ETV Bharat / state

ಸ್ನೇಹಿತರೊಂದಿಗೆ ಸಹಕರಿಸುವಂತೆ ಒತ್ತಾಯ: ಬೆಂಗಳೂರಿನಲ್ಲಿ ವಿಕೃತ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

author img

By ETV Bharat Karnataka Team

Published : Oct 16, 2023, 10:03 AM IST

''ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಪತಿ ಒತ್ತಾಯ ಮಾಡುತ್ತಿದ್ದಾನೆ'' ಎಂದು ಆರೋಪಿಸಿ ವಿಕೃತ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Wife who complains against her husband
ಸ್ನೇಹಿತರೊಂದಿಗೆ ಸಹಕರಿಸುವಂತೆ ಒತ್ತಾಯ: ವಿಕೃತ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ''ದಾಂಪತ್ಯದ ರಹಸ್ಯಗಳನ್ನು ತನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತಾನೆ. ಜೊತೆಗೆ ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಗಂಡನೇ ಒತ್ತಾಯಿಸುತ್ತಿದ್ದಾನೆ'' ಎಂದು ಆರೋಪಿಸಿದ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. 42 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಆಕೆಯ ಪತಿಯ ವಿರುದ್ಧ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರಳು ಹಾಗೂ ಆರೋಪಿಗೆ 2007ರಲ್ಲಿ ಹಿರಿಯರ ನಿಶ್ಚಯದಂತೆ ಮದುವೆಯಾಗಿತ್ತು. ದಂಪತಿಗೆ 11 ವರ್ಷದ ಮಗ ಹಾಗೂ 10 ವರ್ಷದ ಮಗಳಿದ್ದು, ಇಬ್ಬರೂ ಸಹ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ, ಅಚಾನಕ್ಕಾಗಿ ಗಂಡನ ಮೆಸೇಜ್ ಚಾಟ್ಸ್ ಪರಿಶೀಲಿಸಿದಾಗ, ಆತ ತಮ್ಮಿಬ್ಬರ ದೈಹಿಕ ಸಂಬಂಧದ ಕುರಿತು ತನ್ನ ಸ್ನೇಹಿತರೊಂದಿಗೆ ಮಾತನಾಡಿರುವುದು, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಚರ್ಚಿಸಿರುವುದು ಪತ್ತೆಯಾಗಿತ್ತು. ಇದನ್ನು ಪ್ರಶ್ನಿಸಿದಾಗ ಆರೋಪಿಯು 'ನಿನಗೆ ನಿನ್ನ ಮಕ್ಕಳಿಗೆ ಜೀವನಾಂಶ ಕೊಡುವುದಿಲ್ಲವೆಂದು' ಗಲಾಟೆ ಮಾಡಿ, ಸಾಯಿಸುವುದಾಗಿ ಬೆದರಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

''ಇದಾದ ನಂತರವೂ ಸಹ ದೂರುದಾರಳ ಪೋಷಕರು ಹಾಗೂ ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಲಾಗಿದ್ದು, ದಂಪತಿ ಬಳ್ಳಾರಿ ರಸ್ತೆಯ ಅಪಾರ್ಟ್‌ಮೆಂಟ್​ನಲ್ಲಿ ವಾಸವಿದ್ದರು. ಆದರೆ, ಕಳೆದ ಕೆಲ‌ ತಿಂಗಳಿಂದ ಗಂಡ ತನ್ನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದಾನೆ'' ಎಂದು ನೊಂದ ಮಹಿಳೆ ಆರೋಪ ಮಾಡಿದ್ದಾಳೆ.

ಸದ್ಯ ನೊಂದ ಮಹಿಳೆಯ ದೂರಿನ ಅನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ- ಬಾಲಕಿ ಮೇಲೆ ಅತ್ಯಾಚಾರ ಆರೋಪ, ಸಂಗೀತ ಮಾಸ್ಟರ್ ಬಂಧನ : ಮತ್ತೊಂದೆಡೆ, ಸಂಗೀತ ಕಲಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪಟ್ಟಣದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಕುದೂರಿನ ನಿವಾಸಿ ರಾಮಾಂಜನೇಯ (48) ಬಂಧಿತ ಆರೋಪಿ. 15 ವರ್ಷದ ಬಾಲಕಿಗೆ ಸಂಗೀತ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದನು ಎಂದು ಪೊಲೀಸರು ತಿಳಿಸಿದ್ದರು. ಶಾಲೆಗೆ ತೆರಳಿದ್ದ ಬಾಲಕಿ ಹೊಟ್ಟೆ ನೋವು ಎಂದು ತಿಳಿಸಿದಾಗ ಪೋಷಕರನ್ನು ಕರೆಸಿ ವಿಚಾರಿಸಲಾಗಿತ್ತು.

ನಂತರ, ಚಿಕಿತ್ಸೆ ಕೊಡಿಸುವಂತೆ ಶಿಕ್ಷಕರು ಪೋಷಕರೊಂದಿಗೆ ಬಾಲಕಿಯನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗಳು ಗರ್ಭಿಣಿಯಾಗಿರುವ ವಿಚಾರ ಪೋಷಕರಿಗೆ ತಿಳಿದಿತ್ತು. ಬಳಿಕ ಪೋಷಕರು ಬಾಲಕಿಯನ್ನು ಕೇಳಿದಾಗ ಸಂಗೀತ ಮಾಸ್ಟರ್ ಕೃತ್ಯದ ಬಗ್ಗೆ ತಿಳಿಸಿದ್ದಳು. ಈ ಕುರಿತು ಪೋಷಕರು ಆರೋಪಿಯ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಕುರಿತು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್​ ದಾಖಲಾಗಿತ್ತು.

ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಅಗ್ನಿವೀರ್​ ಅಮೃತಪಾಲ್ ಅಂತ್ಯಕ್ರಿಯೆ ವಿವಾದ: ಗೌರವ ನಿರಾಕರಣೆ ಬಗ್ಗೆ ಸ್ಪಷ್ಟನೆ ನೀಡಿದ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.