ETV Bharat / state

ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ... ಯಾರಾಗ್ತಾರೆ ಬಿಬಿಎಂಪಿ ನೂತನ ಸಾರಥಿ? - ಪದ್ಮನಾಭ ರೆಡ್ಡಿ

ರಾಜ್ಯದಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಏರುತ್ತಿದ್ದಂತೆ, ಬಿಬಿಎಂಪಿ ಲೆಕ್ಕಾಚಾರವು ತಲೆಕೆಳಗಾಗಿದೆ. ಮೇಯರ್ ಗದ್ದುಗೆ ಏರಲು ಬಿಜೆಪಿಯ ಐವರ ಹೆಸರು ಮುಂಚೂಣಿಯಲ್ಲಿದೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದ್ದು, ಮುಂಚೂಣಿಯಲ್ಲಿ ಐವರ ಹೆಸರು ಕೇಳಿಬರುತ್ತಿದೆ.
author img

By

Published : Sep 15, 2019, 3:17 AM IST

Updated : Sep 15, 2019, 7:07 AM IST

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಏರುತ್ತಿದ್ದಂತೆ, ಬಿಬಿಎಂಪಿ ಲೆಕ್ಕಾಚಾರವು ತಲೆಕೆಳಗಾಗಿ, ಮೈತ್ರಿ ಆಡಳಿತದ ನಾಲ್ಕು ವರ್ಷದ ಆಡಳಿತ ಮುಗಿಯುತ್ತಿದ್ದಂತೆ ಕಮಲ ಪಕ್ಷದಿಂದ ಮೇಯರ್ ಗದ್ದುಗೆ ಏರಲು ಸಿದ್ಧತೆ ನಡೆದಿದೆ.

ಆದರೆ ಮೇಯರ್ ಗಾದಿಗೆ ಬಿಜೆಪಿಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಮುಂಚೂಣಿಯಲ್ಲಿ ಐವರ ಹೆಸರು ಕೇಳಿಬರುತ್ತಿದೆ. ಈವರೆಗೆ ಪ್ರತಿಪಕ್ಷ ನಾಯಕರಾಗಿದ್ದ ಪದ್ಮನಾಭ ರೆಡ್ಡಿ, ಗೋವಿಂದರಾಜ ನಗರದ ಉಮೇಶ್ ಶೆಟ್ಟಿ, ಕುಮಾರಸ್ವಾಮಿ ಬಡಾವಣೆಯ ಎಲ್. ಶ್ರೀನಿವಾಸ್, ಕಾಡುಮಲ್ಲೇಶ್ವರ ವಾರ್ಡ್​ನ ಮಂಜುನಾಥ್ ರಾಜು ಸೇರಿದಂತೆ ಜಕ್ಕೂರು ವಾರ್ಡ್​ನ ಮುನೀಂದ್ರಕುಮಾರ್ ಅವರ ಹೆಸರುಗಳು ಮೇಯರ್ ರೇಸ್​ನಲ್ಲಿ ಕೇಳಿಬರುತ್ತಿವೆ. ತಮ್ಮ ತಮ್ಮ ಕ್ಷೇತ್ರದ ಶಾಸಕರ ಬೆಂಬಲದೊಂದಿಗೆ ಲಾಬಿ ಆರಂಭವಾಗಿದ್ದು, ಅಂತಿಮವಾಗಿ ಪಕ್ಷದ ಆಯ್ಕೆಯೇ ಮೇಯರ್, ಉಪಮೇಯರ್ ಯಾರೆಂಬದು ನಿರ್ಧಾರವಾಗಲಿದೆ.

