ETV Bharat / state

ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ : ಪರಮೇಶ್ವರ್ - ಮಾತನಾಡಿಸುವ ಸಣ್ಣ ಕೆಲಸವನ್ನು ಬಿಜೆಪಿ ಮಾಡಿಲ್ಲ

ಕಾಂಗ್ರೆಸ್​ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಮಾನದಂಡಗಳು ಇರುತ್ತವೆ. ಇವುಗಳ ಬಗ್ಗೆ ಆಯಾ ಇಲಾಖೆಯ ಸಚಿವರು ಕುಳಿತು ಚರ್ಚೆ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.

conditions-will-apply-for-congress-guarantees-says-former-dcm-parameshwar
ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ : ಪರಮೇಶ್ವರ್
author img

By

Published : May 16, 2023, 6:37 PM IST

ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ : ಪರಮೇಶ್ವರ್

ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದು ಹೈಕಮಾಂಡ್ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಆಯ್ಕೆ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಈ ಬಗ್ಗೆ ಹೈಕಮಾಂಡ್ ಪ್ರಕ್ರಿಯೆ ನಡೆಸುತ್ತಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಪಕ್ಷದ ಹೈಕಮಾಂಡ್​ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗಲ್ಲ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ‌ ಕೊಡಬೇಕು. ಇದು ಹಿಂದಿನಿಂದಲೂ ಇರುವ ಪದ್ಧತಿ. ಸಿದ್ದರಾಮಯ್ಯ ಸಿಎಲ್​ಪಿ ಲೀಡರ್ ಆಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವ ಎಂದು ಹೋಗಿದ್ದೆವು. ಈಗ ಅಧಿಕಾರ ಬಂದಿದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಜೊತೆ ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಶಕ್ತಿ ಪ್ರದರ್ಶನ ಅಲ್ಲ. ಕೆಲವು ಶಾಸಕರು ಅವರ ನಾಯಕರ ಜೊತೆ ಹೋಗಿರುತ್ತಾರೆ. ಅದನ್ನು ಶಕ್ತಿ ಪ್ರದರ್ಶನ ಎನ್ನುವುದು ಸರಿಯಲ್ಲ. ನಾವು ಸಹ ಶಾಸಕರನ್ನು ಕರೆದುಕೊಂಡು ಹೋಗಬಹುದು‌. ಆದರೆ ನಾವು ಹೋಗುವುದಿಲ್ಲ. ಕೆಲವರು ಹೋಗಿದ್ದಾರೆ ಅಷ್ಟೆ ಎಂದರು.

2013ರಲ್ಲಿ ಪರಮೇಶ್ವರ್​ಗೆ ಅನ್ಯಾಯ ಆಯ್ತು. ಈ ಬಾರಿ ಅದನ್ನು ಹೈಕಮಾಂಡ್ ಸರಿ ಮಾಡುತ್ತ ಎಂಬ ಪ್ರಶ್ನೆಗೆ, ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. ನಾನು 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡಲ್ಲ. ನನಗೆ ಕೆಲವು ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಾನು ಖಂಡಿತ ಮಾಡ್ತೀನಿ. ಅವಕಾಶ ಕೊಟ್ಟರೆ ಮಾಡೊಲ್ಲ ಅಂತ ಹೇಳಲ್ಲ. ಹೈಕಮಾಂಡ್​ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಎಲ್ಲವೂ ಗೊತ್ತಿದೆ. ಲಾಬಿ ಮಾಡಬಾರದು ಎಂದು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಅಂದರೆ ಅಸಮರ್ಥ ಎಂದು ಅರ್ಥ ಅಲ್ಲ. ನಾನು ಕೂಡ ಸಮರ್ಥನೇ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್​ ಟಾಂಗ್ ನೀಡಿದರು.

ಕಾಂಗ್ರೆಸ್ ಗ್ಯಾರಂಟಿ ವಿಚಾರ ಮಾತನಾಡಿ, ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತದೆ ಎಂದು ಹೇಳಿದರು. ಮೊದಲ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ. ಮೊದಲ ಕ್ಯಾಬಿನೆಟ್ ನಲ್ಲಿ ಇವುಗಳನ್ನು ಜಾರಿ ಮಾಡ್ತೀವಿ. ಗ್ಯಾರಂಟಿಗಳ ಮೇಲೆ ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡ್ತೀವಿ. ಆಯಾ ಇಲಾಖೆ ಸಚಿವರು ಕುಳಿತು ಇದರ ಬಗ್ಗೆ ವರ್ಕ್ ಮಾಡಿ ಜಾರಿ ಮಾಡ್ತೀವಿ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ. ಹಾಗೇ ಕೊಟ್ಟರೆ ಎಲ್ಲರೂ ತಗೋತಾರೆ ಎಂದು ಹೇಳಿದರು.

