ETV Bharat / state

ಆರ್​ಆರ್​ ನಗರ ಬೈ ಎಲೆಕ್ಷನ್​: ಲೊಟ್ಟೆಗೊಲ್ಲಹಳ್ಳಿಯ ಜಲಗೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ಕುಸುಮಾ - ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ

ಆರ್​ಆರ್​ ನಗರ ಉಪ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಇಂದು ಬಿಇಎಲ್ ಸರ್ಕಲ್​ನ ಲೊಟ್ಟೆಗೊಲ್ಲಹಳ್ಳಿಯ ಜಲಗೇರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

Kusuma Hanumantarayappa
ಕುಸುಮಾ
author img

By

Published : Oct 31, 2020, 3:52 PM IST

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಎಚ್ ಅವರು ಬಿಇಎಲ್ ಸರ್ಕಲ್​ನ ಲೊಟ್ಟೆಗೊಲ್ಲಹಳ್ಳಿಯ ಜಲಗೇರಮ್ಮ ದೇಗುಲಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿರುವ ಕುಸುಮ ಪ್ರಚಾರಕ್ಕೆ ತೆರಳಿದ ಸ್ಥಳದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾರೆ.

ಜಲಗೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ಕುಸುಮಾ

2 ದಿನಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಉರುಳುಸೇವೆ ಕೂಡ ಮಾಡಿದ್ದ ಕುಸುಮ ಹನುಮಂತರಾಯಪ್ಪ ಲೋಕಕಲ್ಯಾಣಾರ್ಥವಾಗಿ ಕಾರ್ಯ ಮಾಡಿದ್ದಾಗಿ ಹೇಳಿಕೊಂಡಿದ್ದರು.

ದೈವಬಲ ನೆನೆದಿದ್ದ ಕುಸುಮ: ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣುವ ನನ್ನ‌ ಜಾತ್ಯತೀತ ಮನಸ್ಥಿತಿಯಿಂದ ಎಲ್ಲ‌ ಪೂಜಾ ಸ್ಥಳಗಳ ಶಾಂತ ವಾತಾವರಣವನ್ನು ಇಷ್ಟಪಡುತ್ತೇನೆ. ನಮ್ಮ ಚುನಾವಣಾ ಪ್ರಚಾರ ಸಮಯದಲ್ಲಿ ಅವಕಾಶ ಸಿಕ್ಕಗಲೆಲ್ಲಾ ಮಠ, ಮಂದಿರಗಳಿಗೆ ಭೇಟಿ ನೀಡಿ ಗುರು, ಹಿರಿಯರ ಆಶೀರ್ವಾದ ಪಡೆಯುತ್ತೇನೆ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ಚುನಾವಣೆ ಪ್ರಚಾರದ ಜೊತೆಗೆ ದೈವೀ ಕೃಪೆಯನ್ನೂ ಪಡೆಯುವ ನಿಟ್ಟಿನಲ್ಲಿ ಕುಸುಮಾ ಹನುಮಂತರಾಯಪ್ಪ ಪ್ರಯತ್ನ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.