3ನೇ ಬಾರಿಗೆ ಕಾರ್ಪೋರೇಟರ್ ಆಗಿರುವ ಎಲ್ ಶ್ರೀನಿವಾಸ್ 2012ರಲ್ಲಿ ಉಪಮೇಯರ್ ಸ್ಥಾನ ಅಲಂಕರಿಸಿದ್ದರೂ, ಮತ್ತೆ ಮೇಯರ್ ಸ್ಥಾನಕ್ಕಾಗಿ ತಮ್ಮ ಕ್ಷೇತ್ರದ ಶಾಸಕ ಹಾಗೂ ಕಂದಾಯ ಸಚಿವರಾಗಿರುವ ಆರ್.ಅಶೋಕ್ ಮುಖಾಂತರ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಸರ್ಕಾರದಲ್ಲಿ ಉಪಮೇಯರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಪ್ರಭಾವಿ ಮುಖಂಡ ಅಶ್ವಥ್ ನಾರಾಯಣ್ ಮುಖಾಂತರ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಮಂಜುನಾಥ್ ರಾಜು ಮುಂದಾಗಿದ್ದಾರೆ.

ಅಲ್ಲದೆ ಬಿಜೆಪಿಯಲ್ಲಿ ಈವರೆಗೂ ದಕ್ಷಿಣ ಕ್ಷೇತ್ರಗಳಿಗೇ ಹೆಚ್ಚಿನ ಮೇಯರ್ ಸ್ಥಾನ ಕೊಟ್ಟಿರುವುದರಿಂದ ಎಲ್. ಶ್ರೀನಿವಾಸ್ ಬದಲಿಗೆ ಎರಡನೇ ಬಾರಿ ಆಯ್ಕೆಯಾಗಿರುವ ಮಂಜುನಾಥ್ ರಾಜುವನ್ನು ಮೇಯರ್​ ಮಾಡುವ ಸಾಧ್ಯತೆಯೂ ಇದೆ. ಇತ್ತ ಪದ್ಮನಾಭ ರೆಡ್ಡಿಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿರುವ ಗೋವಿಂದರಾಜ ನಗರದ ಉಮೇಶ್ ಶೆಟ್ಟಿ, ಸಚಿವ ವಿ. ಸೋಮಣ್ಣ ಬೆಂಬಲದಲ್ಲಿ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಬೆಂಬಲದಿಂದ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವ ಆಕಾಂಕ್ಷೆಯಲ್ಲಿದ್ದಾರೆ.

ಅಷ್ಟೆ ಅಲ್ಲದೆ ಚೆನ್ನಾಗಿ ಕೆಲಸ ಮಾಡಿದ್ದರಿಂದಲೇ 4 ವರ್ಷ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದರು. ಹೀಗಾಗಿ ಬಿಜೆಪಿ ಆಡಳಿತದಲ್ಲಿ ಮೇಯರ್ ಸ್ಥಾನ ಗ್ಯಾರಂಟಿ ಎಂಬ ಭರವಸೆಯಲ್ಲಿ ಪದ್ಮನಾಭ ರೆಡ್ಡಿ ಇದ್ದರೆ. ಮುನೀಂದ್ರ ಕುಮಾರ್ ಹೆಸರು ಕೂಡಾ ಮುನ್ನಲೆಗೆ ಬಂದಿದೆ. ಒಟ್ಟಿನಲ್ಲಿ ಯಾರು ಮೇಯರ್ ಸ್ಥಾನದ ಗದ್ದುಗೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೆ ಮಹಿಳಾ ಕಾರ್ಪೋರೇಟರ್ಸ್ಸಂ ಖ್ಯೆ ಹೆಚ್ಚಿದ್ದು, ಉಪಮೇಯರ್ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಬಂದಿದೆ.

ಚುನಾವಣೆ ದಿನದ ಲೆಕ್ಕಾಚಾರ ಹೀಗಿದೆ:

ಈಗಾಗಲೇ ಸೆಪ್ಟೆಂಬರ್ 27 ಬೆಳಗ್ಗೆ 11-30 ಕ್ಕೆ ಚುನಾವಣೆ ನಿಗದಿಯಾಗಿದೆ. ಅನರ್ಹವಾಗಿರುವ ಕಾಂಗ್ರೆಸ್​ನ ನಾಲ್ವರು ಮತ್ತು ಜೆಡಿಎಸ್​ನ ಒಬ್ಬರು ಶಾಸಕರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮತದಾರರ ಸಂಖ್ಯೆ 257ಕ್ಕೆ ಇಳಿದಿದೆ. ಹೀಗಾಗಿ, ಮ್ಯಾಜಿಕ್ ಸಂಖ್ಯೆ 129ಕ್ಕೆ ಇಳಿದಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷೇತರರು ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂಬುದು ಬಹುತೇಕ ಖಚಿತ. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸಾಮಾನ್ಯ (ಮಹಿಳಾ) ವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

  • ಮತದಾರರ ವಿವರ:
  • ಬಿಬಿಎಂಪಿ ಸದಸ್ಯರು:
  • ಬಿಜೆಪಿ: 101
  • ಕಾಂಗ್ರೆಸ್: 76
  • ಜೆಡಿಎಸ್: 14
  • ಪಕ್ಷೇತರರು: 6 (1)
  • ಒಟ್ಟು: 198
  • ಶಾಸಕರು:
  • ಬಿಜೆಪಿ: 11
  • ಕಾಂಗ್ರೆಸ್: 11
  • ಜೆಡಿಎಸ್: 1
  • ಒಟ್ಟು: 23
  • ವಿಧಾನಪರಿಷತ್ ಸದಸ್ಯರು:
  • ಬಿಜೆಪಿ: 7
  • ಕಾಂಗ್ರೆಸ್: 10
  • ಜೆಡಿಎಸ್: 5
  • ಒಟ್ಟು: 22
  • ಸಂಸದರು:
  • ಬಿಜೆಪಿ: 4
  • ಕಾಂಗ್ರೆಸ್: 1
  • ಒಟ್ಟು: 5
  • ರಾಜ್ಯಸಭಾ ಸದಸ್ಯರು:
  • ಬಿಜೆಪಿ: 02
  • ಕಾಂಗ್ರೆಸ್: 06
  • ಜೆಡಿಎಸ್: 01
  • ಒಟ್ಟು: 09
  • ಪಕ್ಷವಾರು ಮತದಾರರ ವಿವರ:
  • ಬಿಜೆಪಿ: 125
  • ಕಾಂಗ್ರೆಸ್: 104
  • ಜೆಡಿಎಸ್: 21
  • ಪಕ್ಷೇತರರು: 7
  • ಒಟ್ಟು: 257
  • ಮ್ಯಾಜಿಕ್ ಸಂಖ್ಯೆ: 129

Intro:ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ- ಯಾರಾಗ್ತಾರೆ ಮುಂದಿನ ಮೇಯರ್?

