ಬೆಂಗಳೂರು: ಸರ್ವೀಸ್ಗೆಂದು ಬಿಟ್ಟಿದ್ದ ಮಾಜಿ ಮೇಯರ್ ಪಿ. ಆರ್ ರಮೇಶ್ ಕಾರಿನಲ್ಲಿ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡು ಊರಿಂದೂರಿಗೆ ಜಾಲಿ ರೈಡ್ ಮಾಡಿದ್ದು. ತಮ್ಮ ಕಾರುನ್ನು ದುರ್ಬಳಕೆ ಮಾಡಿಕೊಂಡ ಶೋರೂಂ ವಿರುದ್ಧ ರಮೇಶ್ ದೂರು ನೀಡಿದ್ದಾರೆ.
ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಪಕ್ಷದ ಎಂಎಲ್ಸಿಯಾಗಿದ್ದ ರಮೇಶ್ ಅವರ ಪತ್ನಿ ಸರಸ್ವತಿ ತಮ್ಮ ಇನ್ನೋವಾ ಕಾರನ್ನು ರಿಪೇರಿಗೆ ಎಂದು ಸೆಪ್ಟೆಂಬರ್ 7 ರಂದು ಬೆಂಗಳೂರಿನ ರಾಜಾಜಿನಗರದ ರವೀಂದು ಟೋಯೋಟ ಸರ್ವಿಸ್ ಸೆಂಟರ್ನಲ್ಲಿ ಬಿಟ್ಟಿದ್ದರು.
ಆದರೆ ಸೆಪ್ಟೆಂಬರ್ 11 ರಂದು ಮಧ್ಯರಾತ್ರಿ ಕಾರು ಚಿತ್ರದುರ್ಗ ಟೋಲ್ಗಳನ್ನು ದಾಟಿ 200 ಕಿಲೋಮೀಟರ್ ದೂರಕ್ಕೆ ಹೋಗಿದೆ. ರಿಪೇರಿಗೆ ಬಿಟ್ಟಿದ್ದ ಕಾರಿನಲ್ಲಿ ರಾಜಧಾನಿ ಬಿಟ್ಟು ತೆರಳಿರುವುದು ತಿಳಿದು ಬಂದಿದೆ.
ಟೋಲ್ಗಳಲ್ಲಿ ಕಾರು ಪಾಸ್ ಆಗಿ ಫಾಸ್ಟ್ಟ್ಯಾಗ್ ಮೂಲಕ ಹಣ ಕಡಿತವಾಗಿದೆ. ರಿಪೇರಿಗೆ ಬಿಟ್ಟಿದ್ದ ಕಾರು ಟೋಲ್ಗಳನ್ನು ದಾಟಿದ ಮೆಸೇಜ್ ಮಾಲೀಕರಿಗೆ ಬಂದಿತ್ತು. ಫಾಸ್ಟ್ ಟ್ಯಾಗ್ನಲ್ಲಿ ಹಣ ಏಕಾಏಕಿ ಹಣ ಕಡಿತವಾಗಿದ್ದು ನೋಡಿ ಗಾಬರಿಯಾಗಿದ್ದ ರಮೇಶ್ ದಂಪತಿ ಷೋ ರೂಂಗೆ ಹೋಗಿ ವಿಚಾರಿಸಿದ್ದಾರೆ.
ಆದರೆ ಅಲ್ಲಿ ಸಮಂಜಸ ಉತ್ತರ ಬಾರದಿದ್ದಾಗ. ಕಾರಿನ ದುರ್ಬಳಕೆ, ನಂಬಿಕೆ ದ್ರೋಹ ಹಾಗೂ ವಂಚನೆಯಡಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ 406, 420 ಅಡಿ ಎಫ್.ಐ.ಆರ್ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ:ಡೇಟಿಂಗ್ ವೆಬ್ಸೈಟ್ನಲ್ಲಿ ಕಾಲ್ಗರ್ಲ್ಗೆ ಕರೆ ಮಾಡಿ 19 ಸಾವಿರ ರೂ. ಕಳೆದುಕೊಂಡ ಚಾಲಕ