ETV Bharat / state

ಅಭ್ಯರ್ಥಿಗಳ ಆಯ್ಕೆಯ ಚರ್ಚೆ ಸಕಾರಾತ್ಮಕವಾಗಿ ನಡೆದಿದೆ: ಕೆ.ಸಿ. ವೇಣುಗೋಪಾಲ್

ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಉಪಚುನಾವಣಾ ಕಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಭೆ ನಡೆದಿದೆ. ಸಭೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಜರಾಗಿರಲಿಲ್ಲ. ನಾಳೆ ಸಂಜೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಅಮತಿಮವಾಗಲಿದೆ ಎಂದು ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ.

ಕೆ.ಸಿ. ವೇಣುಗೋಪಾಲ್
author img

By

Published : Sep 26, 2019, 2:20 PM IST

ಬೆಂಗಳೂರು: ಯಾವುದೇ ಅಸಮಾಧಾನ ಕಾಂಗ್ರೆಸ್ ನಾಯಕರಲ್ಲಿ ಇಲ್ಲ. ಇವತ್ತಿನ‌ ಸಭೆಯಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಆಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಭೆ ಕುರಿತು ಕೆ.ಸಿ. ವೇಣುಗೋಪಾಲ್ ಮಾಹಿತಿ

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಅಭ್ಯರ್ಥಿ ಆಯ್ಕೆ ಸಭೆಯಿಂದ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಭೆಯಲ್ಲಿ ಮಾತಿನ ಚಕಮಕಿ ಯಾವುದೂ ಇಲ್ಲ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ‌ ಜನಾಭಿಪ್ರಾಯವಿಲ್ಲ. ಎಲ್ಲ ಕ್ಷೇತ್ರಗಳಲ್ಲೇ ಗೆಲ್ಲುವ ಅಭ್ಯರ್ಥಿಗಳಿದ್ದಾರೆ.‌ ಆ ನಿಟ್ಟಿನಲ್ಲಿ ಉತ್ತಮ ಚರ್ಚೆ ಆಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ದಿನಗಳಲ್ಲಿ ಭೇಟಿ ಮಾಡುತ್ತೇನೆ ಎಂದರು.

ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ: ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿಯನ್ನು ಬೈ ಎಲೆಕ್ಷನ್​ನಲ್ಲಿ ಮಣಿಸಲು ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿದೆ. ಈ ಬಗ್ಗೆ ಚರ್ಚೆ ಆಗಿದೆ ಎಂದು ವೇಣುಗೋಪಾಲ್​ ಹೇಳಿದ್ರು.

ಇನ್ನು, ಜಿ. ಪರಮೇಶ್ವರ್​ ನನ್ನನ್ನು ಭೇಟಿ ಆಗಿದ್ದರು. ತುರ್ತು ಸಭೆ ಇರುವ ಕಾರಣ ಸಭೆಗೆ ಬರೋಕೆ ಆಗಲ್ಲ ಅಂತಾ ಹೇಳಿದ್ದಾರೆ. ನಾಳೆ ಉಪಚುನಾವಣೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಾಗುತ್ತದೆ ಎಂದು ರಾಜ್ಯ ಕಾಗ್ರೆಸ್​ ಉಸ್ತುವಾರಿ ತಿಳಿಸಿದರು.

ಸಭೆಯಲ್ಲಿ ಅಭಿಪ್ರಾಯ ಹಂಚಿಕೆ ಆಗಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿ, ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಆದರೆ ಸಭೆಗಳಲ್ಲಿ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಳ್ಳೋದು ಬೇಡ್ವಾ? ತಂತಮ್ಮ ಅಭಿಪ್ರಾಯಗಳನ್ನು ನಾಯಕರು ಹಂಚಿಕೊಂಡಿದ್ದಾರೆ ಎಂದರು.

ಅನರ್ಹರ ಬಗೆಗಿನ ತೀರ್ಪು ಏನು ಬರುತ್ತೆ ಅನ್ನೋದನ್ನ ಕಾದು ನೋಡಿ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡ್ತೇವೆ. ಪರಮೇಶ್ವರ್ ಕಾರಣಾಂತರದಿಂದ‌ ಸಭೆಗೆ ಬಂದಿಲ್ಲ. ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಅವರಿಗೂ ಪರಮೇಶ್ವರ್ ಮಾಹಿತಿ ನೀಡಿದ್ದಾರೆ ಎಂದರು.

