ETV Bharat / state

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಲಭ್ಯ

ಮೆಟ್ರೋ ನಿಲ್ದಾಣದಲ್ಲಿರುವ ಆರ್​ಬಿಎಲ್​ ಬ್ಯಾಂಕ್​ ಶಾಖೆಗಳಲ್ಲಿ ಮೊಬಿಲಿಟಿ ಕಾರ್ಡ್​ಗಳನ್ನು ಪಡೆಯಬಹುದು. ಅಲ್ಲದೇ, ಇದನ್ನು ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ನಂತೆ ರಿಚಾರ್ಚ್​ ಮಾಡಿ ಉಪಯೋಗಿಸಬಹುದು.

ನಮ್ಮ ಮೆಟ್ರೋ
ನಮ್ಮ ಮೆಟ್ರೋ
author img

By

Published : Mar 30, 2023, 11:09 PM IST

ಬೆಂಗಳೂರು : ಒಂದು ದೇಶ, ಒಂದು ಕಾರ್ಡ್ ಮಾದರಿಯಲ್ಲಿ ನಗರದ ಎಲ್ಲ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾಮನ್ ಮೊಬಿಲಿಟಿ ಕಾರ್ಡ್ ಸೌಲಭ್ಯ ಪ್ರಾರಂಭವಾಗಿದೆ. ನಮ್ಮ ಮೆಟ್ರೋ ಸಂಸ್ಥೆ ರತ್ನಾಕರ ಬ್ಯಾಂಕ್ ಸಹಯೋಗದಲ್ಲಿ ಮೊಬಿಲಿಟಿ ಕಾರ್ಡ್ ಸೇವೆ ಆರಂಭಿಸಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಂತೆ ಮೊಬಿಲಿಟಿ ಕಾರ್ಡ್‍ಗಳನ್ನು ರಿಚಾರ್ಜ್ ಮಾಡಿ ಉಪಯೋಗಿಸಬಹುದಾಗಿದೆ.

6 ಲಕ್ಷಕ್ಕೂ ಹೆಚ್ಚು ಮೆಟ್ರೋ ರೈಲು ಬಳಕೆದಾರರಿಗೆ ಎನ್​ಸಿಎಂಸಿ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ. ಮೆಟ್ರೋ ನಿಲ್ದಾಣದಲ್ಲಿರುವ ಆರ್​ಬಿಎಲ್ ಬ್ಯಾಂಕ್ ಶಾಖೆಗಳಲ್ಲಿ ಈ ಕಾರ್ಡ್ ಪಡೆಯಬಹುದಾಗಿದೆ. ಕಾರ್ಡ್ ಬಳಕೆಗೆ ಮೆಟ್ರೋಗೆ ಆರ್.ಬಿ.ಎಲ್ ನಿಂದ ಪಿಒಎಸ್ ಸೌಲಭ್ಯವಿರಲಿದೆ. ಇದೆ ಕಾರ್ಡ್​ನಿಂದ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳಬಹುದಾಗಿದೆ.

ಶಾಪಿಂಗ್‍ಮಾಲ್ ಮತ್ತು ಟೋಲ್‍ಗಳಲ್ಲಿರುವ ಪಾರ್ಕಿಂಗ್ ಶುಲ್ಕವನ್ನು ಇದೇ ಕಾರ್ಡ್‍ಗಳಿಂದ ಪಾವತಿಸಬಹುದಾಗಿದೆ. ಮೊಬಿಲಿಟಿ ಕಾರ್ಡ್ ಆಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಈ ಕಾರ್ಡ್ ಉಪಯೋಗಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ರುಪೇ ಮೊಬಿಲಿಟಿ ಕಾರ್ಡ್ ಬಳಸಿ ಪಯಣಿಸಿದ ಮೋದಿ : ಶನಿವಾರ (ಮಾ. 25) ದಂದು ನಮ್ಮ ಮೆಟ್ರೋದ ಮೊದಲ ರೂಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)ನ್ನು ಬಳಸಿ ಪ್ರಧಾನಮಂತ್ರಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಸಾರ್ವಜನಿಕರಿಗೆ ಮಾರ್ಚ್ 30 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಆರ್.ಬಿ.ಎಲ್ ಬ್ಯಾಂಕ್ ರೂಪೇ ಎನ್​ಸಿಎಂಸಿ ಕಾರ್ಡ್‌ಗಳು ದೊರೆಯಲಿದೆ ಎಂದು ತಿಳಿಸಿತ್ತು.

ದಿಲ್ಲಿ ಮೆಟ್ರೋ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲೇ ಮೊಬಿಲಿಟಿ ಕಾರ್ಡ್‌ ಬಳಕೆಗೆ ಚಾಲನೆ ನೀಡಲಾಗಿದೆ. ಎನ್‌ಸಿಎಂಸಿ ಕಾರ್ಡ್‌ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿಯೂ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಜನರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಸಾರಿಗೆ ನೌಕರರ ವೇತನ ಶ್ರೇಣಿ ಶೇ.15ರಷ್ಟು ಹೆಚ್ಚಳ ಮಾಡಿ ಸರ್ಕಾರದ ಆದೇಶ

ಡೆಬಿಟ್, ಕ್ರೆಡಿಟ್​ ಕಾರ್ಡ್​ನಂತೆಯೇ ಬಳಕೆ : ಬಸ್‌, ಪಾರ್ಕಿಂಗ್‌, ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್‌ ಶಾಪಿಂಗ್‌ಗಳಲ್ಲಿ ಈ ಒಂದೇ ಕಾರ್ಡ್‌ ಮೂಲಕ ವ್ಯವಹರಿಸಬಹುದಾಗಿದೆ. ಬ್ಯಾಂಕ್‌ನಿಂದ ನೀಡಲಾಗುವ ರೂಪೇ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ನಂತೆಯೇ ಈ ಕಾರ್ಡ್‌ ಕೂಡ ಇರುತ್ತದೆ. ಈ ರೂಪೇ ಕಾರ್ಡ್​​ಅನ್ನು ಪಾಲುದಾರ ಬ್ಯಾಂಕ್‌ಗಳು ಡೆಬಿಟ್‌, ಕ್ರೆಡಿಟ್‌ ಅಥವಾ ಪ್ರಿಪೇಯ್ಡ್‌ ಕಾರ್ಡ್‌ ರೂಪದಲ್ಲಿ ನೀಡಬಹುದು. ಬಹಳ ದಿನಗಳಿಂದ‌ ನಮ್ಮ ಮೆಟ್ರೋದಲ್ಲಿ ಈ ಕಾರ್ಡ್ ಬಳಕೆಗೆ ತಯಾರಿ ನಡೆಸಲಾಗುತ್ತಿತ್ತು.‌ ಆದರೆ ನಾನಾ ಕಾರಣಗಳಿಂದ ಇದರ ಜಾರಿಗೆ ವಿಳಂಬವಾಗುತ್ತಲೇ ಇತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಶನಿವಾರ ಈ ಕಾರ್ಡ್ ಬಳಸಿ ಮೆಟ್ರೋ ಪ್ರಯಾಣವನ್ನು ಮಾಡಿದ್ದಾರೆ.

ಇದನ್ನೂ ಓದಿ : ಭಾನುವಾರದಿಂದ ಕೆಆರ್ ಪುರ - ವೈಟ್ ಫೀಲ್ಡ್ ಮೆಟ್ರೋ ಸೇವೆ ಪ್ರಾರಂಭ: ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆವರೆಗೆ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.