ಬೆಂಗಳೂರು: ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಆಗಮಿಸುತ್ತಿದೆ. ಸದ್ಯ ಈ ಎರಡೂ ಹಬ್ಬಗಳನ್ನ ಆಚರಿಸಲು ಸರ್ಕಾರ ನಿಯಮಗಳನ್ನ ಹೊರಡಿಸಿದ್ದು, ಷರತ್ತು ಬದ್ಧವಾಗಿ ಹಬ್ಬ ಆಚರಿಸಲು ಅನುಮತಿ ನೀಡಿದೆ. ಇದೇ ರೀತಿ ಪೊಲೀಸ್ ಇಲಾಖೆ ಕೂಡ ಹಬ್ಬ ಆಚರಿಸಲು ಹಲವು ನಿಯಮ ಜಾರಿಗೆ ಮುಂದಾಗಿದೆ.
ಸೆಪ್ಟೆಂಬರ್ನಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬ ಹಿನ್ನೆಲೆ, ಧಾರ್ಮಿಕ ಮುಖಂಡರ ಸಭೆ, ಶಾಂತಿ ಪಾಲನ ಸಭೆ ನಡೆಸುವಂತೆ ನಗರ ಡಿಸಿಪಿಗಳಿಗೆ ನಗರ ಕಮಿಷನರ್ ಸೂಚನೆ ನೀಡಿದ್ದಾರೆ. ಸರ್ಕಾರದ ಆದೇಶದಂತೆ ಗಣೇಶ ಚತುರ್ಥಿ, ಮೊಹರಂ ಇನ್ನಿತರ ಹಬ್ಬಗಳ ಆಚರಣೆ ನಡೆಸುವ ಮುಖಂಡರ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಕೋವಿಡ್ ಮಾರ್ಗಸೂಚಿ ಎರಡೂ ಹಬ್ಬಗಳಲ್ಲಿಯೂ ಪಾಲನೆಯಾಗಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಹಬ್ಬಗಳಲ್ಲಿ ಪಾಲಿಸುವಂತೆ ಸ್ಥಳೀಯ ಪೊಲೀಸರು ಸೂಚನೆ ನೀಡಬೇಕು. ಡಿಸಿಪಿಗಳು ಕೂಡಲೇ ತಮ್ಮ ವಿಭಾಗದ ಠಾಣೆ ಇನ್ಸ್ಪೆಕ್ಟರ್ಗಳಿಗೆ ಈ ಬಗ್ಗೆ ನಿರ್ದೇಶನ ನೀಡಬೇಕು. ಇನ್ಸ್ಪೆಕ್ಟರ್ ಸ್ಥಳೀಯ ಧಾರ್ಮಿಕ ಮುಖಂಡರ ಜೊತೆ ಸಭೆ ಜೊತೆಗೆ ಶಾಂತಿ ಪಾಲನಾ ಸಭೆ ಕೂಡ ನಡೆಸಬೇಕು.
ಸಭೆಯಲ್ಲಿ ಸರ್ಕಾರ ನೀಡಿದ ಮಾರ್ಗಸೂಚಿಗಳು ಹಾಗೂ ಆದೇಶಗಳ ಪಾಲನೆ ಮಾಡಬೇಕು ಮತ್ತು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಎನ್ಡಿಎಂಎ ಅಡಿ ಪ್ರಕರಣ ದಾಖಲಿಸಿಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪಾಲಿಕೆ ಚುನಾವಣೆ.. ಜಿಲ್ಲೆಗೆ ಪ್ರಾತಿನಿಧ್ಯ ಕೊಡದಿರುವುದೇ ಹಿನ್ನಡೆಗೆ ಕಾರಣ: ಯತ್ನಾಳ