, 5:09 PM IST

ಬೆಂಗಳೂರು: ಯಾವುದೋ ಒಂದು ಸಮುದಾಯದ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಕೇಸರಿ ಬಣ್ಣವನ್ನು ವಿರೋಧ ಮಾಡುತ್ತಿರುವುದು ಸರಿಯಲ್ಲ. ಇದೊಂದು ದುರದೃಷ್ಟಕರ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕೇಸರಿ ಬಣ್ಣ ಬಿಡಲ್ಲ:ವಿಧಾನಸೌಧದಲ್ಲಿ ಮಾಧ್ಯಮದವರ ಜತೆ ಅವರು, ಕಾಂಗ್ರೆಸ್ ವಿರೋಧ ಮಾಡುತ್ತದೆ ಎಂದು ಬಿಜೆಪಿ ಕೇಸರಿ ಬಣ್ಣ ಹಾಕುವುದನ್ನು ನಿಲ್ಲಿಸುವುದಿಲ್ಲ. ವಿರೋಧ ಮಾಡಲಿಕ್ಕೆ ಒಂದಿಷ್ಟು ಜನ ಇದ್ದಾರೆ. ಕಾಂಗ್ರೆಸ್‌ ಅಂತೂ ಶಿಕ್ಷಣ ಕ್ಷೇತ್ರದಲ್ಲಿ ಅನವಶ್ಯಕ ರಾಜಕೀಯ ಪ್ರಯತ್ನ ಮಾಡುತ್ತಿದೆ. ವೋಟ್​ ಬ್ಯಾಂಕ್ ‌ಗಾಗಿ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ಪಾಲಿಟಿಕ್ಸ್ ಮಾಡಲು ಮುಂದಾಗಿದೆ.‌ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ‌ನ ಹಿರಿಯ ನಾಯಕ ಆಡಿದ ಮಾತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

7601 ಕೊಠಡಿಗಳಿಗೆ ಶಂಕುಸ್ಥಾಪನೆ ಆಗಿದೆ. ಎಲ್ಲ ಜಿಪಂ‌ ಸಿಇಒಗಳಿಗೆ ಉಸ್ತುವಾರಿ ಕೊಟ್ಟಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಿಗೆ ಅನುಕೂಲ ಆಗುವಂತೆ ಪೂರ್ಣಗೊಳಿಸಲು ಹೇಳಿದ್ದೇನೆ. ಸ್ವಾತಂತ್ರ್ಯ ದಿನದಂದು ಪ್ರಕಟಿಸಿದಂತೆ 250 ಶೌಚಾಲಯಗಳ ನಿರ್ಮಾಣಕ್ಕೂ ಸಿಎಂ ನಿನ್ನೆ ಸೂಚನೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಇನ್ನೂ 900 ಕೊಠಡಿ ಕೊಡುತ್ತೇವೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ: ಈ ಬಾರಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಲ್ಲೇ ವಿವೇಕ ಕಾರ್ಯಕ್ರಮ ಆಯೋಜಿಸಿ, ವಿವೇಕ ಬ್ರಾಂಡ್ ಮಾಡುತ್ತಿದ್ದೇವೆ. ವಿವೇಕಾನಂದ ಎಲ್ಲ ಪೀಳಿಗೆಗೂ ಬೇಕು.‌ ಸ್ವಾಮೀ ವಿವೇಕಾನಂದ ಜ್ಞಾನದ ಸಂಕೇತ, ಜ್ಞಾನದ ದೇಗುಲಕ್ಕೆ ವಿವೇಕಾನಂದ ಸ್ಪೂರ್ತಿ ಎಂದರು.

