ETV Bharat / state

ನಿತ್ಯೋತ್ಸವ ಕವಿ ನಿಸಾರ್​ ಅಹಮದ್ ನಿಧನಕ್ಕೆ ಆರ್​ಎಸ್​ಎಸ್​​ ಸಂತಾಪ

author img

By

Published : May 3, 2020, 10:32 PM IST

ಕವಿ ನಿಸಾರ್ ಅಹಮದ್​ ಅವರ ನಿರ್ಗಮನ ಕನ್ನಡ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ‌ಸಂಘವು ಸಂತಾಪ ವ್ಯಕ್ತಪಡಿಸಿದೆ.

Condolences message by RSS
ಆರೆಸ್ಸೆಸ್ ಸಂತಾಪ

ಬೆಂಗಳೂರು: ಕನ್ನಡ ಸಾಹಿತ್ಯ, ಕವಿತೆ, ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಕವಿ ನಿಸಾರ್ ಅಹಮದ್ ಅವರ ನಿಧನವು ಭರಿಸಲಾರದ ನಷ್ಟವನ್ನುಂಟುಮಾಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ವ್ಯಾಪ್ತಿಯ ಕ್ಷೇತ್ರೀಯ ಸಂಚಾಲಕ ಬಿ.ನಾಗರಾಜ್ ಸಂತಾಪ ಸೂಚಿಸಿದ್ದಾರೆ.

ನಿಸಾರ್​ ಅವರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ. ಕುರಿಗಳು ಸಾರ್ ಕುರಿಗಳು, ಮತ್ತದೇ ಬೇಸರ‌, ಅದೇ ಸಂಜೆಯಂತಹ ಮಧುರ ಮತ್ತು ‌ಸಮೃದ್ಧ ಕವಿತೆಗಳ ರಚನಾಕಾರರಾದ ನಿಸಾರರು ಕನ್ನಡದ ಜನರ ಬಾಯಲ್ಲಿ ನಾಡಗೀತೆಯಂತೆ ರಾರಾಜಿಸುತ್ತಿರುವ ಜೋಗದ ಸಿರಿ ಬೆಳಕಿನಲ್ಲಿ ಕವಿತೆಯ ಮೂಲಕ ಅಮರರಾಗಿದ್ದಾರೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ‌ಸಂಘವು ಪ್ರಾರ್ಥಿಸುತ್ತದೆ ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.

ಸ್ಪೀಕರ್ ಸಂತಾಪ:
ಕನ್ನಡ ನಾಡಿನ ಹೆಸರಾಂತ ಸಾಹಿತಿ, ಕವಿ, ಪದ್ಮಶ್ರಿ ಪ್ರೊಫೆಸರ್ ನಿಸಾರ್ ಅಹಮದ್ ಅವರ ನಿಧನವು ತುಂಬಾ ನೋವಿನ ಸಂಗತಿಯಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಪ್ರೊ. ನಿಸಾರ್ ಅಹಮದ್ ಅವರ ಅಗಲಿಕೆಯಿಂದ ಕನ್ನಡ ನಾಡಿನ ಒಬ್ಬ ಶ್ರೇಷ್ಠ ಕವಿ, ವಿಮರ್ಶಕ ಮತ್ತು ವೈಚಾರಿಕ ಬರಹಗಾರರನ್ನು ಕಳೆದುಕೊಂಡಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಕ್ಕೆ ಭಗವಂತನು ಚಿರ ಶಾಂತಿ ದಯಪಾಲಿಸಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.