ಬೆಂಗಳೂರು- ರಾಜ್ಯ ಸರ್ಕಾರದಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಏರುತ್ತಿದ್ದಂತೆ, ಬಿಬಿಎಂಪಿ ಲೆಕ್ಕಾಚಾರವು ತಲೆಕೆಳಗಾಗಿ, ಮೈತ್ರಿ ಆಡಳಿತದ ನಾಲ್ಕು ವರ್ಷದ ಆಡಳಿತ ಮುಗಿಯುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಮೇಯರ್ ಗದ್ದುಗೆ ಏರಲು ಸಜ್ಜಾಗಿದ್ದಾರೆ.
ಆದರೆ ಪಕ್ಷದೊಳಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಮುಂಚೂಣಿಯಲ್ಲಿ ಐವರ ಹೆಸರು ಕೇಳಿಬರುತ್ತಿದೆ. ಈವರೆಗೂ ವಿಪಕ್ಷ ನಾಯಕನಾಗಿದ್ದ ಪದ್ಮನಾಭ ರೆಡ್ಡಿ, ಗೋವಿಂದರಾಜ ನಗರದ ಉಮೇಶ್ ಶೆಟ್ಟಿ, ಕುಮಾರಸ್ವಾಮಿ ಬಡಾವಣೆಯ ಎಲ್ ಶ್ರೀನಿವಾಸ್, ಕಾಡುಮಲ್ಲೇಶ್ವರ ವಾರ್ಡ್ ನ ಮಂಜುನಾಥ್ ರಾಜು ಸೇರಿದಂತೆ ಜಕ್ಕೂರು ವಾರ್ಡ್ ನ ಮುನೀಂದ್ರಕುಮಾರ್ ಅವರ ಹೆಸರುಗಳು ಮೇಯರ್ ರೇಸ್ ನಲ್ಲಿ ಕೇಳಿಬರುತ್ತಿವೆ. ತಮ್ಮ ತಮ್ಮ ಕ್ಷೇತ್ರದ ಶಾಸಕರ ಬೆಂಬಲದೊಂದಿಗೆ ಲಾಬಿ ಆರಂಭವಾಗಿದ್ದು, ಅಂತಿಮವಾಗಿ ಪಕ್ಷದ ಆಯ್ಕೆಯೇ ಮೇಯರ್ , ಉಪಮೇಯರ್ ಯಾರೆಂಬದು ನಿರ್ಧಾರವಾಗಲಿದೆ.
ಮೂರನೇ ಬಾರಿಗೆ ಕಾರ್ಪೋರೇಟರ್ ಆಗಿರುವ ಎಲ್ ಶ್ರೀನಿವಾಸ್ 2012 ರಲ್ಲಿ ಉಪಮೇಯರ್ ಸ್ಥಾನ ಅಲಂಕರಿಸಿದ್ದರೂ, ಮತ್ತೆ ಮೇಯರ್ ಸ್ಥಾನಕ್ಕಾಗಿ ತಮ್ಮ ಕ್ಷೇತ್ರದ ಶಾಸಕ ಹಾಗೂ ಕಂದಾಯ ಸಚಿವರಾಗಿರುವ ಆರ್ ಅಶೋಕ್ ಮುಖಾಂತರ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಸರ್ಕಾರದಲ್ಲಿ ಉಪಮೇಯರ್ ಸ್ಥಾನ ಪಡೆಐವಲ್ಲಿ ಯಶಸ್ವಿಯಾದ ಪ್ರಭಾವಿ ಮುಖಂಡ ಅಶ್ವಥ್ ನಾರಾಯಣ್ ಮುಖಾಂತರ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಮಂಜುನಾಥ್ ರಾಜು ಮುಂದಾಗಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿ ಈವರೆಗೂ ದಕ್ಷಿಣ ಕ್ಷೇತ್ರಗಳಿಗೇ ಹೆಚ್ಚಿನ ಮೇಯರ್ ಸ್ಥಾನ ಕೊಟ್ಟಿರುವುದರಿಂದ ಎಲ್ ಶ್ರೀನಿವಾಸ್ ಬದಲಿಗೆ ಎರಡನೇ ಬಾರಿ ಆಯ್ಕೆಯಾಗಿರುವ ಮಂಜುನಾಥ್ ರಾಜುವನ್ನುಸೌಮ್ಯಶ್ರೀ
ಮಾಡುವ ಸಾಧ್ಯತೆಯೂ ಇದೆ. ಇತ್ತ ಪದ್ಮನಾಭ ರೆಡ್ಡಿಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿರುವ ಗೋವಿಂದರಾಜನಗರದ ಉಮೇಶ್ ಶೆಟ್ಟಿ , ಸಚಿವ ವಿ ಸೋಮಣ್ಣ ಬೆಂಬಲದಲ್ಲಿ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಬೆಂಬಲದಿಂದ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವ ಆಕಾಂಕ್ಷೆಯಲ್ಲಿದ್ದಾರೆ. ಅಷ್ಟೆ ಅಲ್ಲದೆ ಚೆನ್ನಾಗಿ ಕೆಲಸ ಮಾಡಿದ್ದರಿಂದಲೇ ನಾಲ್ಕು ವರ್ಷ ವಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದರು, ಹೀಗಾಗಿ ಬಿಜೆಪಿ ಆಡಳಿತದಲ್ಲಿ ಮೇಯರ್ ಸ್ಥಾನ ಗ್ಯಾರಂಟಿ ಎಂಬ ಭರವಸೆಯಲ್ಲಿ ಪದ್ಮನಾಭ ರೆಡ್ಡಿ ಇದ್ದರೆ, ಮುನೀಂದ್ರ ಕುಮಾರ್ ಹೆಸರು ಕೂಡಾ ಮುನ್ನಲೆಗೆ ಬಂದಿದೆ. ಒಟ್ಟಿನಲ್ಲಿ ಯಾರು ಮೇಯರ್ ಸ್ಥಾನದ ಗದ್ದುಗೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೆ ಮಹಿಳಾ ಕಾರ್ಪೋರೇಟರ್ಸ್ ಗಳ ಸಂಖ್ಯೆ ಹೆಚ್ಚಿದ್ದು, ಉಪಮೇಯರ್ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಬಂದಿದೆ.