Intro:newsBody:ಅಭ್ಯರ್ಥಿಯ ಆಯ್ಕೆ ಚರ್ಚೆ ಸಕಾರಾತ್ಮಕವಾಗಿ ನಡೆದಿದೆ, ನಾಳೆ ಹೆಸರು ಅಂತಿಮವಾಗಲಿದೆ: ವೇಣುಗೋಪಾಲ್

ಬೆಂಗಳೂರು: ಯಾವುದೇ ಅಸಮಾಧಾನ ಕಾಂಗ್ರೆಸ್ ನಾಯಕರಲ್ಲಿ ಇಲ್ಲ. ಇವತ್ತಿನ‌ ಸಭೆಲೀ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಿಂದ ತೆರಳುವ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿ, ಸಭೆಯಲ್ಲಿ ಮಾತಿನ ಚಕಮಕಿ ಯಾವುದು ಇಲ್ಲ. ಆಡಳಿತ ನೀಡ್ತಿರೋ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ‌ ಜನಾಭಿಪ್ರಾಯವಿಲ್ಲ. ಎಲ್ಲ ಕ್ಷೇತ್ರಗಳಲೂ ಗೆಲ್ಲುವ ಅಭ್ಯರ್ಥಿಗಳನ್ನ ಹಾಕ್ತಿವಿ.‌ ಆ ನಿಟ್ಟಿನಲ್ಲಿ ಉತ್ತಮ ಚರ್ಚೆ ಆಗಿದೆ. ನಾನು ಡಿಕೆ ಶಿವಕುಮಾರ ಅವರನ್ನ ಮುಂದಿನ ದಿನದಲ್ಲಿ ಭೇಟಿ ಮಾಡ್ತಿನಿ ಎಂದರು.
ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ
ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನ ಟಾರ್ಗೆಟ್ ಮಾಡ್ತಿದೆ. ದ್ವೇಷದ ರಾಜಕಾರಣ ಮಾಡ್ತಿದೆ. ಬಿಜೆಪಿಯನ್ನು ಬೈ ಎಲೆಕ್ಸನ ನಲ್ಲಿ ಮಣಿಸಲು ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿದೆ. ಈ ಬಗ್ಗೆ ಬಿಜೆಪಿಲೀ ಚರ್ಚೆ ಆಗಿದೆ ಎಂದು ಹೇಳಿದರು.
ಪರಮೇಶ್ವರ ನನ್ನನ್ನ ಮೀಟ್ ಮಾಡಿದ್ರು. ತುರ್ತು ಸಭೆ ಇರೋ ಕಾರಣ ಸಭೆಗೆ ಬರೋಕೆ ಆಗಲ್ಲ ಅಂತಾ ಹೇಳಿದ್ರು. ನಾಳೆ ಫೈನಲ್ ಲಿಸ್ಟ್ ತಯಾರಾಗುತ್ತೆ ಎಂದರು.
ಸಭೆಯಲ್ಲಿ ಅಭಿಪ್ರಾಯ ಹಂಚಿಕೆ ಆಗಿದೆ
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಸಭೆಲೀ ವಿಸ್ತೃತ ಚರ್ಚೆಯಾಗಿದೆ. ವಾಗ್ಧಾಳಿ, ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಆದ್ರೆ ಸಭೆಗಳಲ್ಲಿ ನಾಯಕರು ಅಭಿಪ್ರಾಯಗಳನ್ನ ಹಂಚಿಕೊಳ್ಳೋದು ಬೇಡ್ವಾ? ತಂತಮ್ಮ ಅಭಿಪ್ರಾಯಗಳನ್ನ ನಾಯಕರು ಹಂಚಿಕೊಂಡಿದ್ದಾರೆ ಎಂದರು.
ಅನರ್ಹರ ಬಗೆಗಿನ ತೀರ್ಪು ಏನು ಬರುತ್ತೆ ಅನ್ನೋದನ್ನ ಕಾದು ನೋಡಿ ನಾಳೆ ಅಥವಾ ನಾಡಿದ್ದು ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡ್ತೇವೆ. ಪರಮೇಶ್ವರ್ ಕಾರಣಾಂತರದಿಂದ‌ ಸಭೆಗೆ ಬಂದಿಲ್ಲ. ಉಸ್ತುವಾರಿಗೂ ಪರಮೇಶ್ವರ್ ಮಾಹಿತಿ ನೀಡಿದ್ದಾರೆ ಎಂದರು.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.