ETV Bharat / state

ರೇವಣ್ಣ ಮತ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ - ರೇವಣ್ಣ ಮತ ಅಸಿಂಧು ಮಾಡುವಂತೆ ಕಾಂಗ್ರೆಸ್ ಮನವಿ

ರೇವಣ್ಣ ಮತ ಅಸಿಂಧು ಮಾಡಬೇಕು ಎಂದು ಬಿಜೆಪಿ ಕೂಡ ದೂರು ನೀಡಿತ್ತು. ದೂರು ಆಧರಿಸಿ ಆದೇಶ ನೀಡಿದ್ದ ಚುನಾವಣಾಧಿಕಾರಿ ಯಾವುದೇ ರೀತಿಯಿಂದಲೂ ಮತ ಅಸಿಂಧುಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸಹ ದೂರು ನೀಡಿದೆ.

congress-appeals-to-election-commission-to-cancel-ravanna-vote
ರೇವಣ್ಣ ಮತ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ
author img

By

Published : Jun 10, 2022, 4:53 PM IST

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ ಸಲ್ಲಿಸಿದ ಮನವಿ ಪುರಸ್ಕಾರದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೊರೆ ಹೋಗಿದ್ದೇವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಬ್ಯಾಲೆಟ್ ತೋರಿಸಿದ್ದಾರೆ. ಮತದಾನದ ಬಳಿಕ ಡಿ.ಕೆ.ಶಿವಕುಮಾರ್​ಗೆ ಬ್ಯಾಲೆಟ್ ತೋರಿಸಿ, ತದನಂತರ ತಮ್ಮ ಪಕ್ಷದ ಎಜೆಂಟ್​ನತ್ತ ತೊರಿಸುತ್ತಾರೆ. ಈ ಬಗ್ಗೆ ನಾವು ರಿಟರ್ನಿಂಗ್ ಅಫೀಸರ್​ಗೆ ದೂರು ನೀಡಿದ್ದೆವು. ಆದರೆ ಅವರು ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಮತದಾನದ ಏಜೆಂಟ್ ಆದ ನಾನು ಎಲೆಕ್ಷನ್ ಕಮಿಷನ್​ಗೆ ದೂರು ಕೊಟ್ಟಿದ್ದೇನೆ. ಅವರಿಂದ ಸೂಕ್ತ ನಿರ್ಧಾರ ಕೈಗೊಳ್ಳುವ ಕಾರ್ಯ ಆಗಲಿದೆ ಎಂಬ ವಿಶ್ವಾಸ ಇದೆ. ಆರ್ಟಿಕಲ್ 324ರ ಪ್ರಕಾರ ನಾವು ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ರಿಟರ್ನಿಂಗ್ ಆಫೀಸರ್ ಯಾವುದೇ ರೀತಿಯ ದಾಖಲೆ ನೀಡದೆ ನಮ್ಮ ಮನವಿ ತಿರಸ್ಕರಿಸಿದ್ದಾರೆ. ಸಿಸಿಟಿವಿ ದಾಖಲೆ ಸೇರಿದಂತೆ ಯಾವುದೇ ರೀತಿಯ ದಾಖಲೆ ಒದಗಿಸಿಲ್ಲ. ಈ ಎಲ್ಲ ವಿಚಾರವ ಪರಿಗಣಿಸಿ ನಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ರಾಥೋಡ್ ತಿಳಿಸಿದರು.

ಮತಗಟ್ಟೆ‌ಯೊಳಗೆ ಗಲಾಟೆ: ರೇವಣ್ಣ ಬ್ಯಾಲೆಟ್ ತೊರಿಸಿ ಮತಹಾಕಿದ್ದನ್ನು ನಾವು ರಿಟರ್ನಿಂಗ್ ಅಫೀಸರ್​ ಬಳಿ ಪ್ರಶ್ನೆ ಮಾಡಿದಕ್ಕೆ ರೇವಣ್ದ ನಮ್ಮ‌ ಜೊತೆ ವಾಗ್ವಾದ ನಡೆಸಿದರು. ಆಗ ರಿಟರ್ನಿಂಗ್ ಆಫೀಸರ್​ ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು ಎಂದು ಪ್ರಕಾಶ್ ರಾಥೋಡ್ ಹೇಳಿದ್ದಾರೆ.

ರೇವಣ್ಣ ಮತ ಅಸಿಂಧು ಮಾಡಬೇಕು ಎಂದು ಕಾಂಗ್ರೆಸ್, ಬಿಜೆಪಿ ದೂರು ನೀಡಿವೆ. ದೂರು ಆಧರಿಸಿ ಆದೇಶ ನೀಡಿದ್ದ ಚುನಾವಣಾಧಿಕಾರಿ ಯಾವುದೇ ರೀತಿಯಿಂದಲೂ ಮತ ಅಸಿಂಧುಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸಹ ದೂರು ನೀಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಚುನಾವಣಾ ಆಯೋಗ ತೀರ್ಪು ನೀಡಿದ ಬಳಿಕ ಮತ ಎಣಿಕೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜೆಡಿಎಸ್​​ಗೆ ಡಬಲ್​ ಶಾಕ್: ಖಾಲಿ ಮತ ಪತ್ರ ಹಾಕಿದ ಗುಬ್ಬಿ ಶ್ರೀನಿವಾಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.