ಬೆಂಗಳೂರು: ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ನಲ್ಲಿ ಇಡಲು ಹೋಟೆಲ್ ನೀಡದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.
ಶಂಕಿತರನ್ನು ಗುರುತಿಸಿ ನಗರದ ಹೋಟೆಲ್, ಮದುವೆ ಮಂಟಪಗಳಲ್ಲಿ ಇರಿಸಿ ಕಣ್ಣಿಡಲಾಗಿದೆ. ಆದರೆ ಕ್ವಾರಂಟೈನ್ಗಾಗಿ ಹೋಟೆಲ್ ರೂಮ್ ನೀಡಲು ನಿರಾಕರಿಸಿದ ಮಾಲೀಕರ ವಿರುದ್ಧ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋರ್ಗೆ ಬಿಬಿಎಂಪಿ ಜಂಟಿ ಆಯುಕ್ತರು ದೂರು ನೀಡಿದ್ದಾರೆ. ಹೋಟೆಲ್ ನೀಡದ ಮಾಲೀಕರ ವಿರುದ್ಧದ ದೂರಿನಲ್ಲಿ, ನಗರದಲ್ಲಿ ಕೊರೊನಾ ಸೊಂಕು ಹೆಚ್ಚಾಗ್ತಿದೆ. ಸೋಂಕಿತರ ಜೊತೆ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದವರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಬಿಬಿಎಂಪಿ ನಗರದ ಹೋಟೆಲ್ಗಳನ್ನು ವಶಕ್ಕೆ ಪಡೆದು ಶಂಕಿತರನ್ನ ಕ್ವಾರಂಟೈನ್ ಮಾಡ್ತಿದೆ. ಹಾಗೆಯೇ ಕೆಲ ಹೋಟೆಲ್ಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ ಕೆಲ ಮಾಲೀಕರು ಕ್ವಾರಂಟೈನ್ಗೆ ಹೋಟೆಲ್ ನೀಡಲು ಹಿಂದೆಟು ಹಾಕುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆದರೆ ಸದ್ಯ ಹೋಟೆಲ್ಗಳ ಬಾಗಿಲು ಹಾಕಿದ್ದು, ವ್ಯಾಪಾರ ಸ್ಥಗಿತವಾಗಿದೆ. ಈ ಸಮಯದಲ್ಲಿ ಹೋಟೆಲ್ಗಳನ್ನು ಕ್ವಾರಂಟೈನ್ಗೆ ನೀಡಿದರೆ ಮುಂದೆ ಯಾರೂ ಹೋಟೆಲ್ಗೆ ಬರಲ್ಲ ಎಂದು ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ.