ETV Bharat / state

ಸಮಗ್ರ ಕೃಷಿ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ - Agricultural Employment Fair

ಮಂಡೂರು ಜಿಪಂ ವತಿಯಿಂದ ಬೆಂ.ಪೂರ್ವ ತಾಲೂಕು ಮಟ್ಟದಲ್ಲಿ ಇದೇ ಸೋಮವಾರ ಕೃಷಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಮಗ್ರ ಕೃಷಿ ಅಭಿಯಾನ ಬಿತ್ತಿ ಚಿತ್ರವುಳ್ಳ ವಾಹನಕ್ಕೆ ಮಂಡೂರು ಜಿಲ್ಲಾ ಪಂಚಾಯ್ತಿ ಸದಸ್ಯ ಡಾ. ಕೆ.ಕೆಂಪರಾಜು ಹಸಿರು ನಿಶಾನೆ ತೋರಿದರು.

ಸಮಗ್ರ ಕೃಷಿ ಅಭಿಯಾನ
author img

By

Published : Aug 25, 2019, 4:45 AM IST

ಬೆಂಗಳೂರು: ಮಂಡೂರು ಜಿಲ್ಲಾ ಪಂಚಾಯಿತಿ ವತಿಯಿಂದ ಬೆಂಗಳೂರು ಪೂರ್ವ ತಾಲೂಕು ಮಟ್ಟದಲ್ಲಿ ಇದೇ ಸೋಮವಾರ ಕೃಷಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಮಗ್ರ ಕೃಷಿ ಅಭಿಯಾನ ಭಿತ್ತಿ ಚಿತ್ರವುಳ್ಳ ವಾಹನಕ್ಕೆ ಮಂಡೂರು ಜಿಪಂ ಸದಸ್ಯ ಡಾ. ಕೆ.ಕೆಂಪರಾಜು ಹಸಿರು ನಿಶಾನೆ ತೋರಿದರು.

ಸಮಗ್ರ ಕೃಷಿ ಅಭಿಯಾನ

ಬಿದರಹಳ್ಳಿ ಕೃಷಿ ಕೇಂದ್ರದಿಂದ ಹೊರಟ ಈ ವಾಹನ ಬೆಂಗಳೂರು ಪೂರ್ವ ತಾಲೂಕಿನ ಗ್ರಾಮಗಳಲ್ಲಿ 2 ದಿನಗಳ ಪ್ರಚಾರ ಕಾರ್ಯ ನಡೆಸಲಿದೆ. ಕರ್ನಾಟಕ ರಾಜ್ಯದಲ್ಲೆ ಇದೇ ಮೊದಲ ಬಾರಿಗೆ ‘ಬರಡು ಭೂಮಿಯಲ್ಲಿ ಬಂಗಾರ’ ಎಂಬ ಕಾರ್ಯಕ್ರಮ ರೈತರು ಹಾಗೂ ರೈತರ ಮಕ್ಕಳಿಗೆ ಉಪಯೋಗವಾಗಿದೆ. ನೀಲಗಿರಿ ಬೆಳೆಯನ್ನು ನಿಷೇಧಿಸಿರುವುದರಿಂದ ಅದರ ಪರ್ಯಾಯ ಮಾರ್ಗವಾಗಿ ಒಂದಕ್ಕೆ ನಾಲ್ಕರಷ್ಟು ಆದಾಯ ಗಳಿಸುವ ಹೊಸ ಉಪಾಯವನ್ನು ರೂಪಿಸಲಾಗಿದೆ. ರಾಜಕಾಲುವೆ, ಮನೆ ಅಂಗಳದಲ್ಲಿನ ಖಾಲಿ ಜಾಗದಲ್ಲಿ ಉಪಯುಕ್ತ ಶ್ರೀಗಂಧ, ಹಲಸು, ನೇರಳೆ , ಬಿಲ್ವಪತ್ರೆ, ಸಿಲ್ವರ್ ಓಕ್, ಹೆಬ್ಬೆವು, ಸಂಪಿಗೆ, ನುಗ್ಗೆ ಇತ್ಯಾದಿ ಮರಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ರೈತರು ಕಾರ್ಖಾನೆಗಳ ಕೆಲಸಕ್ಕೆ ಅವಲಂಬಿತರಾಗದೆ ಮನೆಯಲ್ಲೆ ಇದ್ದು ಕೃಷಿ ಚಟುವಟಿಕೆ ಮೂಲಕ ಹಣ ಗಳಿಸಲು ಇದು ಸಹಕಾರಿಯಾಗಲಿದೆ.

ಸೋಮವಾರ ನಡೆಯುವ ಕೃಷಿ ಉದ್ಯೋಗ ಮೇಳದಲ್ಲಿ ಅರಣ್ಯ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಭಾಗವಹಿಸಲಿದ್ದು, ಇವುಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಜಿಪಂ ಸದಸ್ಯ ಕೆಂಪರಾಜು ತಿಳಿಸಿದ್ದಾರೆ.

Intro:ಬಿದರಹಳ್ಳಿ

ಸಮಗ್ರ ಕೃಷಿ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ.

ಬೆಂಗಳೂರು ನಗರ ಜಿಲ್ಲೆ, ಮಂಡೂರು ಜಿಲ್ಲಾ  ಪಂಚಾಯ್ತಿ ವತಿಯಿಂದ ಬೆಂ. ಪೂರ್ವ ತಾಲೂಕು ಮಟ್ಟದಲ್ಲಿ ಇದೇ ಸೋಮವಾರ(26-08-19) ರಂದು ಕೃಷಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು  ಸಮಗ್ರ ಕೃಷಿ ಅಭಿಯಾನ ಬಿತ್ತಿ ಚಿತ್ರ ಉಳ್ಳ ವಾಹನಕ್ಕೆ ಮಂಡೂರು ಜಿಲ್ಲಾ ಪಂಚಾಯ್ತಿ ಸದಸ್ಯ ಡಾ. ಕೆ.ಕೆಂಪರಾಜು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.Body:ಬಿದರಹಳ್ಳಿ ಕೃಷಿ ಕೇಂದ್ರದಿಂದ ಹೊರೆಟ ಈ ವಾಹನ ಬೆಂಗಳೂರು ಪೂರ್ವ ತಾಲೂಕಿನ ಗ್ರಾಮಗಳಲ್ಲಿ ಎರಡು ದಿನಗಳ ಪ್ರಚಾರ ಕಾರ್ಯ ನಡೆಸಲಿದೆ. ಕರ್ನಾಟಕ ರಾಜ್ಯದಲ್ಲೆ ಇದೇ ಮೊದಲ ಭಾರಿಗೆ ಬರಡು ಭೂಮಿಯಲ್ಲಿ ಬಂಗಾರ ಎಂಬ ಕಾರ್ಯಕ್ರಮದಡಿ ರೈತರು ಹಾಗೂ ರೈತರ ಮಕ್ಕಳು ಹಣ ಗಳಿಸುವ ಈ ಕಾರ್ಯಕ್ರಮವನ್ನು ಉಪಯೋಗವಾಗಿದೆ. ನೀಲಗಿರಿ ಬೆಳೆಯನ್ನು ನಿಷೇದಿಸಿರುವುದರಿಂದ ಅದರ ಪರ್ಯಾಯ ಮಾರ್ಗವಾಗಿ ಒಂದಕ್ಕೆ ನಾಲ್ಕರಷ್ಟು ಆದಾಯ ಗಳಿಸುವ ಸಲುವಾಗಿ ಜೊತೆಗೆ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಜೊತೆಗೆ ರಾಜಕಾಲುವೆ, ಮನೆ ಅಂಗಳದಲ್ಲಿನ ಕಾಲಿ ಜಾಗದಲ್ಲಿ ಉಪಯುಕ್ತ ಶ್ರೀಗಂಧ, ಹಲಸು, ನೇರಳೆ , ಬಿಲ್ಲಪತ್ರೆ, ಸಿಲ್ವರ್ ಓಕ್, ಹೆಬ್ಬೆವು, ಸಂಪಿಗೆ ,ನುಗ್ಗೆ ಇತ್ಯಾದಿ ಮರಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ರೈತರು ಕಾರ್ಖಾನೆಗಳ ಕೆಲಸಕ್ಕೆ ಅವಲಂಬಿತರಾಗದೆ ಮನೆಯಲ್ಲೆ ಇದ್ದು ಕೃಷಿ ಚಟುವಟಿಕೆ ಮೂಲಕ ಅದಕ್ಕಿಂದ ಹೆಚ್ಚಿನ ಹಣ ಗಳಿಸಲು ಇದು ಸಹಕಾರಿಯಾಗಿದ್ದು ಸೋಮವಾರ ನಡೆಯುವ ಕೃಷಿ ಉದ್ಯೋಗ ಮೇಳದಲ್ಲಿ ಅರಣ್ಯ  ಇಲಾಖೆ, ಕೃಷಿ ಇಲಾಖೆ, ಮೀನುಗಾರಿಗೆ, ಪಶು ಇಲಾಖೆ, ತೋಟಗಾರಿಕೆ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಗವಹಿಸಿ ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಪರಾಜು ತಿಳಿಸಿದ್ದಾರೆ.

Conclusion:ಬೈಟ್: ಕೆಂಪರಾಜು, ಜಿ.ಪಂ ಸದಸ್ಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.