ಜ್ಞಾನ ಸಂಪಾದನೆ , ಮಾಡಲ್ಸ್ ಗಾಗಿ ವಿವೇಕ ಶಾಲೆಗಳ ಸ್ಥಾಪನೆ ಮಾಡಲಾಗುತ್ತಿದೆ. ಕೊಠಡಿ ಸಹಿತ ಒಳ್ಳೆಯ ವಾತಾವರಣ ನಿರ್ಮಿಸಬೇಕು. ಇದಕ್ಕಾಗಿ ಹತ್ತು ವರ್ಷಗಳಲ್ಲಿ ಎಲ್ಲ ಕೊಠಡಿಗಳನ್ನ ನಿರ್ಮಿಸಲು ಗುರಿ ಹೊಂದಲಾಗಿದೆ. 2 ಕಿಮೀ ಒಳಗೆ ಒಂದು ಸರ್ಕಾರಿ ಶಾಲೆ ಇರಬೇಕೆಂದು ನಿಯಮ ಇದೆ. ಕನಿಷ್ಠ ಇಬ್ಬರು ಶಿಕ್ಷಕರು ಪ್ರತಿ ಶಾಲೆಗೆ ಇರಬೇಕು. ನಿನ್ನೆ 7601 ಕೊಠಡಿಗೆ ಶಂಕು ಸ್ಥಾಪನೆ ಆಗಿದೆ. ಎಲ್ಲ ಸಿಇಒಗಳಿಗೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ. ಮುಂದಿನ ಅಕಾಡೆಮಿ ವರ್ಷಕ್ಕೆ ಈ ಕೊಠಡಿ ಸಿಗಲಿದೆ. ಮುಂದಿನ ಮಾರ್ಚ್ ದೊಳಗೆ ಮುಗಿಬೇಕು ಎಂದು ಸೂಚಿಸಿದ್ದಾರೆ.

ಯಾವುದೇ ಸುತ್ತೋಲೆಯಲ್ಲಿ ಇದೇ ರೀತಿಯ ಬಣ್ಣ ಬಳಿಯಿರಿ ಅಂತ ಹೇಳಿಲ್ಲ. ಅಲ್ಲಿಯ ವಾತಾವರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ ವಿವೇಕ ಹೆಸರಿಡಿ ಅಂತ ಹೇಳಿದ್ದೇವೆ. ಒಂದು ವೇಳೆ ಶಿಕ್ಷಣ ಕ್ಷೇತ್ರಕ್ಕೂ ಕೇಸರಿ ಬಣ್ಣಕ್ಕೂ ಹತ್ತಿರ ಇದೆ. ಕೇಸರಿ ಬಣ್ಣ ಬಳಿದರೆ ಮಾನಸಿಕ ವಿಕಾಸ ಎಂದು ಎಕ್ಸ್‌ಪರ್ಟ್‌ಗಳು ವರದಿ ನೀಡಿದರೆ ನಾವು ಹಿಂದೇಟು ಹಾಕಲ್ಲ ಎಂದ ಸಚಿವರು ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ, ವಿವೇಕ ಬಣ್ಣ ಬಳಿಯೋದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದರು.

ವಿವೇಕಾನಂದ ಭಾವಚಿತ್ರ : ಈಗಾಗಲೇ ವಿವೇಕಾನಂದರ ಭಾವಚಿತ್ರ ಕೆಲ ಶಾಲೆಗಳಲ್ಲಿ‌ ಇದೆ. ಎಲ್ಲಾ ಶಾಲೆಗಳಲ್ಲಿ ವಿವೇಕಾನಂದರ ಫೋಟೋ ಹಾಕಲು ತೀರ್ಮಾನ ಮಾಡಿದ್ದೇವೆ. ಯಾವ ರೀತಿಯ ಫೋಟೊ ಹಾಕಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಆದರೆ, ಎಲ್ಲ ಶಾಲೆಗಳಲ್ಲೂ ವಿವೇಕಾನಂದರ ಫೋಟೊ ಬರುವುದಂತೂ ನಿಜ ಎಂದು ಹೇಳಿದರು.