ಚುನಾವಣೆ ದಿನದ ಲೆಕ್ಕಾಚಾರ ಹೀಗಿದೆ-

ಈಗಾಗಲೇ ಸೆಪ್ಟೆಂಬರ್ 27 ಬೆಳಗ್ಗೆ 11-30 ಕ್ಕೆ ಚುನಾವಣೆ ನಿಗದಿಯಾಗಿದೆ. ಅನರ್ಹವಾಗಿರುವ ಕಾಂಗ್ರೆಸ್ನ ನಾಲ್ವರು ಮತ್ತು ಜೆಡಿಎಸ್ ನ ಒಬ್ಬರು ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮತದಾರರ ಸಂಖ್ಯೆ 257ಕ್ಕೆ ಇಳಿದಿದೆ. ಹೀಗಾಗಿ, ಮ್ಯಾಜಿಕ್ ಸಂಖ್ಯೆ 129 ಕ್ಕೆ ಇಳಿದಿದೆ.
ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷೇತರರು ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂಬುದು ಬಹುತೇಕ ಖಚಿತ.
ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸಾಮಾನ್ಯ (ಮಹಿಳಾ)ವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಮತದಾರರ ವಿವರ:
ಬಿಬಿಎಂಪಿ ಸದಸ್ಯರು:
ಬಿಜೆಪಿ: 101
ಕಾಂಗ್ರೆಸ್: 76
ಜೆಡಿಎಸ್: 14
ಪಕ್ಷೇತರರು: 6 (*1)
ಒಟ್ಟು: 198
---
ಶಾಸಕರು:
ಬಿಜೆಪಿ: 11
ಕಾಂಗ್ರೆಸ್: 11
ಜೆಡಿಎಸ್: 1
ಒಟ್ಟು: 23
---
ವಿಧಾನಪರಿಷತ್ ಸದಸ್ಯರು:
ಬಿಜೆಪಿ: 7
ಕಾಂಗ್ರೆಸ್: 10
ಜೆಡಿಎಸ್: 5
ಒಟ್ಟು: 22
---
ಸಂಸದರು:
ಬಿಜೆಪಿ: 4
ಕಾಂಗ್ರೆಸ್: 1
ಒಟ್ಟು: 5
---
ರಾಜ್ಯಸಭಾ ಸದಸ್ಯರು:
ಬಿಜೆಪಿ: 02
ಕಾಂಗ್ರೆಸ್: 06
ಜೆಡಿಎಸ್: 01
ಒಟ್ಟು: 09
----
ಪಕ್ಷವಾರು ಮತದಾರರ ವಿವರ:
ಬಿಜೆಪಿ: 125
ಕಾಂಗ್ರೆಸ್: 104
ಜೆಡಿಎಸ್: 21
ಪಕ್ಷೇತರರು: 7
ಒಟ್ಟು: 257
ಮ್ಯಾಜಿಕ್ ಸಂಖ್ಯೆ: 129

ಸೌಮ್ಯಶ್ರೀ
Kn_bng_04_mayor_race_7202707Body:..Conclusion:..
Last Updated : Sep 15, 2019, 7:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.