ಮಾತನಾಡಿಸುವ ಸಣ್ಣ ಕೆಲಸವನ್ನು ಬಿಜೆಪಿ ಮಾಡಿಲ್ಲ.. ಶೆಟ್ಟರ್ : ನಾನು ಪಕ್ಷ ಬಿಟ್ಟು ಹೊರಟಾಗ ಮಾತನಾಡಿಸಬೇಕೆಂಬ ಸಣ್ಣ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಬಂದ ಮೇಲೆ ಸಾಕಷ್ಟು ನಾಯಕರು ಮಾತನಾಡುತ್ತಿದ್ದಾರೆ. ಬೆಳಗ್ಗೆ ಡಾ.‌ಜಿ ಪರಮೇಶ್ವರ್ ಮಾತನಾಡಿ ಹೋಗಿದ್ದಾರೆ. ನೀವು ಪಕ್ಷಕ್ಕೆ ಬಂದ ಮೇಲೆ ಒಳ್ಳೆಯದಾಗಿದೆ. ನಾನು ಬಂದ ಮೇಲೆ ಲಿಂಗಾಯತರ ಮತಗಳು ಕೂಡ ಬಂದಿದೆ.

ಎಂಎಲ್​​ಎ ಸೀಟ್ ಸಲುವಾಗಿ ಭಾರತೀಯ ಜನತಾ ಪಾರ್ಟಿ ಕಿರಿ ಕಿರಿ ಮಾಡ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಸಾಕಷ್ಟು ನಾಯಕರು ಪಕ್ಷ ಬಿಟ್ಟಿದ್ದಾರೆ. ಲಕ್ಷ್ಮಣ್ ಸವದಿ ಸೇರಿದಂತೆ ಸಾಕಷ್ಟು ಜನ ಪಕ್ಷ ಬಿಟ್ಟಿದ್ದಾರೆ. ಹೋಗುವಂತ ಸಂದರ್ಭದಲ್ಲಿ ಮಾತನಾಡಿಸುವ ಸಣ್ಣ ಕೆಲಸವನ್ನೂ ಬಿಜೆಪಿ ಅವರು ಮಾಡಲಿಲ್ಲ. ಅಪಮಾನ ಮಾಡಿರುವುದರಿಂದಲೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಹೇಳಿದರು.

ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಇಡೀ ಬಿಜೆಪಿ ಸೋಲುವಂತಾಯ್ತು. ಜಗದೀಶ್ ಶೆಟ್ಟರನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಲಾಗಿದೆ. ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ರಿ ಎಂದು ಬಿಜೆಪಿಗೆ ಪ್ರಶ್ನಿಸಿದರು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯವರು ಕರೆದ್ರಾ..? ಬಿಜೆಪಿ ಪಕ್ಷ ಬಿಟ್ಟು ಬಂದಿದ್ದೇನೆ. ಇನ್ನು ಮುಂದೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಕಾಂಗ್ರೆಸ್ ನಲ್ಲೇ ಮುಂದುವರೆಯುತ್ತೇನೆ ಎಂದರು.

ಸಿಎಂ ಆಯ್ಕೆ ಗೊಂದಲ ವಿಚಾರ ಎಲ್ಲರ ಸಮ್ಮುಖದಲ್ಲಿ ತೀರ್ಮಾನ ಮಾಡಲಿ. ಯಾರಿಗೆ ಸೂಕ್ತ ಅಂತ ಹೇಳ್ತಾರೋ ಅವರಿಗೆ ಸಿಎಂ ಪಟ್ಟ ಸಿಗುವಂತಾಗಲಿ. ಸಚಿವ ಸಂಪುಟಕ್ಕೆ ನನ್ನ ಕರೆದಿಲ್ಲ. ಹೋಗುವುದರ ಬಗ್ಗೆಯೂ ನಾನು ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಬಿ.ಎಲ್ ಸಂತೋಷ್ ಅಂತವರಿಂದ ಬಿಜೆಪಿಗೆ ಈ ದುಸ್ಥಿತಿ ಬಂದಿದೆ. ಪಕ್ಷದ ಎಲ್ಲರನ್ನೂ ಕಂಟ್ರೋಲ್ ಮಾಡೋಕೆ ಹೋಗಿ ಈ ರೀತಿ ಆಗಿದೆ. ಸಿಟಿ ರವಿ ಸೋಲು ಆಗಿದೆ. ದುರಹಂಕಾರ ಬಂದಾಗ ಆ ರೀತಿಯಾದಂತಹ ಫಲಿತಾಂಶ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಗ್ಯಾರಂಟಿ ಕೊಡುಗೆಗೆ ಕಂಡೀಷನ್ಸ್ ಅಪ್ಲೈ ಮಾಡಬೇಡಿ: ಮಾಜಿ ಸಚಿವ ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.