ಕಾಂಗ್ರೆಸ್ ಬಣ್ಣದ ರಾಜಕೀಯ :ಈಗ ಕಾಂಗ್ರೆಸ್ ನವರು ಬಣ್ಣದ ತಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾವು ಬಣ್ಣದ ಬಗ್ಗೆ ಸರ್ಕ್ಯೂಲರ್ ತಂದಿಲ್ಲ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ನಿರ್ಧಾರ ಮಾಡಿ ಎಂದಿದ್ದೇವೆ. ಆದರೆ, ವಿವೇಕ ಹೆಸರು ಬ್ರಾಂಡ್ ಮಾಡಲು ಸೂಚನೆ ನೀಡಿದ್ದು ನಿಜ. ನಾಳೆ ಚುನಾವಣೆಗೆ ಹೋದಾಗ ಮಾತಾಡೋಕೆ ವಿಷಯ ಇರೋದಿಲ್ಲ ಎಂದು ಬಣ್ಣದ ಬಗ್ಗೆ ಕಾಂಗ್ರೆಸ್ ಮಾತಾಡ್ತಾ ಇದೆ.

ಕೇಸರಿ ತ್ಯಾಗದ ಸಂಕೇತ, ಸೂರ್ಯನ ಬಣ್ಣ. ಮಕ್ಕಳ ಮೇಲೆ ಕೇಸರಿ ಬಣ್ಣ ವಿದ್ಯೆಗೆ ಪೂರಕವಾಗಿದೆ ಎಂದು ತಜ್ಞರು ಹೇಳಿದರೆ ಜಾರಿ ಮಾಡುತ್ತೇವೆ. ಅವರಿಗೆ ಯಾಕೆ ಬಣ್ಣದ ಬಗ್ಗೆ ಬೇಸರ ಕೇಸರಿ ಬಣ್ಣದಲ್ಲಿ ಹಿಂದುತ್ವ ಕಂಡಿದೆಯಾ? . ಕಾಂಗ್ರೆಸ್ ಇದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ಸೂರ್ಯ ಕೂಡ ಕೇಸರಿ ಬಣ್ಣದಲ್ಲಿ :ಸೂರ್ಯ ಕೂಡಾ ಕೇಸರಿ ಬಣ್ಣ ಇದ್ದಾನೆ. ಹಾಗಾಂತ ಸಿದ್ಧರಾಮಯ್ಯ ಕೇಸರಿ ಬಣ್ಣ ವಿರೋಧ ಮಾಡ್ತಾರಾ? ಸಿದ್ದರಾಮಯ್ಯ ಕಾಲದಲ್ಲಿ ‌ಮಾಡದ‌ ಸಾಧನೆಯನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಜನರ ಮುಂದೆ ಮುಖ ತೋರಿಸಲು ಆಗದೇ ವಿರೋಧ ಮಾಡ್ತಿದ್ದಾರೆ. ಯಾವ ಬಣ್ಣ ಹೊಡೆಯಬೇಕು ಅಂತ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.

ಖಾಸಗಿ ಶಾಲೆಯ ಮಾದರಿಯಲ್ಲೇ ಶ್ರೀಮಂತರ ಮಕ್ಕಳು ಓದಿದ ರೀತಿಯಲ್ಲೇ ಎಲ್ಲ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕು ಎಂದು ಅಂದೇ ವಾಜಪೇಯಿ ಯೋಚನೆ ಮಾಡಿದ್ದರು. ಅವರ ಅಭಿಪ್ರಾಯದಂತೆ ಈಗ ಮೂವತ್ತು ಮಕ್ಕಳಿಗೆ ಒಬ್ಬರು ಶಿಕ್ಷಕರು, ಕೆಲವು ಕಡೆ ಹತ್ತು ಮಕ್ಕಳಿಗೂ ಒಂದು ಟೀಚರ್ ಇದ್ದಾರೆ ಎಂದರು.

ಇದನ್ನೂಓದಿ: ಧಾರವಾಡ: ಶಾಸಕ ಅರವಿಂದ್ ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ರಸ್ತೆ ಸುಧಾರಣೆಗೆ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.