ಬೆಂಗಳೂರು: ಕೊರೊನ ವೈರಸ್ಗೆ ಇದುವರೆಗೂ ಔಷಧ ಕಂಡು ಹಿಡಿದಿಲ್ಲ. ಆದರೆ ಆಯುರ್ವೇದದಲ್ಲಿ ಔಷಧ ಇದೆ. ಈರುಳ್ಳಿಗೆ ಉಪ್ಪು ಹಾಕಿಕೊಂಡು ದಿನಕ್ಕೆ ಮೂರು ಬಾರಿ ಸೇವನೆ ಮಾಡಿ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನಕ್ಕೆ ಮೂರು ಬಾರಿ ಈರುಳ್ಳಿ ತಿಂದರೆ ಕೊರೊನ ವೈರಸ್ ಬರಲ್ಲ. ಕೊರೊನ ವೈರಸ್ ತಡಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ತಪಾಸಣಾ ಕೇಂದ್ರಗಳಿಲ್ಲ. ಚೀನಾ ಸೇರಿದಂತೆ ಹೊರ ರಾಷ್ಟ್ರಗಳಲ್ಲಿ ಕೊರೊನ ವೈರಸ್ ಪತ್ತೆ ಹಚ್ಚಲು ಅತ್ಯಾಧುನಿಕ ಸಾಧನಗಳಿವೆ. ಆದರೆ ಭಾರತದಲ್ಲಿ ರಕ್ತಪರೀಕ್ಷೆ ನಡೆಸಿ ಕೊರೊನ ಪತ್ತೆ ಹಚ್ಚುವುದರೊಳಗೆ ರೋಗಿ ಸಾವನ್ನಪ್ಪಿರುತ್ತಾನೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಲ್ಲದೇ ನಮ್ಮ ದೇಶದ ಆರ್ಥಿಕತೆಗೂ ಕೊರೊನ ವೈರಸ್ ಬಂದಿದೆ. ಇದನ್ನ ಸರಿ ಪಡಿಸುವತ್ತ ಪ್ರಧಾನಿ ಮೋದಿ ಮುಂದಾಗಬೇಕು ಎಂದರು.
ರಾಜ್ಯದಲ್ಲಿ ತಪಾಸಣಾ ಕೇಂದ್ರಗಳನ್ನ ಹೆಚ್ಚು ತೆಗೆಯಬೇಕಿದೆ. ಕೆಮ್ಮೋದನ್ನ ಮೊಬೈಲ್ನಲ್ಲಿ ಹಾಕಿದ್ದಾರೆ. ಮೊಬೈಲ್ ನಲ್ಲಿ ಬರೊ ಕೆಮ್ಮೋದನ್ನ ನೋಡಿದ್ರೆ ನಮಗೂ ಕೆಮ್ಮು ಬರುತ್ತೆ. ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಶಾಲೆಗೆ ಒಂದು ವಾರ ರಜೆ ಘೋಷಿಸಿದ್ದಾರೆ. ವಯಸ್ಸಾದವರಿಗೆ ಬೇಗನೆ ಸೋಂಕು ಹರಡುತ್ತಿದೆ. ಕೊರೊನ ವೈರಸ್ ತಡೆಯೋಕೆ ಮೊದಲು ಗಮನಕೊಡಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಮಧ್ಯಪ್ರದೇಶದ ಶಾಸಕರ ಆಪರೇಷನ್ ಕಮಲ ಪ್ರಯತ್ನ ನಡೆದಿದೆ. ಮಧ್ಯಪ್ರದೇಶದಿಂದ ಇಲ್ಲಿಗೆ ಶಾಸಕರನ್ನ ತಂದಿದ್ದಾರೆ. 12 ಮಂದಿ ಮುತ್ತೈದೆಯರನ್ನ ಇಲ್ಲಿಗೆ ತಂದಿದ್ದಾರೆ. ಅವರನ್ನ ಹೇಗೆ ಸೀರೆ ಉಡಿಸಬೇಕು ಅಂತ ನೋಡ್ತಿದ್ದಾರೆ. ಇವ್ರು ಮದುವೆ ಆದವರನ್ನೇ ಹೊಡ್ಕಂಡು ಬಂದಿದ್ದಾರೆ. ಬಿಜೆಪಿ ಕಿಡ್ನ್ಯಾಪರ್ಸ್ ಪಾರ್ಟಿ. ವಾಜಪೇಯಿ ಕಾಲದ ಬಿಜೆಪಿ ಇವಾಗ ಉಳಿದುಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.