ETV Bharat / state

ತೈಲ ಬೆಲೆ‌ ಏರಿಕೆ ಖಂಡಿಸಿ ಮೋದಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು! - congress Activists protest against petrol price hike

ಪೆಟ್ರೋಲ್- ಡೀಸೆಲ್ ಬೆಂಗಳೂರು ನಗರದಲ್ಲಿ 100 ರೂ ತಲುಪಿದೆ. ಅಡುಗೆ ಎಣ್ಣೆ ದಾಖಲೆ ಮಟ್ಟದಲ್ಲಿ ದುಪ್ಪಟ್ಟಾಗಿ ಏರಿಕೆಯಾಗಿದೆ. ಹೀಗಿರುವಾಗ ಜನಸಾಮಾನ್ಯರು ಬದುಕುವ ಪರಿಸ್ಥಿತಿ ಇಲ್ಲದಂತಾಗಿದೆ. ಇಷ್ಟೆಲ್ಲ ಬೆಲೆ ಏರಿಕೆಯಾಗಿದ್ದರೂ ಕಡಿವಾಣ ಹಾಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

congress-activists-protest-against-petrol-price-hike
ಕಾಂಗ್ರೆಸ್ ಕಾರ್ಯಕರ್ತರಿಂದ ಪೆಟ್ರೋಲ್​ ಏರಿಕೆ ವಿರುದ್ದ ಪ್ರತಿಭಟನೆ
author img

By

Published : Jun 18, 2021, 5:00 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕೊರೊನಾ, ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಕಡಿತಗೊಳಿಸದೇ ನರೇಂದ್ರ ಮೋದಿ ಬೆಲೆ ಏರಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಆದ್ದರಿಂದ ಮೋದಿ ದುರಾಡಳಿತವನ್ನು ಖಂಡಿಸಿ ಬೆಲೆ ಏರಿಕೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ನಗರದ ಕ್ರಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.‌

ಕಾಂಗ್ರೆಸ್ ಕಾರ್ಯಕರ್ತರಿಂದ ಪೆಟ್ರೋಲ್​ ಏರಿಕೆ ವಿರುದ್ದ ಪ್ರತಿಭಟನೆ

ಬೆಲೆ ಏರಿಕೆ‌ ಬಗ್ಗೆ ತಲೆ ಕೆಡಿಸಿಕೊಳ್ಳದ ನರೇಂದ್ರ ಮೋದಿಗೆ ಪಂದ್ಯ ಪುರುಷೋತ್ತಮ ಪಿಕ್ ಪಾಕೆಟ್ ಕಪ್ ಪ್ರಶಸ್ತಿ ನೀಡಿ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್- ಡೀಸೆಲ್ ಬೆಂಗಳೂರು ನಗರದಲ್ಲಿ 100 ರೂ ತಲುಪಿದೆ. ಅಡುಗೆ ಎಣ್ಣೆ ದಾಖಲೆ ಮಟ್ಟದಲ್ಲಿ ದುಪ್ಪಟ್ಟಾಗಿ ಏರಿಕೆಯಾಗಿದೆ. ಹೀಗಿರುವಾಗ ಜನಸಾಮಾನ್ಯರು ಬದುಕುವ ಪರಿಸ್ಥಿತಿ ಇಲ್ಲದಂತಾಗಿದೆ.

ಇಷ್ಟೆಲ್ಲ ಬೆಲೆ ಏರಿಕೆಯಾಗಿದ್ದರೂ ಕಡಿವಾಣ ಹಾಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಕೇವಲ ಕಾಟಾಚಾರಕ್ಕಾಗಿ ಆಡಳಿತ ನಡೆಸುತ್ತಿದೆ. ಈ ಬೇಜವಾಬ್ದಾರಿ ಸರ್ಕಾರ ತೊಲಗದೆ ಹೋದರೆ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ತಲುಪುತ್ತದೆ. ಹೀಗಾಗಿ ಕೂಡಲೇ ಬೆಲೆ ಏರಿಕೆಯನ್ನ ಕಡಿತಗೊಳಿಸಬೇಕು, ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರಾದ ಎಸ್. ಮನೋಹರ್, ಜಿ.ಜನಾರ್ಧನ್, ಎ. ಆನಂದ್, ಈ.ಶೇಖರ್, ಎಂ ಎ ಸಲೀಂ, ಆರ್.ರವಿಶೇಖರ್, ಮಹೇಶ್ ಪುಟ್ಟರಾಜು, ಚಂದ್ರಶೇಖರ, ಶಶಿಭೂಷಣ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದರು.

ಓದಿ: ಸಂಚಾರಿ ವಿಜಯ್​​​ರಿಂದ ಸ್ಫೂರ್ತಿ : ಮರಣ ನಂತರ ದೇಹದಾನಕ್ಕೆ ಮುಂದಾದ ಮಾಜಿ ಸಚಿವ ಅಭಯ್ ಚಂದ್ರ ಜೈನ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.